Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ನೇಶನಲ್ ನ್ಯುರೋ ಸೈನ್ಸ್ ಮಿಷನ್ ಉಡುಪಿ – ಮಣಿಪಾಲ-ಆದರ್ಶ ಆಸ್ಪತ್ರೆ ಉಡುಪಿ ನ್ಯುರೋವಸ್ಕೋನ್ 2016ಸಮಾವೇಶ

dsc_0174ಉಡುಪಿ:ಸೆರೆಬ್ರೊ ವ್ಯಾಸ್‌ಕುಲಾರ್ ಸೊಸೈಟಿ ಆಫ್ ಇಂಡಿಯಾ ನ್ಯುರೋವಸ್ಕೋನ್ 2016, 16ನೇ ರಾಷ್ಟ್ರೀಯ ಸಮಾವೇಶವನ್ನು ಅಯೋಜಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಈ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿಯನ್ನು ಕರೆದು ಈ ಸಮಾವೇಶದ ಬಗ್ಗೆ ವಿಸ್ತ್ರತ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಸಮಾವೇಶದ ಅಧ್ಯಕ್ಷರು : ಪ್ರೋ. ಎ. ರಾಜಾ ಖ್ಯಾತ ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು.
ಸಂಘಟನಾ ಕಾರ್ಯದರ್ಶಿ: ಡಾ| ಜಸ್ ಪ್ರೀತ್ ಸಿಂಗ್ ದಿಲ್ ನ್ಯುರೋಸರ್ಜನ್.
ಸಂಘಟನಾ ಜೊತೆ ಕಾರ್ಯದರ್ಶಿ: ಡಾ| ಗಣೇಶ್ ಕುಮಾರ್ ಮನೋಹರನ್ ನ್ಯುರೋಸರ್ಜನ್.
ಸಮಾವೇಶದ ಪೋಷಕರು : ಡಾ| ಜಿ. ಯಸ್. ಚಂದ್ರಶೇಖರ್ ವೈದ್ಯಕೀಯ ನಿರ್ದೇಶಕರು ಆದರ್ಶ ಆಸ್ಪತ್ರೆ, ಉಡುಪಿ.

ನ್ಯಾಶನಲ್ ನ್ಯುರೋ ಸೈನ್ಸ್ ಮಿಷನ್, ಮಣಿಪಾಲ ಇದರ ಚೇರ್‍ಮಮನ್ ಹಾಗೂ ಖ್ಯಾತ ನರರೊಗ ಶಸ್ತ್ರ ಚಿಕಿತ್ಸಾ ತಜ್ಞರಾದ ಪ್ರೋ. ಎ. ರಾಜಾ ಹಾಗೂ ಆದರ್ಶ ಆಸ್ಪತ್ರೆ, ಉಡುಪಿ ಇವರುಗಳು ಜಂಟಿಯಾಗಿ ಆಯೋಜಿಸಿದ ೧೬ನೇ ವಾರ್ಷಿಕ ಸಮಾವೇಶ ಸೆರೆಬ್ರೊ ವ್ಯಾಸ್‌ಕ್ಯುಲಾರ್ ಸೊಸೈಟಿ ಆಫ್, ಇಂಡಿಯಾ – ನ್ಯುರೋವಸ್ಕೋನ್ ೨೦೧೬ ಈ ಸಮಾವೇಶದಲ್ಲಿ ದೇಶ ಹಾಗೂ ವಿದೇಶಗಳ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು ಪ್ರತಿ ವರ್ಷ ಒಟ್ಟು ಸೇರಿ ನರರೋಗ ಶಸ್ತ್ರ ಚಿಕಿತ್ಸಾ ವಿಭಾಗಗಳಲ್ಲಿ ಆದ ಹೊಸ ಹೊಸ ಅವಿಷ್ಕಾರಗಳು, ಸಂಶೋಧನೆಗಳು ಹಾಗೂ ತಂತ್ರಜ್ಞಾನದ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸುವರು. ಈ ಸಮಾವೇಶವನ್ನು ಇದೇ ತಿಂಗಳ 17 ಮತ್ತು 18ರಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಹೋಟೆಲ್ ಕಂಟ್ರಿ ಇನ್ ಮತ್ತು ಸೂಟ್ಸ್ ಇಲ್ಲಿ ಆಯೋಜಿಸಲಾಗಿದೆ.

ಈ ಬಾರಿ ಅಂತರಾಷ್ಟ್ರೀಯ ನರರೋಗ ತಜ್ಞರಾದ ಪ್ರೋ. ಜುಹಾ ಹರ್ನೆಸ್‌ನಿಮಿ ಫಿನ್‌ಲ್ಯಾಂಡ್ ಹಾಗೂ ಪ್ರೋ ಹಿರೇಟೋಶಿ ಸಾನೋ ಜಪಾನ್ ಇವರುಗಳು ನರರೋಗ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಇತ್ತೀಚೆಗೆ ಅವಿಷ್ಕರಿಸಲ್ಪಟ್ಟು ಹೊಸ ಹೊಸ ವಿಚಾರಗಳು, ಸಂಶೋಧನೆಗಳು ಹಾಗೂ ತಂತ್ರಜ್ಞಾನದ ಬಗ್ಗೆ ಉಪನ್ಯಾಸ ಹಾಗೂ ವಿಸ್ತ್ರತ ಚರ್ಚೆಗಳನ್ನು ನಡೆಸಲಿರುವರು. ಇವರು ಅನ್ಯುರಿಸಂ ಅಪರೇಶನ್‌ಗಳಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿದ್ದು ಅಪಾರ ಸಂಖ್ಯೆಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ಗಿನ್ನೆಸ್ ದಾಖಲೆಗಳಲ್ಲಿ ಸೇರಿರುತ್ತಾರೆ. ಅಲ್ಲದೆ, ಇವರ ಜತೆಯಲ್ಲಿ ಇಂಗ್ಲೆಂಡಿನ ಖ್ಯಾತ ಇಂಟರ್‌ವೆನ್ಶ್‌ನೆಲ್ ನ್ಯುರೋ ಸರ್ಜನ್ ಡಾ| ಅನಿಲ್ ಗೋಲ್ಕರ್‌ರವರು ಉಪನ್ಯಾಸ ನೀಡಲಿರುವರು.

ಈ ಕಾರ್‍ಯಕ್ರಮವನ್ನು ಸನ್ಮಾನ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಪ್ರಮೋದ್ ಮಧ್ವರಾಜ್‌ರವರು ಉದ್ಘಾಟಿಸಲಿರುವರು.
ದೇಶದಲ್ಲಿ ಸಾಮಾನ್ಯವಾಗಿ ಮೆಡಿಕಲ್ ಕಾಲೇಜುಗಳನ್ನು ಹೊರುತು ಪಡಿಸಿದರೆ ಖಾಸಗಿ ಆಸ್ಪತ್ರೆ, ಇಂತಹ ದೊಡ್ಡ ಮಟ್ಟದ ನ್ಯುರೋ ಸರ್ಜರಿ ಸಮಾವೇಶವನ್ನು ಆಯೋಜಿಸುವುದು ಬಹುಶಃ ಪ್ರಥಮ ಬಾರಿಯಾಗಿರುತ್ತದೆ ಎಂದು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ. ಯಸ್. ಚಂದ್ರಶೇಖರ್‌ರವರು ಅಭಿಪ್ರಾಯ ಪಟ್ಟರು.

ನ್ಯಾಶನಲ್ ನ್ಯುರೋ ಸೈನ್ಸ್ ಅಧ್ಯಕ್ಷರಾದ ಪ್ರೋ. ಎ. ರಾಜಾರವರು ನಾನು ಕಳೆದ ೬ ವರುಷದಲ್ಲಿ ಅತ್ಯಂತ ಕ್ಲಿಷ್ಟಕರವಾದ ಸುಮಾರು ೨೦೦೦ ನ್ಯುರೋ ಸರ್ಜರಿಗಳನ್ನು ಈ ಭಾಗದಲ್ಲಿ ಮಾಡಿದ್ದು ಇಂತಹ ಒಂದು ಸಮಾವೇಶವನ್ನು ನಡೆಸಲು ನನಗೆ ಪ್ರೇರಣೆಯಾಗಿದೆ. ಈ ಸಮಾವೇಶದಿಂದ ನಮ್ಮ ದೇಶದ ನ್ಯುರೋ ಸರ್ಜನ್‌ಗಳಿಗೆ ಉಪಯುಕ್ತ ಮಾಹಿತಿ ಜೊತೆಗೆ ಅವರ ಜ್ಞಾನಾಭಿವೃದ್ಧಿಗೆ ಸಹಕಾರಯಾಗಲಿದೆ ಎಂದು ತಿಳಿಸಿದರು.

ಈ ಸಮಾವೇಶ ಸಂಘಟನಾ ಕಾರ್ಯದರ್ಶಿ ಖ್ಯಾತ ನ್ಯುರೋ ಸರ್ಜನ್ ಡಾ| ಜಸ್ ಪ್ರೀತ್ ಸಿಂಗ್ ದಿಲ್‌ರವರು ಕರಾವಳಿ ಭಾಗದಲ್ಲಿ ಅದರಲ್ಲೂ ಉಡುಪಿ ಶ್ರೀಕೃಷ್ಣನ ನೆಲೆಬೀಡಿನಲ್ಲಿ ಇಂತಹ ಅಂತಾರಾಷ್ಟ್ರೀಯ ನ್ಯುರೋ ಸಮಾವೇಶ ಅಯೋಜಿಸಿದ್ದು ಅತ್ಯಂತ ಸಂತೋಷದಾಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

No Comments

Leave A Comment