Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಾವೇರಿ ನೀರು ವಿವಾದ: ತಮಿಳುನಾಡಿನಲ್ಲಿ ಕಾವೇರಿದ ಪ್ರತಿಭಟನೆ, 200 ಜನರ ಬಂಧನ

Cauvery-wತಿರುಚಿ: ಕಾವೇರಿ ನೀರು ವಿವಾದ ಕುರಿತಂತೆ ತಮಿಳುನಾಡಿನಾದ್ಯಂತ ಪ್ರತಿಭಟನೆ ಕಾವೇರಿದ್ದು, 200 ಕ್ಕೂ ಹೆಚ್ಚು ರೈತರನ್ನು ಬಂಧನಕ್ಕೊಳಪಡಿಸಿರುವುದಾಗಿ ಮಂಗಳವಾರ ತಿಳಿದುಬಂದಿದೆ.

ಕಾವೇರಿ ನದಿಯಲ್ಲಿ 50 ಟಿಎಂಸಿಗಿಂತಲೂ ನೀರು ಕಡಿಮೆಯಿದ್ದು, ಕರ್ನಾಟಕದ ಜನರಿಗೇ ಕುಡಿಯುವುದಕ್ಕೆ 40 ಟಿಎಂಸಿ ನೀರಿನ ಅಗತ್ಯವಿದೆ. ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿದ್ದು, ನೀರಿನ ಅಭಾವ ಉಂಟಾಗಿದೆ. ಹೀಗಾಗಿ ತಮಿಳುನಾಡಿಗೆ ಪಾಲಿನ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದಷ್ಟೇ ಸ್ಪಷ್ಟಪಡಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಲ್ಲಿನ ರೈತರು ತಮಿಳುನಾಡಿನಾದ್ಯಂತ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿವೆ. ಈಗಾಗಲೇ ತಮಿಳುನಾಡಿನ ಹಲವು ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ವಾಸ್ಕೋ-ಡಾ-ಗಾಮಾ-ವೇಲಾಂಗಣಿ ಎಕ್ಸ್ ಪ್ರೆಸ್ ರೈಲನ್ನು ತಡೆಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿವೆ.

ತಿರುಚಿ ರೈಲ್ವೆ ನಿಲ್ದಾಣಕ್ಕೆ ಪ್ರವೇಶ ಮಾಡಿ ಪ್ರತಿಭಟನೆ ಮಾಡಲು ಪ್ರಯತ್ನಿಸಿದ್ದ ಸುಮಾರು 200ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಡಿಎಂಕೆ, ಎಂಎಂಕೆ ಹಾಗೂ ಟಿಎಂಕೆ ಪಕ್ಷದ ಸದಸ್ಯರೂ ಕೂಡ ಬಂಧಿಸಿರುವುದಾಗಿ ಹೇಳಲಾಗುತ್ತಿದೆ.

ತಿರುಚಿ, ಅರಿಯಲೂರ್ ಮತ್ತು ಪೆರಂಬಲೂರಿಗೆ ಮಾತ್ರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಅಲ್ಲಿನ ಜನರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಇನ್ನುಳಿದ ಪ್ರದೇಶಗಳಲ್ಲಿನ ಜನರ ಜೀವನ ಎಂದಿನಂತೆ ಸಾಮಾನ್ಯವಾಗಿದೆ.

No Comments

Leave A Comment