Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪ: ಜೆಡಿಎಸ್ ಶಾಸಕರ ಪುತ್ರನ ಬಂಧನ

mtk-new

ಕುಶಾಲನಗರ: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ತುರುವೇಕೆರೆಯ ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪುತ್ರ ಕೆ.ರಾಜೀವ್‌ ಸೇರಿದಂತೆ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಸಮೀಪದ ಚಿಕ್ಕಬೆಟ್ಟಗೇರಿಯ ರಿವರ್‌್ ವ್ಯೂ ಹೋಮ್ ಸ್ಟೇ ಮೇಲೆ ಪೊಲೀಸರು ದಾಳಿ ನಡೆಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಕೆ.ರಾಜೀವ್‌, ಹೋಂಸ್ಟೆ ಮಾಲೀಕ ಪ್ರಸನ್ನ, ಸೋಮವಾರಪೇಟೆಯ ಮಧು ಹಾಗೂ ಉದ್ಯಮಿ ಪ್ರಮೋದ್ ಅವರನ್ನು ಬಂಧಿಸಿದ್ದಾರೆ.

ಯುವತಿಯನ್ನು ರಕ್ಷಿಸಿ ಕೂಡಿಗೆಯ ಬಾಲಾಶ್ರಮಕ್ಕೆ ಸೇರಿಸಲಾಗಿದೆ. ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಮಡಿಕೇರಿಯ ಜೈಲಿನಲ್ಲಿ ಇರಿಸಲಾಗಿದೆ.ಎರಡು ದಿನಗಳ ನಂತರ ಬಂಧಿತ ರಾಜೀವ್ ಶಾಸಕ ಕೃಷ್ಣಪ್ಪ ಅವರ ಪುತ್ರ ಎಂಬುದು ತಿಳಿದು ಬಂದಿದೆ.

ಪ್ರಕರಣಕ್ಕೂ ರಾಜೀವ್ ಗೂ ಇರುವ ಸಂಬಂಧದ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ, ಆದರೆ ರಾಜೀವ್ ಅವರ ಬಂಧನವನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

No Comments

Leave A Comment