Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

5,000 ಹುಡುಗಿಯರನ್ನು ಮಾರಿ 100 ಕೋಟಿ ಸಂಪಾದಿಸಿದ ದಂಪತಿ ಅರೆಸ್ಟ್‌

Muslim-couಹೊಸದಿಲ್ಲಿ : 1999ರಿಂದ ತೊಡಗಿ ಈ ತನಕ ಸುಮಾರು 5,000 ಹುಡುಗಿಯರನ್ನು ಮಾರಾಟ ಮಾಡಿ ಕನಿಷ್ಠ ನೂರು ಕೋಟಿ ರೂ. ಸಂಪಾದಿಸಿರುವ ಮುಸ್ಲಿಂ  ದಂಪತಿಯನ್ನು ಹಾಗೂ ಅವರ ಈ ಮಾನವ ಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿರುವ ಇತರ ಆರು ಮಂದಿಯನ್ನು ದಿಲ್ಲಿ ಪೊಲೀಸರು ಬಂಧಿಸುವ ಮೂಲಕ ಭಾರೀ ದೊಡ್ಡ sex racket ಬಯಲು ಮಾಡಿದ್ದಾರೆ.

ದಿಲ್ಲಿಯ ಜಿ.ಬಿ. ರಸ್ತೆಯ ನಿವಾಸಿಯಾಗಿರುವ ಈ ಮುಸ್ಲಿಂ ದಂಪತಿ 1999ರಿಂದ ನೇಪಾಲ ಸಹಿತವಾಗಿ ದೇಶದ ವಿವಿಧ ಭಾಗಗಳ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಜಾಲವನ್ನು ನಡೆಸಿಕೊಂಡು ಬಂದಿದ್ದು ಇವರನ್ನು ದಿಲ್ಲಿ ಪೊಲೀಸರು ಅತ್ಯುಗ್ರ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಗ್ರಹ (ಮಕೋಕಾ)ಕಾಯಿದೆಯಡಿ ಬಂಧಿಸಿದ್ದಾರೆ.

ಬಂಧಿತ ಮುಸ್ಲಿಂ ದಂಪತಿಯ ಹೆಸರು ಸಾಯಿರಾ ಬೇಗಂ 45, ಮತ್ತು, ಆಫಾಕ್‌ ಹುಸೇನ್‌ 50. 1990ರಿಂದ ತೊಡಗಿ ಈ ದಂಪತಿ ನೇಪಾಲ ಮಾತ್ರವಲ್ಲದೆ ಪಶ್ಚಿಮ ಬಂಗಾಲ, ಅಸ್ಸಾಂ, ಒಡಿಶಾ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಇತರ ಕೆಲವು ರಾಜ್ಯಗಳ ದುರ್ಗಮ ತಾಣಗಳಲ್ಲಿನ ಸುಮಾರು ಐದು ಸಾವಿರ ಬಡ ಹುಡುಗಿಯರನ್ನು ಕಳ್ಳಸಾಗಣೆ ಮಾಡಿ 50,000 ರೂ.ಗಳಿಂದ ಎರಡು ಲಕ್ಷ ರೂ.ಗಳ ವರೆಗಿನ ಬೆಲೆಗೆ ಮಾರಿ ನೂರು ಕೋಟಿ ರೂ. ಸಂಪಾದಿಸಿದ್ದಾರೆ. ಪ್ರಾಯ ಸಣ್ಣದಿದ್ದಷ್ಟು ಹುಡುಗಿಯರನ್ನು ಹೆಚ್ಚಿನ ಬೆಲೆಗೆ ಮಾರಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಹುಸೇನ್‌ ಮತ್ತು ಬೇಗಂ ಮಾತ್ರವಲ್ಲದೆ ಪೊಲೀಸರು, ಈ ದಂಪತಿ ವಾಹನ ಚಾಲಕನಾಗಿದ್ದ ರಮೇಶ್‌ ಮತ್ತು ಚೀಫ್ ಮ್ಯಾನೇಜರ್‌ ವಾಸು ಎಂಬವರನ್ನು ಕೂಡ ಬಂಧಿಸಿದ್ದಾರೆ. ಇತರ ಬಂಧಿತರನ್ನು ಶಂಶದ್‌, ಶಿಲ್ಪಿ, ಮುಮ್ತಾಜ್‌ ಮತ್ತು ಪೂಜಾ ಥಾಪಾ ಎಂದು ಗುರುತಿಸಲಾಗಿದೆ. ಎಲ್ಲ ಬಂಧಿತರನ್ನು ಸೆ.2ರ ವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ವಿಶೇಷವೆಂದರೆ ಸಾಯಿರಾ ಮತ್ತು ಆಫಾಕ್‌ ಅವರನ್ನು 1990ರಿಂದ ದಾಖಲಾಗಿದ್ದ ಹಲವಾರು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. 2001ರಲ್ಲಿ ಆಕೆಗೆ ಏಳು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಆ ಶಿಕ್ಷೆಯನ್ನು ಮುಗಿಸಿ ಹೊರಬಂದ ಬಳಿಕ ಆಕೆ ಪುನಃ ಹುಡುಗಿಯರ ಮಾರಾಟ ಧಂಧೆಯನ್ನು ಆರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment