Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕು೦ದಾಪುರ-ಬ್ರಹ್ಮಾವರದಲ್ಲಿನ ಇಬ್ಬರು ನಾಪತ್ತೆ

Shashikalaಉಡುಪಿ: ಉಡುಪಿ ತಾಲೂಕು ಹಂದಾಡಿ ಗ್ರಾಮ ಭಂಡಾರಿಬೈಲು ಎಂಬ ವಿಳಾಸದ ಸುಲೋಚನಾ ಗಾಣಿಗ ಎಂಬವರ ಪತಿ ಸುಮಾರು 54ವರ್ಷ ಪ್ರಾಯದ ಸುರೇಶ ಗಾಣಿಗ ಎಂಬವರು ಆಗಸ್ಟ್ 19ಮಧ್ಯಾಹ್ನ 3.30ಗಂಟೆಗೆ ಮನೆಯಿಂದ ಕುಂದಾಪುರ ಸಂತೆಗೆ ಎಂದು ಹೋಗಿ, ಅಲ್ಲಿಂದ ಕರೆಂಟ್ ಬಿಲ್ಲು ಕಟ್ಟಿ ಬರುವುದಾಗಿ ಹೇಳಿ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದ ಗಂಡಸಿನ ಚಹೆರೆ ಈ ಮುಂದಿನಂತಿವೆ.

ವ್ಯಕ್ತಿಯು ಗೋಧಿ ಮೈಬಣ್ಣ, 5ಅಡಿ ಉದ್ದ ಇದ್ದು, ಕೋಲು ಮುಖ, ಸಾಧಾರಣ ಶರೀರ ಹೊಂದಿರುತ್ತಾರೆ. ಲುಂಗಿ ಶರ್ಟ್, ಸೊಂಟಕ್ಕೆ ಬೈರಾಸ್ ಕಟ್ಟಿಕೊಂಡಿದ್ದು, ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ. ಸದರಿ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಣೆಯಾದವರ ಪ್ರಕಟಣೆ

ಕುಂದಾಪುರ ತಾಲೂಕು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಗಾಣಮಕ್ಕಿ ಸೌಡ ಎಂಬ ವಿಳಾಸದ ಶೇಖರ ಮಡಿವಾಳ ಎಂಬವರ ಪುತ್ರಿ ಸುಮಾರು 22ವರ್ಷ ಪ್ರಾಯದ ಶಶಿಕಲಾ ಎಂಬವರು ಆಗಸ್ಟ್ 20ಮನೆಯಿಂದ ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದವಳ ಚಹೆರೆ ಈ ಮುಂದಿನಂತಿವೆ.

5ಅಡಿ 3ಇಂಚು ಉದ್ದ ಇದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಎಡಗೈಯಲ್ಲಿ ಹೂವಿನ ಮಚ್ಚೆ ಇದ್ದು, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಬಲ್ಲವರಾಗಿರುತ್ತಾರೆ. ಸದರಿ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಪೊಲೀಸ್ ಅಧೀಕ್ಷಕರು ಉಡುಪಿ ದೂರವಾಣಿ ಸಂಖ್ಯೆ 0820-256444ಅಥವಾ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ 25610966 ಅಥವಾ ಪೊಲೀಸ್ ಉಪ ನಿರೀಕ್ಷಕರು ಕೋಟಾ ಪೊಲೀಸ್ ಠಾಣೆಸಂಪರ್ಕಿಸುವಂತೆ ಕೋಟಾ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

No Comments

Leave A Comment