“ಏಕ್ ಅಸ್ಲ್ಯಾರ್ ಏಕ್ ನಾ” ಕೊ೦ಕಣಿ ಸಿನಿಮಾದ ಪ್ರಿಮಿಯರ್ ಶೋ ಉದ್ಘಾಟನೆ
ಉಡುಪಿ:ಸ೦ತೆಕಟ್ಟೆಯ ಆಶೀರ್ವಾದ ಸಿನಿಮಾ ಮ೦ದಿರದಲ್ಲಿ ಶುಕ್ರವಾರದ೦ದು “ಏಕ್ ಅಸ್ಲ್ಯಾರ್ ಏಕ್ ನಾ” ಕೊ೦ಕಣಿ ಸಿನಿಮಾದ ಪ್ರಿಮಿಯರ್ ಶೋ ಕಾರ್ಯಕ್ರಮವನ್ನು ಉಡುಪಿಯ ಖ್ಯಾತ ಉದ್ಯಮಿಯಾದ ಜರ್ರಿವಿನ್ಸೆ೦ಟ್ ಡಯಾಸ್ ರವರು ಉದ್ಘಾಟಿಸಿ ಶುಭಕೋರಿದರು.
ಉಡುಪಿಯ ಖ್ಯಾತ ಹೋಟೆಲ್ ಉದ್ಯಮಿಗಳಾದ ಭುವನೇ೦ದ್ರ ಕಿದಿಯೂರು, ಮ೦ಗಳೂರಿನ ಸಿಸಿಆರ್ ಬಿ ವೈಎಸ್ಪಿಯಾದ ವೆಲೇ೦ಟಿನ್ ಡಿಸೋಜ,ಮಸ್ಕತ್ ಉದ್ಯಮಿ ಯುವರಾಜ್ , ಚಲನ ಚಿತ್ರ ನಿರ್ಮಾಪಕರಾದ ಫ್ರ್ಯಾ೦ಕ್ ಫೆರ್ನಾ೦ಡಿಸ್ ತೊಟ್ಟ೦, ತೊಟ್ಟ೦,ಮುದರ೦ಗಡಿ, ಶಿರ್ವ ಚರ್ಚಿನ ಧರ್ಮಗುರುಗಳಾದ ಫಾದರ್ ಪಿಲಿಪ್ ನೇರಿ,ಫಾದರ್ ಅನಿಲ್, ಫಾದರ್ ಫ್ರಾನ್ಸಿಸ್ ಕರ್ನೇಲಿಯೋ ನಟ ಪ್ರವೀನ್ ಮತ್ತು ನಟಿ ಪ್ರಿಯ ಹಾಗೂ ಸಹನಟರುಗಳು ಈ ಸ೦ದರ್ಭದಲ್ಲಿ ಹಾಜರಿದ್ದರು.
ಇದೇಸ೦ದರ್ಭದಲ್ಲಿ ಮ೦ಗಳೂರಿನ ಸಿಸಿಆರ್ ಬಿಯ ನೂತನ ಡಿವೈಎಸ್ಪಿಯಾಗಿ ಭಡ್ತಿಹೊ೦ದಿದ ವೆಲೇ೦ಟಿನ್ ಡಿಸೋಜರವರಿಗೆ ಕೇಕ್ ಕಟ್ ಮಾಡುವುದರೊ೦ದಿಗೆ ಶುಭಕೋರಲಾಯಿತು.