Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಶಿಕ್ಷಣಾಧಿಕಾರಿ ಎಸ್ ವಸಂತ ಶೆಟ್ಟಿ ಬೀಳ್ಕೊಡುಗೆ

VMP_4807ಉಡುಪಿ:ಉಪನಿರ್ದೇಶಕರು(ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಕಛೇರಿಯಲ್ಲಿ ಎಸ್ ವಸಂತ ಶೆಟ್ಟಿ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಕಾರ್ಯಕ್ರಮ, ಜಿಲ್ಲಾ ಪಂಚಾಯತ್ ಉಡುಪಿ ಇವರ ನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿರುವ ಹೆಚ್ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಉಡುಪಿ ಜಿಲ್ಲೆಯ ಎಸ್.ಎಸ್.ಎ ಡಿವೈಪಿಸಿ ನಾಗರಾಜ್, ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿಯಾಗಿರುವ ರಾಮಚಂದ್ರರಾಜೇ ಅರಸ್, ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ನಾಗೇಶ್ ಶ್ಯಾನುಭಾಗ್, ಕಾರ್ಕಳ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಮನಮೋಹನ್ ಮತ್ತಿತರ ಅಧಿಕಾರಿಗಳು, ಶಿಕ್ಷಕರ ಸಂಘದ, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಉಪನಿರ್ದೇಶಕರ ಕಛೇರಿಯ ಎಲ್ಲಾ ಸಿಬ್ಬಂದಿಯವರು ಉಪಸ್ಥಿತಿತರಿದ್ದರು.

ಎಸ್.ಎಸ್.ಎ. ಎ.ಪಿ.ಸಿ. ಚಂದ್ರ ನಾಯ್ಕ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎಸ್ ವಸಂತಶೆಟ್ಟಿಯವರು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಸರ್ಕಾರಿ ಸೇವೆಯಲ್ಲಿ ೨೨ ವರ್ಷಗಳನ್ನು ಪೂರೈಸಿದ್ದರು. ಅವರು ತಮ್ಮ ನಡೆ ನುಡಿಗಳಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದರು, ಅವರ ನಿವೃತ್ತಿ ಜೀವನ ನೆಮ್ಮದಿ, ಸಂತೋಷದಿಂದ ಕೂಡಿರಲಿ ಎಂದು ಉಡುಪಿ ಜಿಲ್ಲೆಯ ಎಸ್.ಎಸ್.ಎ ಡಿವೈಪಿಸಿ ನಾಗರಾಜ್ ತಮ್ಮ ಭಾಷಣದಲ್ಲಿ ನುಡಿದರು.

ಉಪನಿರ್ದೇಶಕರಾದ ಹೆಚ್. ದಿವಾಕರ ಶೆಟ್ಟಿಯವರು ಮಾತನಾಡುತ್ತಾ ವಸಂತ ಶೆಟ್ಟಿಯವರು ತನಗೆ ಮಾರ್ಗದರ್ಶಕರಾಗಿದ್ದರು, ಅವರು ಕೇವಲ ಒಬ್ಬ ಅಧಿಕಾರಿಯಾಗಿರದೇ ಒಳ್ಳೆಯ ಸ್ನೇಹಿತನಂತಿದ್ದರು. ನಿವೃತ್ತರ ಜೀವನ ಆದರ್ಶಮಯವೆಂದು ಬಣ್ಣಿಸುತ್ತಾ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಶಶಿಧರ ಶೆಟ್ಟಿ, ಆರ್‌ಎಂಎಸ್‌ಎ ಎಪಿಸಿಯವರಾದ ಸುಬ್ರಹ್ಮಣ್ಯ, ವಿಷಯ ಪರಿವೀಕ್ಷಣಾಧಿಕಾರಿ ವೆಂಕಟೇಶ ನಾಯಕ್, ಓಂಶ್ರೀ ರಾಘವೇಂದ್ರ ನಾಯಕ್, ಸುರೇಶ್ಚಂದ್ರ ಬಾಯಿರಿ, ಜಿ ಆರ್ ಮೋಳ್ಕೋಡ್ ನಿವೃತ್ತರೊಂದಿಗಿನ ಒಡನಾಟದ ಸಂದರ್ಭಗಳನ್ನು ನೆನಪಿಸಿದರು. ವಿಷಯ ಪರಿವೀಕ್ಷಕರಾದ ಶ್ರೀಮತಿ ಉಮಾ ಇವರ ಧನ್ಯವಾದದೊಂದಿಗೆ ಮುಕ್ತಾಯಗೊಳಿಸಲಾಯಿತು.

No Comments

Leave A Comment