Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಭೂಗತ ಪಾತಕಿ ದಾವೂದ್ ಬಂಧನಕ್ಕೆ 50 ಸದಸ್ಯರ ವಿಶೇಷ ತಂಡ ರಚನೆ

dawood

ಹೊಸದಿಲ್ಲಿ: ಎರಡು ದಶಕಗಳಿಂದ ಪಾಕಿಸ್ಥಾನದಲ್ಲಿ ತಲೆಮರೆಸಿಕೊಂಡಿರುವ “ದೇಶದ ಮೋಸ್ಟ್‌ ವಾಂಟೆಡ್‌ ಉಗ್ರ’ 1993ರ ಮುಂಬಯಿ ಸರಣಿ ಸ್ಫೋಟದ ರೂವಾರಿ ದಾವೂದ್‌ ಇಬ್ರಾಹಿಂನನ್ನು ಸೆರೆ ಹಿಡಿಯಲು ಕೇಂದ್ರ ಸರಕಾರ ನೀಲನಕ್ಷೆ ಸಿದ್ಧಪಡಿಸಿದೆ ಎನ್ನಲಾ ಗಿದೆ. ಈ ನೀಲನಕ್ಷೆಯ ಮೂಲ ಉದ್ದೇಶ ದಾವೂದ್‌ನ ಸೆರೆ, ಭಾರತ ಸಹಿತ ವಿಶ್ವದ ಹಲವು ದೇಶಗಳಲ್ಲಿ ಹಬ್ಬಿರುವ ಆತನ ಅಕ್ರಮ ಉದ್ಯಮ ಚಟುವಟಿಕೆಯನ್ನು ಮಟ್ಟ ಹಾಕುವುದೇ ಆಗಿದೆ ಎಂದು ಮೂಲಗಳು ತಿಳಿಸಿವೆ.

ದಾವೂದ್‌ನನ್ನು ಹಸ್ತಾಂತರಿಸುವಂತೆ ಪದೇ ಪದೇ ಪಾಕ್‌ಗೆ ಮನವಿ ಮಾಡಿದಾಗಲೆಲ್ಲ, ಆತ ನಮ್ಮ ದೇಶದಲ್ಲಿ ಇಲ್ಲ ಎಂದು ವಾದಿಸಿಕೊಂಡೇ ಇರುವ ಪಾಕ್‌ಗೆ ಸೂಕ್ತ ತಿರುಗೇಟು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಹೊಸ ಮಾಸ್ಟರ್‌ಪ್ಲಾನ್‌ ಸಿದ್ಧಪಡಿಸಿದೆ ಎನ್ನಲಾಗಿದೆ.

5 ತಂಡ ರಚನೆ: ದಾವೂದ್‌ ವಿರುದ್ಧ  ಕಾರ್ಯಾಚರಣೆಗಾಗಿ 50 ಅಧಿಕಾರಿಗಳನ್ನೊಳಗೊಂಡ 5 ತನಿಖಾ ತಂಡಗಳನ್ನು ಕೇಂದ್ರ ರಚಿಸಿದ್ದು, ದಾವೂದ್‌ ಹಲವಾರು ದೇಶಗಳಲ್ಲಿ ಹೊಂದಿರುವ ಉದ್ದಿಮೆ ಸಾಮ್ರಾಜ್ಯವನ್ನು ನಾಶಗೊಳಿಸುವಂತೆ ಈ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ವಿದೇಶದಲ್ಲಿ ಭಾರತದ ಪರ ಬೇಹುಗಾರಿಕೆ ನಡೆಸುವ “ರಾ’, ಸಿಬಿಐನ ಇಂಟರ್‌ಪೋಲ್‌ ವಿಭಾಗದಿಂದ ಈ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪಾಕಿಸ್ಥಾನ, ಯುಎಇ ಹಾಗೂ ಇನ್ನಿತರ ದೇಶಗಳಲ್ಲಿ ದಾವೂದ್‌ ಹಾಗೂ ಆತನ ತಂಡದ ಚಲನವಲನದ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.

ವಿಮಾನಯಾನ, ಇಂಧನ, ತೈಲ, ನಿರ್ಮಾಣದಿಂದ ಹಿಡಿದು ಗಾರ್ಮೆಂಟ್ಸ್‌ ಉದ್ದಿಮೆವರೆಗೆ ಜಾಗತಿಕವಾಗಿ ದಾವೂದ್‌ ಹಲವಾರು ಕಂಪೆನಿಗಳನ್ನು ನಡೆಸುತ್ತಿದ್ದಾನೆ. ಆತನ ಅತ್ಯಂತ 11 ನಿಕಟವರ್ತಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ವರದಿ ತಿಳಿಸುತ್ತದೆ.

ಕರಾಚಿ ಬಿಟ್ಟು  ಹೋಗುತ್ತಿಲ್ಲ  ಪಾತಕಿ
ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ದಾವೂದ್‌ ಈಗ ಕರಾಚಿ ಬಿಟ್ಟು ಹೊರಗೆ ಹೋಗದಂತಾಗಿದೆ. ಕರಾಚಿಯಲ್ಲೂ ಆತ ಹೆಚ್ಚು ಓಡಾಡುತ್ತಿಲ್ಲ. ಪ್ರಯಾಣಕ್ಕೆ ದಾವೂದ್‌ ಹಾಗೂ ಆತನ ಕುಟುಂಬ ಬುಲೆಟ್‌ ಪ್ರೂಫ್ ಕಾರುಗಳನ್ನು ಬಳಸುತ್ತದೆ. ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆರು ಲ್ಯಾಂಡ್‌ ಕ್ರೂಸರ್‌ ಕಾರುಗಳನ್ನು ದುಬೈನಿಂದ ತರಿಸಿಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ಗುಪ್ತಚರ ಸಂಸ್ಥೆಗಳ ಬಳಿ ಇದೆ ಎನ್ನಲಾಗಿದೆ.

ಶೇಖ್‌ ಇಸ್ಮಾಯಿಲ್‌ ಮರ್ಚೆಂಟ್‌ ಹೆಸರಿನಲ್ಲಿ ಕರಾಚಿಯಲ್ಲಿ ದಾವೂದ್‌ ವಾಸಿಸುತ್ತಿದ್ದು, ಪಾಕಿಸ್ತಾನದಲ್ಲೂ ತನ್ನ ಮೇಲೆ ದಾಳಿ ನಡೆಯಬಹುದು ಎಂಬ ಭೀತಿಯಲ್ಲಿದ್ದಾನೆ. ಹೀಗಾಗಿ ದೂರವಾಣಿ ಕರೆಗಳನ್ನೂ ಆತ ಸ್ವೀಕರಿಸುತ್ತಿಲ್ಲ. ಆತನ ಪತಿ ಮೆಹಜಬೀನ್‌ ಶೇಖ್‌ ಎಲ್ಲ ಕರೆಗಳನ್ನು ದಾವೂದ್‌ ಪರ ಸ್ವೀಕರಿಸಿ, ನಿರ್ದೇಶನಗಳನ್ನು ನೀಡುತ್ತಿದ್ದಾಳೆ ಎಂದು ಹೇಳಲಾಗಿದೆ.

No Comments

Leave A Comment