Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ಆಸ್ತಿ ಆಸೆಗೆ ಮದುವೆ– ಗಂಡನಿಂದ ಕಿರುಕುಳ ಗಂಡನಿಗಾಗಿ 17 ದಿನಗಳಿಂದ ಧರಣಿ

Karunashree stage a dharani satyagraha demanding to her respected parent-in-Laws for shelter with them in the said house, her husband K P Murali is absconding form the said house and totally ignored his matrimonial duties, in front of Matrimonial House at Vijayanagara in Mysuru on Tuesday. -Photo by Savitha. B R

ಮೈಸೂರು: ‘ನ್ಯಾಯ ಸಿಗುವವರೆಗೆ ಇಲ್ಲಿಂದ ಏಳಲ್ಲ. ನನ್ನ ಜೀವನ ಹಾಳಾಗಿದೆ. ಹಿಂದೂ ಸಂಸ್ಕೃತಿಯಂತೆ ಒಂದೇ ಜೀವನ, ಒಂದೇ ಮದುವೆ, ಒಬ್ಬನೇ ಗಂಡ. ಹೀಗಾಗಿ, ಗಂಡನ ಜತೆಗೆ ಬಾಳಬೇಕು. ಅತ್ತೆ, ಮಾವರ ಸೇವೆ ಮಾಡಬೇಕೆಂಬ ಆಸೆಯಷ್ಟೆ. ಪೊಲೀಸ್‌ ಠಾಣೆ, ಕೋರ್ಟ್‌ ಎಂದು ಅಲೆಯುವುದು ಬೇಕಿಲ್ಲ. ಅವರನ್ನು ಜೈಲಿಗೆ ಕಳುಹಿಸುವ ಉದ್ದೇಶವೂ ಇಲ್ಲ’ ಎಂದು ಹೇಳಿ ಸುಮ್ಮನಾದರು ಕರುಣಶ್ರೀ.

ವಿಜಯನಗರ 3ನೇ ಹಂತದ, 3ನೇ ಮೇನ್‌, 16ನೇ ಕ್ರಾಸಿನ 501ನೇ ‘ವಶಿಷ್ಠ ನಿಲಯ’ ಎಂಬ ಮನೆಯ ಕಾಂಪೌಂಡ್‌ ಒಳಗೆ 17 ದಿನಗಳಿಂದ ಅವರು ಧರಣಿ ಕುಳಿತಿದ್ದಾರೆ. ಅವರೊಂದಿಗೆ ಅವರ ತಾಯಿ ಕೆ.ಪದ್ಮಾ ಹಾಗೂ ಸಂಬಂಧಿಕರು ಇದ್ದಾರೆ.

‘ಆಗಸ್ಟ್ 28ರಿಂದ ಮಗಳು ಧರಣಿ ಕುಳಿತಿದ್ದಾಳೆ. ಗೇಟಿಗೆ ಬೀಗ ಹಾಕಿರುವುದರಿಂದ ಕಾಂಪೌಂಡ್‌ ಒಳಗೆ ನೆಗೆಯಬೇಕಿತ್ತು. ಹೀಗೆ ಭಾನುವಾರ ನೆಗೆಯುವಾಗ ಬಿದ್ದು ತಲೆಗೆ ಪೆಟ್ಟಾಗಿದೆ. ಸೋಮವಾರ ಪೊಲೀಸರಿಗೆ ಮನವಿ ಮಾಡಿಕೊಂಡೆವು. ಇವತ್ತು (ಮಂಗಳವಾರ) ಗೇಟು ತೆಗೆಸಿದ್ದಾರೆ’ ಎಂದು ಕಣ್ಣೀರು ಹಾಕಿದರು ಪದ್ಮಾ.

‘ಚಳಿ, ಮಳೆ, ಗಾಳಿ ಎನ್ನದೆ ರಾತ್ರಿ ಸೊಳ್ಳೆ ಕಡಿಸಿಕೊಂಡು ಮಗಳೊಂದಿಗೆ ಕಳೆದಿರುವೆ. ಶತಾಯಗತಾಯ ಗಂಡನ ಜತೆಗೆ ಬಾಳಬೇಕೆಂದು ಕಾಯುತ್ತಿದ್ದಾಳೆ’ ಎಂದು ಶಿಕ್ಷಕಿಯಾಗಿ ನಿವೃತ್ತಿಯಾಗಿರುವ ಪದ್ಮಾ ಕಣ್ಣೀರು ಒರೆಸಿಕೊಂಡು ಹೇಳಿದರು.

ಹಿನ್ನೆಲೆ: ‘2011ರಲ್ಲಿ ಪಿರಿಯಾಪಟ್ಟಣದ ಕೆ.ಎಂ.ಫಾಲಾಕ್ಷ, ಪ್ರೇಮಾ ಹಾಗೂ ಅವರ ಪುತ್ರ ಮುರಳಿ ನನ್ನನ್ನು ನೋಡಲು ಬಂದಿದ್ದರು. ಆಗಲೇ ಆಸ್ತಿ ಪಾಲು ಕುರಿತು ಮಾತನಾಡಿದರು. ಮದುವೆ ಬೇಡವೆಂದೆವು. 20 ದಿನಗಳ ನಂತರ ಆಸ್ತಿ ಬೇಡ, ಮದುವೆ ಮಾಡಿಕೊಡಿ ಎಂದರು. ಅದರಂತೆ 2011ರ ಫೆಬ್ರುವರಿ 24ರಂದು ಮದುವೆಯಾಯಿತು.

ಅವರದು ನಂಜನಗೂಡಿನಲ್ಲಿ ಟೈರ್‌ ವ್ಯಾಪಾರ. ನನ್ನ ಅಪ್ಪ ಟಿ.ಕೃಷ್ಣ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದವರು. ಅವರು ಆಡಂಬರ ಜೀವಿಗಳಲ್ಲ, ಆದರ್ಶಜೀವಿಗಳು. ತಕ್ಷಣ ಆಸ್ತಿ ಸಿಗುವುದಿಲ್ಲವೆಂದು ಗಂಡನಿಗೆ ಮನವರಿಕೆಯಾಯಿತು. 2 ತಿಂಗಳ ನಂತರ ಹುಚ್ಚನ ಹಾಗೆ ವರ್ತಿಸಲು ಶುರು ಮಾಡಿದರು. ಏಕೆಂದರೆ ನಾನೇ ಓಡಿಹೋಗಲಿ’ ಎಂದು ಸ್ಮರಿಸಿದರು ಕರುಣಶ್ರೀ.

‘ಕಿರುಕುಳ ನೀಡಿ 2011ರ ಡಿಸೆಂಬರ್‌ 24ರಂದು ಮನೆಯಿಂದ ಓಡಿಸಿದರು. ಅವತ್ತಿನಿಂದ ಮನೆಯೊಳಗೆ ಸೇರಿಸಿಲ್ಲ. 2012ರ ಜೂನ್ ತಿಂಗಳಲ್ಲಿ ವಿಚ್ಛೇದನ ಕೋರಿ ನೋಟಿಸ್ ಬಂತು. ವಿಚ್ಛೇದನ ಕೊಡದೆ ಗಂಡನೊಂದಿಗೆ ಬಾಳಬೇಕೆಂದಿರುವೆ’ ಎಂದು ಇಚ್ಛೆ ವ್ಯಕ್ತಪಡಿಸಿದರು. ‘ಗಂಡನ ಮನೆಯಿಂದ ವಾಪಸು ಬಂದ ಮಗಳು ಖಿನ್ನತೆಗೆ ಒಳಗಾಗಿದ್ದಳು.

ಧೈರ್ಯ ಹೇಳಿದ ಮೇಲೆ ಎಂ.ಎಸ್ಸಿ, ಎಲ್‌ಎಲ್‌ಬಿ ಪದವಿ ಪಡೆದಳು. ಮದುವೆಯಲ್ಲಿ ವರೋಪಚಾರವೆಂದು  8–10 ಲಕ್ಷದವರೆಗೆ ಒಡವೆ, ವಸ್ತ್ರ ಕೊಟ್ಟಿದ್ದೆವು’ ಎಂದು ನೆನಪಿಸಿಕೊಂಡರು ತಂದೆ ಪ್ರೊ.ಕೃಷ್ಣ. 17 ದಿನಗಳಿಂದ ಮನೆಯಿಂದಲೇ ಊಟ, ತಿಂಡಿ ತಂದು ಕೊಡುತ್ತಿರುವೆ. ನಾವು ರಾಮಕೃಷ್ಣ ಆಶ್ರಮದ ಭಕ್ತರು. ಹೀಗಾಗಿ, ಶಾಂತಿಯುತ ಹೋರಾಟ. ಇದುವರೆಗೆ ಗಂಡನ ಮನೆಯವರು ಬಾಗಿಲು ತೆಗೆದಿಲ್ಲ ಎಂದು ಅವರು ನೋವು ತೋಡಿಕೊಂಡರು.

‘ಮುರಳಿ ಇನ್ನೊಂದು ಮದುವೆಯಾಗಿದ್ದಾರೆ. ಇದನ್ನೆಲ್ಲ ಕಂಡು 68 ವರ್ಷ ವಯಸ್ಸಿನ ನನಗೆ 2 ಬಾರಿ ಹೃದಯಾಘಾತವಾಗಿದೆ. ನಿರ್ದೋಷಿಯಾದ ನನ್ನ ಮಗಳು ಗಂಡನ ಮನೆ ಸೇರಲಿ, ನೆಮ್ಮದಿಯಾಗಿ ಜೀವನ ಮಾಡಲಿ ಎನ್ನುವುದಷ್ಟೇ ನಮ್ಮ ಉದ್ದೇಶ’ ಎಂದು ಕೃಷ್ಣ ತಿಳಿಸಿದರು.

No Comments

Leave A Comment