Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸೆ.2ರ೦ದು ಗ್ರಾಮ ಪ೦ಚಾಯತ್ ನೌಕರರ ಹೋರಾಟ

Sep__2__Mushkaraಉಡುಪಿ:ಇಡೀ ರಾಷ್ಟ್ರದಲ್ಲಿ ಕಾರ್ಮಿಕ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿರುವ ದೇಶದ ಮತ್ತು ರಾಜ್ಯದ ನಿಲುವುಗಳಿಂದಾಗಿ ಖಾಸಗೀಕರಣ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಹೆಚ್ಚು ಬೆಂಬಲ ದೊರಕುತ್ತಿದೆ. ದೇಶದ 150 ಕ್ಕೂ ಅಧಿಕ ಕೆಟಗರಿಯ ವಿವಿಧ ಕಾರ್ಮಿಕರುಗಳ ನ್ಯಾಯ ಸಮ್ಮತ ಬೇಡಿಕೆಗಳನ್ನು ಕಡೆಗಣಿಸುತ್ತಾ ಬರಲಾಗುತ್ತಿದೆ. ಗ್ರಾ.ಪಂ.ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು ಅಥವಾ ಸರಕಾರಿ ನೌಕರರಿಗೆ ಸರಿ ಸಮಾನದ ವೇತನ ಮತ್ತು ಇತರ ಭದ್ರತೆಗಳನ್ನು ಒದಗಿಸಬೇಕು ಎಂಬ ಮನವಿಗೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರಕಾರಿ ನೌಕರ ವೃಂದದ ಡಿ ದರ್ಜೆಯ ನೌಕರರಿಗೆ ಮೊನ್ನೆಯಿಂದ 7 ನೇ ವೇತನ ಆಯೋಗದ ಶಿಫರಾಸಿನಂತೆ ವೇತನ ಹೆಚ್ಚಳವಾಗಿ, ಕನಿಷ್ಠ ವೇತನವೇ ರೂ.18000-00 ಆಗಿದೆ. ಈ ವೇತನವನ್ನೂ ಗ್ರಾ.ಪಂ.ನೌಕರರಿಗೂ ಒದಗಿಸಬೇಕು ಎನ್ನುವ ಆಗ್ರಹವನ್ನು ಗ್ರಾ.ಪಂ.ನೌಕರರ ಸಂಘ ಮಾಡುವುದರ ಮೂಲಕ ಮತ್ತು ಇತರ ಹಕ್ಕುಗಳಿಗಾಗಿ ಸಮಸ್ತ ಕಾರ್ಮಿಕ ವರ್ಗ ಹಮ್ಮಿಕೊಂಡಿರುವ ಸೆಪ್ಟೆಂಬರ್,2 ರ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ, ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಸಂಘವು ಹೋರಾಟಕ್ಕೆ ಇಳಿಯುತ್ತಿದೆ. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಭಾರತದ ಕಾರ್ಮಿಕರ ಹೋರಾಟವನ್ನು ಬೆಂಬಲಿಸುವುದರ ಜೊತೆಗೆ ಕಾರ್ಮಿಕ ಸಂಘಟನೆಗಳ ಬೇಡಿಕೆಯ ಜೊತೆ ನಮ್ಮ ಬೇಡಿಕೆಗಳನ್ನೂ ಸೇರಿಸಿಕೊಂಡು ಐಕ್ಯತೆಯನ್ನು ಪ್ರದರ್ಶಿಸಬೇಕಿದೆ. ಈ ಹೋರಾಟದಲ್ಲಿ ಎಲ್ಲರೂ ಜೊತೆಗೂಡಬೇಕಾಗಿ ವಿನಂತಿಸಲಾಗಿದೆ.

– ನಾರಾಯಣ ಬೀಜಾಡಿ ( ಅಧ್ಯಕ್ಷರು, ಕ.ರಾ.ಗ್ರಾ.ನೌ.ಸಂಘ (ರಿ.) (ಸಿಐಟಿಯು ಸಂಯೋಜಿತ,) ಉಡುಪಿ ಜಿಲ್ಲಾ ಘಟಕ)
ಸೆಪ್ಟೆಂಬರ್,2-2016 ರಂದು ನಡೆಯಲಿರುವ ಕಾರ್ಮಿಕ ಸಂಘಟನೆಗಳ ಅಖಿಲಭಾರತ ಸಾರ್ವತ್ರಿಕ ಮುಷ್ಕರದ ಸಂಬಂಧ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಕೆಲವು ಸೂಚನೆಗಳು:
1. ಉಡುಪಿ ತಾಲೂಕು ವ್ಯಾಪ್ತಿಯ ಗ್ರಾ.ಪಂ.ನೌಕರರು ಅಜ್ಜರಕಾಡಿನ ವಿಮಾ (LIC) ನೌಕರರ ಸಂಘದ ಬಳಿ ಬಂದು ಸೇರುವುದು. ಅಲ್ಲಿಂದ ಎಲ್ಲಾ ಕಾರ್ಮಿಕ ಸಂಘಟನೆಗಳು ಮೆರವಣಿಗೆ ಹೊರಟು ಉಡುಪಿ ನಗರದ ಆಭರಣ ಜ್ಯವೆಲ್ಲರ್ಸ್ ಬಳಿಯ ಕಾರ್ಪೋರೇಷನ್ ಬ್ಯಾಂಕ್ ವರೆಗೆ ಮೆರವಣಿಗೆ ನಡೆಯಲಿದ್ದು, ಅಲ್ಲಿ ಸಭೆ ನಡೆಯಲಿದೆ.
2. ಕುಂದಾಪುರ ತಾಲೂಕು ವ್ಯಾಪ್ತಿಯ ನೌಕರರು ಶಾಸ್ತ್ರೀ ಸರ್ಕಲ್ ಬಳಿ 9.30 ಕ್ಕೆ ಬಂದು ಸೇರಿ ಅಲ್ಲಿಂದ ಮೆರವಣಿಗೆಯಲ್ಲಿ ತೆರಳುವುದು.
3. ಕಾರ್ಕಳ ತಾಲೂಕು ಪಂಚಾಯತ್ ವ್ಯಾಪ್ತಿಯ ನೌಕರರು ಬೆಳಿಗ್ಗೆ 10.00 ಗಂಟೆಗೆ ಕಾರ್ಕಳ ಬಸ್ ನಿಲ್ದಾಣದ ಬಳಿ ಬಂದು ಸೇರುವುದು.

( september 2nd strike – All trade unions rally at Udupi at 10.30a.m. from LIC, Ajjarkad to Corporation Bank, at Kundapur procession starts at 9.30a.m. from Shastri Circle, at Karkala procession starts from Bus Stand at 10a.m. Employees from respective talukas to attend -)
ಗ್ರಾ.ಪಂ.ನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರ ಮೂಲಕ ಕಾರ್ಮಿಕರ ಐಕ್ಯತೆಯನ್ನು ಪ್ರದರ್ಶಿಸುವುದರ ಜೊತೆಗೆ ಎಲ್ಲಾ ಕಾರ್ಮಿಕರ ಬೇಡಿಕೆಗಳಿಗಾಗಿ ಒಕ್ಕೊರಲಿನ ಕೂಗಿಗೆ ಧ್ವನಿಯಾಗಬೇಕಾದ ಅಗತ್ಯತೆ ಇದೆ ಎನ್ನುವುದನ್ನು ತಿಳಿದುಕೊಂಡು, ಜೊತೆ ಸೇರಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗಿದೆ.
– ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಸಂಘ (ರಿ.)(ಸಿಐಟಿಯು ಸಂಯೋಜಿತ)

No Comments

Leave A Comment