Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಹಿಮಾಚಲ ಪ್ರದೇಶ: ಭಾರಿ ಮಳೆಗೆ ಸೇತುವೆ ಕುಸಿತ

bridge-cಶಿಮ್ಲಾ: ಕಳೆದೊಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದಸಲ್ಲಿ ಸೇತುವೆಯೊಂದು ಕುಸಿದಿದೆ.

ಹಿಮಾಚಲ ಪ್ರದೇಶದ ಚಂದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದಿದ್ದು, ಪ್ರಾಣಾಪಾಯಕ್ಕೆ ಸಿಲುಕಿದ್ದ ಓರ್ವ ಟ್ರಕ್ ಚಾಲಕನನ್ನು ಹರಸಾಹಸ ಪಟ್ಟು ರಕ್ಷಿಸಲಾಗಿದೆ. ಟ್ರಕ್ ಸೇತುವೆ  ಮೇಲೆ ಚಲಿಸುತ್ತಿದ್ದ ಸಂದರ್ಭದಲ್ಲಿಯೇ ಸೇತುವ ಕುಸಿಯಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆಯೇ ಇಡೀ ಸೇತುವೆ ಕುಸಿದಿದೆ. ಈ ವೇಳೆ ಟ್ರಕ್ ನಲ್ಲಿದ್ದ ಚಾಲಕ ಹೊರಬರಲು  ಯತ್ನಿಸಿದ್ದನಾದರೂ ಸೇತುವೆ ಕುಸಿದ ಪರಿಣಾಮ ಆತ ಪ್ರಾಣಾಪಾಯಕ್ಕೆ ಸಿಲುಕಿದ್ದ. ಕೂಡಲೇ ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿಗಳು ಆತನನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ.

ರೋಹ್ಟಂಗ್ ಸಮೀಪದ ಲೇಹ್ ಮನಾಲಿ ಹೆದ್ದಾರಿಯಲ್ಲಿ ಸುಮಾರು 8.8 ಕಿ.ಮೀ ಉದ್ದದ ಸುರಂಗ ಕೊರೆಯಲಾಗುತ್ತಿದ್ದು, ಸುರಂಗ ಮಾರ್ಗಕ್ಕೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲು ಈ  ಸೇತುವೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಭಾರಿ ಮಳೆ ಹಾಗೂ ಸುರಂಗ ಕಾರ್ಯದ ನಿಮಿತ್ತ ಭೂಮಿ ಕೊರೆಯುತ್ತಿರುವುದರಿಂದ ಸೇತುವೆಯ ಅಡಿಪಾಯದ ಭೂಮಿ ಕುಸಿದಿದೆ ಎಂದು  ಹೇಳಲಾಗುತ್ತಿದೆ. ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಪ್ರದೇಶಕ್ಕೆ ಧಾವಿಸಿರುವ ಅಧಿಕಾರಿಗಳು ಸೇತುವೆ ಕುಸಿತಕ್ಕೆ ಭೂಕುಸಿತವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.  ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಅಡಿಪಾಯದ ಭೂಮಿ ಕುಸಿದಿದ್ದು, ಈ ವೇಳೆ ಟ್ರಕ್ ಸೇತುವೆ ಮೇಲೆ ಚಲಿಸಿದೆ. ಈ ವೇಳೆ ಸೇತುವೆ ಕುಸಿದಿದೆ ಎಂದು  ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಪ್ರಸ್ತುತ ಕುಸಿದಿರುವ ಸೇತುವೆಯನ್ನು ಪುನರ್ ನಿರ್ಮಿಸಲು ಸಿದ್ಧತೆ ನಡೆಸಲಾಗಿದ್ದು, ಇನ್ನೊಂದು ವಾರದಲ್ಲಿ ಮತ್ತೆ ಸೇತುವೆಯನ್ನು ನಿಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ  ನೀಡಿದ್ದಾರೆ.

No Comments

Leave A Comment