Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಈದ್‌ ಬಳಿಕ ಬಾಂಗ್ಲಾದ ಢಾಕಾ ರಸ್ತೆಗಳಲ್ಲಿ ಹರಿಯಿತು ರಕ್ತದ ನದಿ !

dhakaಢಾಕಾ : ಈದ್‌ ಅಲ್‌ ಅಝಾ ಹಬ್ಬದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರಾಣಿ ಬಲಿ ನೀಡಲಾದ ಬಳಿಕ, ಒಂದು ಕೋಟಿ ಜನಸಂಖ್ಯೆ ಇರುವ ಈ ಮಹಾನಗರದಲ್ಲಿ  ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲೆಲ್ಲ ರಕ್ತದ ನದಿಯೇ ಹರಿದಿರುವ ದೃಶ್ಯ ಕಂಡು ಬಂದಿದೆ.

ಪ್ರಾಣಿ ಬಲಿ ನೀಡುವುದಕ್ಕೆ ಢಾಕಾದ ಅಧಿಕಾರಿಗಳು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿದ್ದರು. ಆದರೆ ಮಳೆಯ ಕಾರಣ ಜನರಿಗೆ ಆ ನಿರ್ದಿಷ್ಟ ಸ್ಥಳಗಳನ್ನು ಬಳಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರು ತಮ್ಮ ನಿವಾಸಗಳ ಪಕ್ಕದಲ್ಲಿರುವ ಗ್ಯಾರೇಜುಗಳು, ಪಾರ್ಕಿಂಗ್‌ ಲಾಟ್‌ಗಳು, ಬಯಲು ಪ್ರದೇಶಗಳು ಮುಂತಾಗಿ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಪ್ರಾಣಿ ಹತ್ಯೆ ಕೈಗೊಂಡರು. ಇದನ್ನು ಅನುಸರಿಸಿ ಮಹಾನಗರದ ಆದ್ಯಂತ ಜಡಿಮಳೆ ಸುರಿಯಿತು. ಮಳೆಯ ನೀರಿನೊಂದಿಗೆ ಪ್ರಾಣಿಗಳ ರಕ್ತ ಬೆರೆತು ರಸ್ತೆ ತುಂಬ ರಕ್ತದ ನದಿ ಹರಿಯುತ್ತಿರುವಂತೆ ಕಂಡು ಬಂತು !

ಪ್ರವಾದಿ ಇಬ್ರಾಹಿಂ ಅವರ ತ್ಯಾಗ  ಹಾಗೂ ಬಲಿದಾನದ ಸಂಕೇತವಾಗಿ ಮುಸ್ಲಿಮರು ಈದ್‌ ಅಲ್‌ ಅಝಾ ಹಬ್ಬವನ್ನು ಆಚರಿಸುವಾಗ ಕುರಿ, ಆಡು, ದನಗಳನ್ನು ಬಲಿ ನೀಡುವುದು ವಾಡಿಕೆ. ಹೀಗೆ ಬಲಿ ನೀಡಲ್ಪಟ್ಟ ಪ್ರಾಣಿಗಳ ಮಾಂಸವನ್ನು ಕುಟುಂಬಿಕರು, ಇಷ್ಟ ಮಿತ್ರರು ಹಾಗೂ ಬಡವರೊಂದಿಗೆ ಹಂಚಿಕೊಳ್ಳುವ ಕ್ರಮ ಇದೆ. ಆ ಮೂಲಕ ಇತರರೊಂದಿಗೆ ಧಾರಾಳತನ ತೋರುವುದು ಹಾಗೂ ಸಾಮರಸ್ಯವನ್ನು ಸಾಧಿಸುವುದು ಉದ್ದೇಶವಾಗಿದೆ.

ಢಾಕಾದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ಒಳಚರಂಡಿ ವ್ಯವಸ್ಥೆ ಕಳಪೆಯಾಗಿರುವುದರಿಂದ ಮಳೆಗಾಲದಲ್ಲಿ ಇಲ್ಲಿ ಯಾವಾಗಲೂ ರಸ್ತೆಗಳಲ್ಲೇ ನೀರು ತುಂಬಿ ಹರಿಯುತ್ತದೆ.

 

No Comments

Leave A Comment