Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಸಿಂಧು, ಸಾಕ್ಷಿ, ದೀಪಾಗೆ ಬಿಎಂಡಬ್ಲ್ಯೂ ಕಾರು ಹಸ್ತಾಂತರಿಸಿದ ಸಚಿನ್

sachinಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಪಿವಿ ಸಿಂಧು, ಸಾಕ್ಷಿ ಮಲಿಕ್ ಹಾಗೂ ಜಿಮ್ನಾಸ್ಟಿಕ್ ನಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿ 4ನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್ ಅವರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬಿಎಂಡಬ್ಲ್ಯೂ ಕಾರನ್ನು ಹಸ್ತಾಂತಸಿದರು.

ಹೈದರಾಬಾದ್ ಗಚ್ಚಿಬೌಲಿ ಕ್ರೀಡಾಂಗಣದಲ್ಲಿರುವ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಸಿಂಧುಗೆ, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಕೋಚ್ ಗೋಪಿಚಂದ್ ಗೆ ಉಡುಗೊರೆಯಾಗಿ ಬಿಎಂಡಬ್ಲ್ಯೂ ಕಾರನ್ನು ನೀಡಲಾಯಿತು.

ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ವಿಜೇತರಿಗೆ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಉದ್ಯಮಿ ಹಾಗೂ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದು ಅದನ್ನು ತಮ್ಮ ಆಪ್ತ ಸ್ನೇಹಿತ ಸಚಿನ್ ಅವರ ಕೈಯಲ್ಲಿ ಪ್ರದಾನ ಮಾಡುವುದಾಗಿ ಹೇಳಿದ್ದರು.

No Comments

Leave A Comment