Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲಬುರ್ಗಿಯ ತಾಂತ್ರಿಕ ಸಂಶೋಧಕ ರೂಪಂದಾಸ್‌ರಿಂದ ಸಂಶೋಧನೆ ಹೆಲ್ಮೆಟ್‌ಗೂ ಬಂತು ಎಸಿ, ಇಂಡಿಕೇಟರ್!

12klb-helmet1ಕಲಬುರ್ಗಿ: ತಾಪಮಾನ ಹೆಚ್ಚು ಎಂಬ ಕಾರಣಕ್ಕೆ ಹೆಲ್ಮೆಟ್‌ ಧರಿಸುವುದನ್ನು ಕೈಬಿಡುವ ಬೈಕ್ ಸವಾರರಿಗಾಗಿ ನಗರದ ತಾಂತ್ರಿಕ ಸಂಶೋಧಕರೊಬ್ಬರು ಹವಾನಿಯಂತ್ರಕ (ಎ.ಸಿ), ಇಂಡಿಕೇಟರ್‌ ವ್ಯವಸ್ಥೆ ಇರುವ ಹೆಲ್ಮೆಟ್‌ ಸಿದ್ಧಪಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಬಿಹಾರ ಮೂಲದ ರೂಪಂದಾಸ್ ಎ.ಸಿ ಹೆಲ್ಮೆಟ್ ರೂವಾರಿ. ಪ್ರೌಢಶಾಲಾ ಶಿಕ್ಷಣವನ್ನು ಬಿಹಾರದಲ್ಲಿ ಪೂರೈಸಿ, ಪಿಯುಸಿ ಹಾಗೂ ಎಂಜಿನಿಯರಿಂಗ್ ಶಿಕ್ಷಣವನ್ನು ಕಲಬುರ್ಗಿಯಲ್ಲಿ ಪಡೆದಿದ್ದಾರೆ. ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಕಲಬುರ್ಗಿಯ ಜನರು ಬಿಸಿಲಿನ ನೆಪವೊಡ್ಡಿ ಅದರಿಂದ ದೂರ ಉಳಿಯುತ್ತಿರುವುದನ್ನು ಮನಗಂಡ ಅವರು ಈ ಹೆಲ್ಮೆಟ್ ಸಿದ್ಧಪಡಿಸಿದ್ದಾರೆ.

ಇಂಟೆಲ್ ಎಡಿಷನ್‌ನ ಸಾಫ್ಟ್‌ವೇರ್,  ಸೆನ್ಸರ್, 12 ವೋಲ್ಟ್ ಬ್ಯಾಟರಿ, ಹವಾನಿಯಂತ್ರಕದಂತೆ ಕೆಲಸ ನಿರ್ವಹಿಸುವ ಸಾಧನ (ಪೆಲ್ಟಿಯರ್ ಮಾಡುಲ್‌), ವೈ–ಫೈ, 3ಜಿ ಮೂಲಕ ಮೊಬೈಲ್‌ಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಈ ಹೆಲ್ಮೆಟ್‌ನಲ್ಲಿದೆ. ಎ.ಸಿ ಅಳವಡಿಕೆ ಯಿಂದ ಸಾಮಾನ್ಯ ಹೆಲ್ಮೆಟ್‌ಗಿಂತ ಸುಮಾರು 800 ಗ್ರಾಂ ತೂಕ ಹೆಚ್ಚಾಗ ಲಿದ್ದು, ಅಂದಾಜು ₹2 ಸಾವಿರದಲ್ಲಿ ಎ.ಸಿ ಹೆಲ್ಮೆಟ್ ಲಭ್ಯವಾಗಲಿದೆ.

‘ಸರ್ಕಿಟ್‌ಗೆ ವೈ–ಫೈ ಲಿಂಕ್ ಮಾಡಿ, ಅದನ್ನು ಸವಾರನ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸುವ ವ್ಯವಸ್ಥೆ ಇದರಲ್ಲಿದೆ. ಇಂಡಿಕೇಟರ್‌ ಅನ್ನೂ ಅಳವಡಿಸಲಾ ಗಿದ್ದು, ಸವಾರ ಎಡ ಅಥವಾ ಬಲ ಭಾಗಕ್ಕೆ ತಿರುಗಿದರೆ ಇಂಡಿಕೇಟರ್‌ ಸ್ವಯಂಚಾಲಿತವಾಗಿ ಕೆಲಸ ನಿರ್ವಹಿ ಸುತ್ತದೆ. ಬೈಕ್ ಚಾಲನೆ ಮಾಡುವ ಸಂದರ್ಭದಲ್ಲಿ ಅಪಘಾತವಾದರೆ ಸೆನ್ಸರ್ ಮತ್ತು ಮೊಬೈಲ್ ಮೂಲಕ ಸವಾರ ಸೂಚಿಸಿರುವ ಮೊಬೈಲ್‌ಗೆ ಸಂದೇಶ ತಲುಪುತ್ತದೆ. ಅಷ್ಟೇ ಅಲ್ಲ ಆತ ಬಳಸುವ ವಾಟ್ಸ್‌ಆ್ಯಪ್, ಜಿ–ಮೇಲ್ ಹಾಗೂ ಫೇಸ್‌ಬುಕ್‌ಗೂ ಸಂದೇಶ ರವಾನೆಯಾ ಗುತ್ತದೆ. ಇದರಿಂದ ಅಪಘಾತದ ಸಂದರ್ಭದಲ್ಲಿ ಬೈಕ್‌ ಸವಾರನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿದೆ’ ಎಂದು ಎ.ಸಿ ಹೆಲ್ಮೆಟ್‌ ಸಿದ್ಧಪಡಿಸಿರುವ ರೂಪಂದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಲ್ಮೆಟ್‌ನಲ್ಲಿ ಅಳವಡಿಸಿರುವ ಎ.ಸಿಯು ವಾತಾವರಣದಲ್ಲಿನ ಉಷ್ಣಾಂಶ ಆಧರಿಸಿ ಸ್ವಯಂ ನಿಯಂತ್ರಣ ಮಾಡಿಕೊಳ್ಳುತ್ತದೆ. ಇದರಿಂದ ಎಷ್ಟೇ ಬಿಸಿಲಿದ್ದರೂ ಇದನ್ನು ಧರಿಸುವ ಸವಾರರು ನಿರಾತಂಕವಾಗಿ ಚಾಲನೆ ಮಾಡಬಹುದು’ ಎಂದು ಹೇಳುತ್ತಾರೆ.

‘ಎ.ಸಿ ವ್ಯವಸ್ಥೆಯುಳ್ಳ ಹೆಲ್ಮೆಟ್ ತಯಾರಿಸಲು ಹೊರಟಾಗ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಯಿತು. ಆದಾಗ್ಯೂ, ಅತ್ಯಂತ ಕಡಿಮೆ ಖರ್ಚು ಮತ್ತು ತೂಕವಿರುವ ಹೆಲ್ಮೆಟ್ ಸಿದ್ಧಪಡಿಸಿದ್ದೇನೆ. ಹೈದರಾಬಾದ್‌ ಮೂಲದ ಹೈದರಾ ಬಾದ್ ಆ್ಯಂಜೆಲ್ಸ್ (ಎಚ್‌ಎ) ಸಂಸ್ಥೆಯು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದು, ಹೆಲ್ಮೆಟ್ ತಯಾರಿಕಾ ಕಂಪೆನಿ ಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸ ಲಾಗುವುದು’ ಎನ್ನುತ್ತಾರೆ ರೂಪಂದಾಸ್.

‘ಸರ್ಕಿಟ್, ಬ್ಯಾಟರಿ, ಇಂಡಿಕೇಟರ್, ಸೆನ್ಸರ್ ಸೇರಿದಂತೆ ಎಲ್ಲ ವಸ್ತುಗಳನ್ನು ಹೆಲ್ಮೆಟ್‌ನ ಒಳಭಾಗದಲ್ಲಿ ಅಳವಡಿಸುವು ದರಿಂದ ಸಾಮಾನ್ಯ ಹೆಲ್ಮೆಟ್‌ಗೂ ಇದಕ್ಕೂ ಅಂತಹ ವ್ಯತ್ಯಾಸ ಕಂಡು ಬರು ವುದಿಲ್ಲ’ ಎಂಬುದು ಅವರ ಅಭಿಪ್ರಾಯ.

No Comments

Leave A Comment