Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ಪ್ರಯಾಣಿಕರ ಸುರಕ್ಷೆ: ವಿಮಾನದ ಫೋಟೋ, ಸಲ್ಫಿ ತೆಗೆಯುವಂತಿಲ್ಲ

selfie-dgcaಹೊಸದಿಲ್ಲಿ : ವಿಮಾನ ಹತ್ತುವಾಗ ಮತ್ತು ಇಳಿಯುವಾಗ ಪ್ರಯಾಣಿಕರು ಅಥವಾ ವಿಮಾನದ ಚಾಲಕ ಸಿಬಂದಿಗಳು ವಿಮಾನದ ಫೋಟೋ ಅಥವಾ ಸೆಲ್ಫಿ ತೆಗೆಯಕೂಡದೆಂದು ನಾಗರಿಕ ವಾಯುಯಾನ ನಿರ್ದೇಶನಾಲಯ ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಲ್ಲಿ ಅಧಿಸೂಚನೆ ಹೊರಡಿಸಿದೆ.

ಮಾತ್ರವಲ್ಲದೆ ವಿಮಾನ ಹಾರಾಟದ ಯಾವುದೇ ಹಂತದಲ್ಲಿ ಚಾಲಕ ಸಿಬಂದಿಗಳು ಫೋಟೋಗ್ರಫಿಯಲ್ಲಿ ಶಾಮಿಲಾಗುವುದನ್ನು ನಿರ್ದೇಶನಾಲಯವು ನಿಷೇಧಿಸಿದೆ.

ವಿಮಾನದಲ್ಲಿ ಪ್ರಯಾಣಿಕರು ಹಾಗೂ ಚಾಲಕ ಸಿಬಂದಿಗಳು ಈಚಿನ ದಿನಗಳಲ್ಲಿ ಸೆಲ್ಫಿ ಸಂಸ್ಕೃತಿಯಲ್ಲಿ ಶಾಮೀಲಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ ಎಂದು ನಿರ್ದೇಶನಾಲಯವು ಹೇಳಿದೆ.

ಆರ್‌ಟಿಐ ಅರ್ಜಿದಾರರೊಬ್ಬರು ಈಚೆಗೆ ಕಾಕ್‌ ಪಿಟ್‌ನಲ್ಲಿ  ಫೋಟೋ ತೆಗೆಯುವುದು,  ವಿಶೇಷವಾಗಿ ಸೆಲ್ಫಿ ತೆಗೆಯುವುದರ ವಿರುದ್ಧ  ವಿಮಾನ ಚಾಲಕ ಸಿಬಂದಿಗಳಲ್ಲಿ ಹಾಗೂ ಪ್ರಯಾಣಿರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಡಿಜಿಸಿಎಗೆ ಮನವರಿಕೆ ಮಾಡಿದ್ದರು.

No Comments

Leave A Comment