Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಭಾವನ ಪತ್ನಿಗೆ ಲೈಂಗಿಕ ಕಿರುಕುಳ: ಆಪ್‌ ಶಾಸಕ ಖಾನ್‌ ಮೇಲೆ ಎಫ್ಐಆರ್‌

4ಹೊಸದಿಲ್ಲಿ : ಸೆ‌ಕ್ಸ್‌ ಸೀಡಿ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾಗಿರುವ ದೆಹಲಿಯ ಆಮ್‌ ಆದ್ಮಿ ಸರಕಾರದ ಹಗರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾವನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ  ಶಾಸಕ ಅಮಾನತುಲ್ಲಾ ಖಾನ್‌ ವಿರುದ್ದ  ಪೊಲೀಸರು ಶನಿವಾರ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಖಾನ್‌ ಅವರು ಭಾವನ ಪತ್ನಿಗೆ ಸೆಕ್ಸ್‌ ಗಾಗಿ ಬಲವಂತ ಮಾಡಿ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪದಲ್ಲಿ ದಕ್ಷಿಣ ದೆಹಲಿಯ ಜಾಮೀಯಾ ನಗರ ಠಾಣೆ ಪೊಲೀಸರು  ಸೆಕ್ಷನ್‌ 354,509 ,506ಮತತು 498 ಎ ಅಡಿಯಲ್ಲಿ ಎಫ್ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ಶನಿವಾರ ಬೆಳಗ್ಗೆಯಷ್ಟೆ ಆಪ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಖಾನ್‌ ಅವರು ನಾನು ಮಹಿಳೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಇದು ನನ್ನ ಪ್ರಾಮಾಣಿಕ ಕೆಲಸ ಸಹಿಸದವರು ಮಾಡಿರುವ ಪಿತೂರಿ ಎಂದು ಹೇಳಿಕೆ ನೀಡಿದ್ದರು.

ಅಮಾನತುಲ್ಲಾ ಖಾನ್‌ ಅವರ ಮೇಲೆ ಆರೋಪ ಕೇಳಿ ಬಂದ ತಕ್ಷಣ ಪಕ್ಷ ಅವರನ್ನು  ವಕ್ಫ್ ಬೋರ್ಡ್‌ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಜವಾಬ್ದಾರಿಯಿಂದ ಕೆಳಗಿಳಿಸಿದೆ.

ಜೂನ್‌ ತಿಂಗಳಿನಲ್ಲಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಖಾನ್‌ ಅವರನ್ನು ಬಂಧಿಸಲಾಗಿತ್ತು ಬಳಿಕ ಬಿಡುಗಡೆ ಮಾಡಲಾಗಿತ್ತು.

No Comments

Leave A Comment