Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಭೂ ಹಗರಣ ಹೂಡಾ ಮನೆ ಸೇರಿದಂತೆ 20 ಕಡೆ ಸಿಬಿಐ ದಾಳಿ

nivasssa-ha-daliನವದೆಹಲಿ: ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮನೆ ಸೇರಿದಂತೆ 20 ಕಡೆ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

ಗುರುಗ್ರಾಮದಲ್ಲಿ ಅಕ್ರಮವಾಗಿ ಭೂಮಿ ಸ್ವಾಧೀನ ಪಡಿಸಿಕೊಂಡು ರೈತರಿಗೆ ₹ 1,500 ಕೋಟಿ ವಂಚಿಸಿರುವ ಪ್ರಕರಣದ ಸಂಬಂಧ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಹೂಡಾ ನಿವಾಸ, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಎಲ್‌. ತಯಾಲ್‌, ಯುಪಿಎಸ್‌ಸಿ ಸದಸ್ಯ ಚತ್ತಾರ್‌ ಸಿಂಗ್‌, ಐಎಎಸ್‌ ಅಧಿಕಾರಿ ಎಸ್‌.ಎಸ್. ಧಿಲ್ಲೋನ್‌ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

‘ಅಕ್ರಮ ಭೂಸ್ವಾಧೀನ ಪ್ರಕರಣದ ತನಿಖೆಯ ಸಂಬಂಧ ರೋಹಟಕ್‌, ಗುರುಗ್ರಾಮ, ಚಾಂಚ್‌ಕುಲಾ ಮತ್ತು ದೆಹಲಿಯ ಒಟ್ಟು 20 ಕಡೆಗಳಲ್ಲಿ ದಾಳಿ ನಡೆಸಲಾಗಿದೆ’ ಎಂದು ಸಿಬಿಐ ವಕ್ತಾರ ಆರ್‌.ಕೆ. ಗೌರ್‌ ತಿಳಿಸಿದ್ದಾರೆ.

ಅಕ್ರಮ ಭೂಸ್ವಾಧೀನದ ಬಗ್ಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಾಗಿದೆ. ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಅಕ್ರಮವಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ರಾಜ್ಯ ಸರ್ಕಾರ 2004 ಮತ್ತು 2007ರ ಅವಧಿಯಲ್ಲಿ 400 ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಅದನ್ನು ಬಿಲ್ಡರ್‌ಗಳಿಗೆ ಮಾರಾಟ ಮಾಡಿರುವ ಆರೋಪ ಹೂಡಾ, ಎಂ.ಎಲ್‌. ತಯಾಲ್‌,  ಚತ್ತಾರ್‌ ಸಿಂಗ್‌, ಎಸ್‌.ಎಸ್. ಧಿಲ್ಲೋನ್‌ ಸೇರಿದಂತೆ ಹಲವರ ಮೇಲಿದೆ.

No Comments

Leave A Comment