Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ವಿ. ಆರ್ ಕಿದಿಯೂರು ಸಂಸ್ಮರಂಎ ಮತ್ತು ಸಹಾಯಧನ ವಿತರಣೆ

dsc_6440ಉಡುಪಿ : ಹಿರಿಯ ವಕೀಲರಾಗಿ, ಉಡುಪಿಯ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ, ಅದಮಾರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷರಾಗಿ, ಕರ್ನಾಟಕ ಬ್ಯಾಂಕಿನ ನಿರ್ದೇಶಕರಾಗಿ, ವಿವಿಧ ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳ ವರಿಷ್ಠರಾಗಿ ಸೇವೆ ಸಲ್ಲಿಸಿದ ವೆಂಕಟರಾವ್ ಕಿದಿಯೂರು ಇವರ ಸಂಸ್ಮರಣೆ ಮತ್ತು ಸಹಾಯಧನ ವಿತರಣಾ ಸಮಾರಂಭ ಸೆಪ್ಟಂಬರ್ 10 ರಂದು ಕರ್ನಾಟಕ ಬ್ಯಾಂಕಿನ ನಿವೃತ್ತ ಅಧ್ಯಕ್ಷರಾದ ಶ್ರೀ ಯು. ವಿ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯು. ವಿ. ಭಟ್ ವಿ. ಆರ್ ಕಿದಿಯೂರು ಓರ್ವ ಮಾನವತವಾದಿಯಾಗಿ ಸಮಾಜದ ಎಲ್ಲ ಮಂದಿಯ ಅಭಿವೃದ್ಧಿಗೆ ತಾನು ಸಂಪಾದಿಸಿದ ಸರ್ವಸ್ವವನ್ನು ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ಗೆ ಸ್ಥಾಪಿಸಿ, ಅದಕ್ಕೆ ನೀಡಿದ ಮಹಾಚೇತನವಾಗಿದ್ದವರು. 97ವರ್ಷಗಳ ಕಾಲ ಸಮಾಜದ ಓರ್ವ ಪ್ರಜ್ಞಾವಂತ ಜಾಗ್ರತ ಸದಸ್ಯನಂತೆ ಬಾಳಿದ ಸಾಧಕರಾಗಿದ್ದರು ಎಂದು ನುಡಿದರು.

ಈ ಸಂದರ್ಭದಲ್ಲಿ 4ಲಕ್ಷ ರೂ ಮಿಕ್ಕಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮತ್ತು ವೈದ್ಯಕೀಯ ನೆರವನ್ನು ವಿತರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟನ ಕಾರ್ಯದರ್ಶಿ ಪ್ರೊ. ರಾಧಾಕೃಷ್ಣ ಆಚಾರ್ಯರು ವಿ. ಆರ್ ಕಿದಿಯೂರ್ ಅವರ ಮಾನವೀಯ ಸ್ಪಂದನೆಯನ್ನು ತಿಳಿಸಿದರು.ಟ್ರಸ್ಟನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಕೆ. ಎಂ. ಹೆಬ್ಬಾರ್ ಇವರು ನಿಧನದ ಪೂರ್ವದಲ್ಲಿ ಟ್ರಸ್ಟಗೆ ರೂ. ೨೦,೦೦,೦೦/- ನೀಡಿದುದನ್ನು ಸ್ಮರಿಸಿಕೊಂಡರು.

ಆರಂಭದಲ್ಲಿ ಶ್ರೀ ಬಿ.ಜಿ.ರಾವ್ ಸ್ವಾಗತಿಸಿದರು. ಟ್ರಸ್ಟನ ಸದಸ್ಯ ಶ್ರೀ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಪ್ರೊ. ಕೃಷ್ಣಮೂರ್ತಿ ರಾವ್ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟನ ಸದಸ್ಯರಾದ ಶ್ರೀಶ ಆಚಾರ್ಯ, ಪ್ರೊ ರಮೇಶ್ ರಾವ್, ಯು. ಕೆ ರಾಘವೇಂದ್ರ ರಾವ್, ರಂಜನ್ ರಾವ್, ನಾಗೇಶ್ ಭಟ್, ಕೆ. ಎಲ್ ರಾವ್, ಕೆ. ನಾಗರಾಜ್ ರಾವ್ ಮತ್ತು ಕೆ. ಗುರುರಾಜ್ ರಾವ್ ಉಪಸ್ಥಿತರಿದ್ದರು.

No Comments

Leave A Comment