Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಉಗ್ರರ ವಿರುದ್ಧ ತಿರುಗಿಬಿದ್ದ ಸೈನಿಕರು: ನಾಲ್ಕು ಉಗ್ರರ ಹತ್ಯೆ, ಮುಂದುವರೆದ ಗುಂಡಿನ ಚಕಮಕಿ

terಶ್ರೀನಗರ: ಕಾಶ್ಮೀರ ಹಿಂಸಾಚಾರ ನಡೆಯುತ್ತಿರುವಂತೆಯೇ ಗಡಿಯೊಳಗೆ ನುಸುಳಿ ದಾಳಿ ನಡೆಸುತ್ತಿರುವ ಉಗ್ರರ ವಿರುದ್ಧ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು, ಈ ವೇಳೆ ನಾಲ್ಕು  ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇಂದು ಮುಂಜಾನೆ ಪೂಂಛ್ ಸೆಕ್ಟರ್ ಮತ್ತು ನೌಗಾಮ್ ಬಳಿ ಇರುವ ಗಡಿ ನಿಯಂತ್ರಣ ರೇಖೆ ವ್ಯಾಪ್ತಿಯಲ್ಲಿ ಭಾರತದ ಗಡಿಯೊಳಗೆ ನುಸುಳಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ  ಪ್ರಗತಿಯಲ್ಲಿದ್ದು, ಬೆಳಗ್ಗೆ ಓರ್ವ ಪೊಲೀಸ್ ಅಧಿಕಾರಿ ಉಗ್ರರ ಗುಂಡೇಟಿನಿಂದ ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದ ಯೋಧರು 11.30ರ ವೇಳೆಗೆ  ಮೂವರು ಉಗ್ರರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಪೂಂಛ್ ಸೆಕ್ಟರ್ ಬಳಿ ಇರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಉಗ್ರರು ಅವಿತಿದ್ದು, ಕಟ್ಟಡವನ್ನು ಸುತ್ತುವರೆದಿರುವ ಯೋಧರು ಉಗ್ರರೊಂದಿಗೆ ತೀವ್ರ ಗುಂಡಿನ ಚಕಮಕಿಯಲ್ಲಿ  ತೊಡಗಿದ್ದಾರೆ. ಇನ್ನು ಸಾವಿಗೀಡಾದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಆರ್ಮಿ 93 ಬ್ರಿಗೇಡ್ ನ ಸುಮಾರು 25ಕ್ಕೂ  ಹೆಚ್ಚು ಯೋಧರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

View image on Twitter

View image on Twitter

View image on Twitter

No Comments

Leave A Comment