Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ನಿಯಮ ಸರಳೀಕರಣಕ್ಕೆ ಸರ್ವ ಕ್ರಮ- ಕಾಗೋಡು

fullsizerenderಉಡುಪಿ:9/11 ಅರ್ಜಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಬೆಂಗಳೂರಿನಲ್ಲಿ ತಜ್ಞರ ಸಭೆಯನ್ನು ನಡೆಸಿ ಶೀಘ್ರದಲ್ಲಿ ಸುತ್ತೋಲೆಯನ್ನು ಕಳುಹಿಸಲಾಗುವುದು ಎಂದು ಕಂದಾಯ ಸಚಿವರ ಕಾಗೋಡು ತಿಮ್ಮಪ್ಪ ಹೇಳಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಸಚಿವರು, ಜನಪರ ನಿರ್ಧಾರ ಕೈಗೊಳ್ಳಲು ಪೂರಕವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂದಾಯ ಅದಾಲತ್ ಗಳನ್ನು ನಡೆಸಲಾಗಿದೆ. ನಮೂನೆ ೭ ಎ ಅರ್ಜಿಗಳ ವಿಲೇಗೆ ವಿಶೇಷ ಸಹಾಯಕ ಆಯುಕ್ತರ ನೇಮಕ ಮಾಡುವುದಾಗಿಯೂ ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಮಾಧಾನಕರ ಬೆಳವಣಿಗೆಯಾಗಿದ್ದು,ತಹಸೀಲ್ದಾರ್ ಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಿ, ಇಲಾಖೆ ಹೊರಡಿಸುವ ಸುತ್ತೋಲೆಗಳನ್ನು ಓದಿ ಅನುಷ್ಠಾನಕ್ಕೆ ತನ್ನಿ ಎಂದು ಸಚಿವರು ಹೇಳಿದರು.

ಐದು ಜಿಲ್ಲೆಗಳಲ್ಲಿ ೯/೧೧ ಗೆ ಸಂಬಂಧಿಸಿದಂತೆ ಹಾಗೂ ೯೪ ಸಿ ಹಾಗೂ ೯೪ ಸಿಸಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳ ಬಗ್ಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವರ ಗಮನ ಸೆಳೆದಾಗ. ನಿಯಮಾವಳಿ ಸರಳೀಕರಣಕ್ಕೆ ತಾವು ಒತ್ತು ನೀಡುತ್ತಿರುವುದಾಗಿ ಹೇಳಿದರು.
ಬಾಪೂಜಿ ಸೇವಾಕೇಂದ್ರಗಳಲ್ಲಿ ನೀಡುತ್ತಿರುವ ಸೇವೆಗಳ ಬಗ್ಗೆ ಎಲ್ಲ ಪಂಚಾಯತಿ ಮುಂಭಾಗದಲ್ಲಿ ಸವಿವರ ಬೋರ್ಡ್ ಹಾಕುವಂತೆಯೂ ಸಚಿವರು ಸೂಚಿಸಿದರು. ಭೂನ್ಯಾಯ ಮಂಡಳಿಯಲ್ಲಿ ಅರ್ಜಿ ವಿಲೇ ತುರ್ತಾಗಿ ನಿರ್ವಹಿಸಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕರನ್ನು ಈಗಿರುವ ಅಧಿಕಾರಿಗಳೊಂದಿಗೆ ಸೇರ್ಪಡೆಗೊಳಿಸಿ; ಇದರಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಒಂದು ತಿಂಗಳೊಳಗಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದರು.
೯೪ ಸಿ ಅಕ್ರಮ ಸಕ್ರಮ ಸಮಿತಿಗೆ ಕಾರ್ಯದರ್ಶಿಗಳನ್ನು ನೇಮಿಸಿ. ಕುಂದಾಪುರ, ಬೈಂದೂರು, ಉಡುಪಿ, ಬ್ರಹ್ಮಾವರದಲ್ಲಿ ವಿಶೇಷ ತಹಸೀಲ್ದಾರ್ ಗಳು ವಾರಕ್ಕೆರಡು ಸಭೆಗಳನ್ನು ನಡೆಸಲಿ ಎಂದ ಸಚಿವರು, ಗ್ರಾಮಕರಣಿಕ ಮತ್ತು ಪಿಡಿ‌ಒ ಗಳು ಮನೆ ಮಾರ್ಕ್ ಮಾಡಿ ವರದಿ ನೀಡಲಿ ಸಂಶಯವಿದ್ದಲ್ಲಿ ಮಾತ್ರ ತಹಸೀಲ್ದಾರ್ ಗಳು ಸ್ಥಳ ಪರಿಶೀಲನೆ ನಡೆಸಲಿ ಎಂದು ಸಭೆಯಲ್ಲಿ ಕಂದಾಯ ಸಚಿವರು ಸೂಚನೆ ನೀಡಿದರು.

ಅರಣ್ಯ ಹಕ್ಕು ಕಾಯ್ದೆಯ ಪ್ರಗತಿ ವಿವರ ಪರಿಶೀಲಿಸಿದ ಸಚಿವರು, ಸರ್ಕಾರದ ಆದೇಶದಂತೆ ೧೫೮೯ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಲು ಸಹಾಯಕ ಆಯುಕ್ತರಾಗಿ ಸೂಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ೨೩೭ ಅರಣ್ಯ ಹಕ್ಕು ಸಮಿತಿಯನ್ನು ರಚಿಸಲಾಗಿದೆ.

ರುದ್ರಭೂಮಿಗೆ ಸ್ಥಳ ನೀಡುವಂತೆ, ಜಿಲ್ಲೆಯಲ್ಲಿ ಪೋಡಿ ಪ್ರಕರಣಗಳ ವಿಲೇಗೆ ಸರ್ವೇಯರ್‌ಗಳನ್ನು ಇನ್ನಷ್ಟು ಹೆಚ್ಚಿಗೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಂದಾಯ ಸಚಿವರ ಗಮನ ಸೆಳೆದರು.

ಆರ್ ಆರ್ ಟಿ ತಿದ್ದುಪಡಿಯನ್ನು ಇನ್ನಷ್ಟು ಮಾಡುವಂತೆ, ಪೋಡಿ ಮುಕ್ತ ಗ್ರಾಮಗಳನ್ನು ಸಂಪೂರ್ಣಗೊಳಿಸುವಂತೆ ಸಚಿವರು ಡಿಡಿ‌ಎಲ್‌ಆರ್ ಗೆ ಸೂಚಿಸಿದರು.
ಕಾಪು ಪ್ರದೇಶದಲ್ಲಿ ಕೈಗಾರಿಕೆಗಳಿಗೆಂದು ಭೂಮಿಯನ್ನು ಖರೀದಿಸಿ ಈಗ ಹೆಚ್ಚಿನ ಬೆಲೆಗೆ ಭೂಮಿಯನ್ನು ಮಾರುತ್ತಿದ್ದಾರೆಂದು ಶಾಸಕ ಸೊರಕೆಯವರು ಸಚಿವರ ಗಮನ ಸೆಳೆದಾಗ, ಸರ್ಕಾರ ಸದುದ್ದೇಶಕ್ಕೆ ನೀಡಿದ ಭೂಮಿಯನ್ನು ವ್ಯಾಪಾರ ಮಾಡಿದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು. ಹೊಸ ಕೈಗಾರಿಕಾ ನೀತಿಯಂತೆ ಭೂಮಿಯನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ವಿಸ್ತೃತ ವರದಿ ತಯಾರಿಸಿ ಅಂದಾಜು ಪಟ್ಟಿ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ನೆರವಾಗುವೆ ಎಂದ ಸಚಿವರು, ಬಾಪೂಜಿ ಸೇವಾ ಕೇಂದ್ರದಲ್ಲೇ ಅಂತ್ಯ ಸಂಸ್ಕಾರ ನಿಧಿ ನೀಡುವ ಬಗ್ಗೆ ಪರಿಶೀಲನೆ ನಡೆಸುವೆ ಎಂದು ಸಭೆಯಲ್ಲಿ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ , ಜಿ.ಪಂ.ಸಿ‌ಇ‌ಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಪ್ರಭಾರ ಉಪ ವಿಭಾಗಾಧಿಕಾರಿ ಯೊಗೇಶ್ವರ್ , ಅರಣ್ಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

No Comments

Leave A Comment