Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ರೈಲ್ವೆ ನಿಲ್ದಾಣದಲ್ಲಿ ಶಂಕಿತ ಪಿಕ್ ಪ್ಯಾಕೇಟ್ ಬಾಲಕನನ್ನು ಮನಬಂದಂತೆ ಥಳಿಸಿದ ಪೇದೆ

policeಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ರೈಲ್ವೆ ನಿಲ್ದಾಣದಲ್ಲಿ ಶಂಕಿತ ಅಪ್ರಾಪ್ತ ಕಳ್ಳನೋರ್ವನಿಗೆ ಹೆಡ್ ಕಾನ್ಸ್ ಟೇಬಲ್ ಒಬ್ಬರು ಮನಬಂದಂತೆ ಥಳಿಸಿದ್ದು ಆತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು ಬಿಡದೆ ಕತ್ತಿಗೆ ಟವಲ್ ಹಾಕಿ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಈ ಅಮಾನವೀಯ ಘಟನೆಯ ದೃಶ್ಯಾವಳಿಯನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಅಲ್ಲದೆ ಅಂತಹ ಹೀನ ಕೃತ್ಯವೆಸಗಿದ ಪೊಲೀಸ್ ಪೇದೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬಾಲಕ ಪಿಕ್ ಪ್ಯಾಕೇಟ್ ಮಾಡುತ್ತಿದ್ದ ಎಂದು ಹೇಳಲಾಗಿದ್ದು ಆತನನ್ನು ಹಿಡಿದ ಪೇದೆ ಗಂಭೀರ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆಗಲು ಬಿಡದ ಪೇದೆ ಆತನ ಕುತ್ತಿಗೆಗೆ ಟವಲ್ ಹಾಕಿ ಪ್ಲಾಟ್ ಫಾರ್ಮ್ ನೆಲದ ಮೇಲೆ ಎಳೆದುಕೊಂಡು ಬಂದಿದ್ದಾರೆ.

ಈ ಪ್ರಕರಣ ಕುರಿತಂತೆ ರೇಲ್ವೇ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

No Comments

Leave A Comment