Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಮಾಧವ ಕೃಪಾಶಾಲೆಗೆ ಪ್ರಶಸ್ತಿ

Sr._girls_badmiಮಣಿಪಾಲ: ಸಿಬಿ‌ಎಸ್‌ಸಿ ಹಾಗೂ ಐಸಿ‌ಎಸ್‌ಇ ಶಾಲೆಗಳ ಒಕ್ಕೂಟವು, ದಿನಾಂಕ 20-8-2016ರಂದು ಹಟ್ಟಿಯಂಗಡಿ ಸಿದ್ಧಿವಿನಾಯಕ ಶಾಲೆಯಲ್ಲಿ ಆಯೋಜಿಸಿದ ಹಿರಿಯ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮಣಿಪಾಲದ ಮಾಧವಕೃಪಾ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.

ವಿಜೇತ ವಿದ್ಯಾರ್ಥಿನಿಯರಾದ ರಚನಾ, ಶ್ಯಾರೋಲ್ ವಿನ್ನಿ ಲೋಬೋ, ಲಕ್ಷ್ಮೀ ಕಿಣಿ, ಮಧುಸ್ಮಿತಾ ಇವರಿಗೆ ಶಾಲಾ ಸಂಚಾಲಕರಾದ ಶ್ರೀ ಪಿ. ಜಿ. ಪಂಡಿತ್, ಪ್ರಾಂಶುಪಾಲೆ ಶ್ರೀಮತಿ ಜೆಸ್ಸಿ ಆಂಡ್ರ್ಯೂಸ್, ಉಪಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಸಂತೋಷ್ ಹಾಗೂ ಶ್ರೀಮತಿ ಶಕಿಲಾಕ್ಷಿ ಕೃಷ್ಣ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಮಾರಾವ್ ದೈಹಿಕ ಶಿಕ್ಷಕರುಗಳಾದ ಶಾಲಿನಿ ಎಸ್, ಪ್ರಶಾಂತ್ ಹಾಗೂ ಪ್ರಶಾಂತ್ ಕುಮಾರ್ ಶುಭ ಹಾರೈಸಿದ್ದಾರೆ.

No Comments

Leave A Comment