ಲಿಬಿಯಾ;ವರ್ಷದ ಬಳಿಕ ಕಿಡ್ನಾಪ್ ಆದ ಮತ್ತಿಬ್ಬರು ಪ್ರಾಧ್ಯಾಪಕರ ರಕ್ಷಣೆ
ನವದೆಹಲಿ:ಕಳೆದ ವರ್ಷ ಲಿಬಿಯಾದಲ್ಲಿ ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಮತ್ತಿಬ್ಬರು ಭಾರತೀಯರನ್ನು ಸುಮಾರು 14 ತಿಂಗಳ ಬಳಿಕ ಬಿಡುಗಡೆಗೊಳಿಸಿದ್ದು, ಅವರನ್ನು ರಕ್ಷಿಸಿರೋದಾಗಿ ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.
2015ರ ಜುಲೈ 29ರಂದು ಲಿಬಿಯಾದ ಸಿರ್ಟೆ ವಿವಿಯಿಂದ ಐಸಿಸ್ ಉಗ್ರರು ಇಬ್ಬರು ಪ್ರಾಧ್ಯಾಪಕರನ್ನು ಅಪಹರಿಸಿದ್ದರು. ಇದೀಗ ಆಂಧ್ರಪ್ರದೇಶದ ಗೋಪಾಲಕೃಷ್ಣ ಹಾಗೂ ತೆಲಂಗಾಣದ ಸಿ.ಬಲರಾಮ್ ಕಿಶನ್ ಅವರನ್ನು ಐಸಿಸ್ ಉಗ್ರರ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಕಳೆದ ವರ್ಷ ಲಿಬಿಯಾದ ಸಿರ್ಟೆ ಯೂನಿರ್ವಸಿಟಿಯಿಂದ ಕನ್ನಡಿಗರಾದ ರಾಯಚೂರಿನ ಲಕ್ಷ್ಮಿಕಾಂತ್ , ಬೆಂಗಳೂರಿನ ವಿಜಯ ಕುಮಾರ್ ಹಾಗೂ ಆಂಧ್ರಪ್ರದೇಶದ ಗೋಪಾಲಕೃಷ್ಣ ಹಾಗೂ ತೆಲಂಗಾಣದ ಸಿ.ಬಲರಾಮ್ ಕಿಶನ್ ಅವರನ್ನು ಐಸಿಸ್ ಉಗ್ರರು ಅಪಹರಿಸಿದ್ದರು. ಆದರೆ ರಾಯಚೂರಿನ ಲಕ್ಷ್ಮಿಕಾಂತ್ , ಬೆಂಗಳೂರಿನ ವಿಜಯ ಕುಮಾರ್ ಐಸಿಸ್ ಉಗ್ರರು ಬಿಡುಗಡೆಗೊಳಿಸಿದ್ದು, ಉಳಿದಿಬ್ಬರು ಪ್ರಾಧ್ಯಾಪಕರನ್ನು ಐಸಿಸ್ ಉಗ್ರರು ವಶದಲ್ಲಿಟ್ಟುಕೊಂಡಿದ್ದರು.