Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಹಳಿ ತಪ್ಪಿದ ತಿರುವನಂತಪುರಂ-ಮಂಗಳೂರು ಎಕ್ಸ್ ಪ್ರೆಸ್: 12 ಬೋಗಿಗಳು ಪಲ್ಟಿ, ತಪ್ಪಿದ ದುರಂತ

train-derail-keralaತಿರುವನಂತಪುರಂ: ಕೇರಳದ ತಿರುವನಂತಪುರಂನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ಹಳಿತಪ್ಪಿದ್ದು, 12 ಬೋಗಿಗಳು ಮುಗುಚಿ ಬಿದ್ದಿರುವ ಘಟನೆಯೊಂದು ಕರುಕುಟ್ಟಿ ನಿಲ್ದಾಣದ ಬಳಿ ಭಾನುವಾರ ನಡೆದಿದೆ.

ಎರ್ನಾಕುಲಂ ಜಿಲ್ಲೆಯ ಅಲುವಾ ಮತ್ತು ಕರುಕುಟ್ಟಿ ನಿಲ್ದಾಣದಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಯಾವುದೇ ಗಾಯಗಳಾಗಲಿ, ಪ್ರಾಣಾಪಾಯಗಳಾಗಲಿ ಸಂಭವಿಸಿಲ್ಲ ಎಂದು ದಕ್ಷಿಣ ರೈಲ್ವೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಂತರ ಪ್ರಯಾಣಿಕರಿಗೆ ತೊಂದರೆಯುಂಟಾಗಬಾರದೆಂದು ಅಧಿಕಾರಿಗಳು ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಘಟನೆ ಪರಿಣಾಮ ರೈಲ್ವೆ ಹಳಿಗಳು ಹಾಳಾಗಿದ್ದು, ದುರಸ್ತಿಗೊಳಿಸಲು ಸುಮಾರು 10 ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಹೀಗಾಗಿ, ಕೇರಳದ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂಲಗಳ ಪ್ರಕಾರ ತಿರುವನಂತಪುರ-ಮುಂಬೈ, ಕನ್ಯಾಕುಮಾರಿ-ಬೆಂಗಳೂರು, ಆಲಪುಳ-ಧನ್ಬಾದ್, ತಿರುವನಂತಪುರ-ಗೋರಕ್ಪುರ ರಪ್ತಿಸಾಗರ್, ತಿರುವನಂತಪುರ-ಹೈದರಾಬಾದ್ ಶತಾಬ್ಜಿ ಎಕ್ಸ್ ಪ್ರೆಸ್ ರಂತಹ 5 ದೂರದ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ. ಅಲ್ಲದೆ, ಅಮೃತಾ ಎಕ್ಸ್ ಪ್ರೆಸ್, ನಿಲಂಬೂರ್ ರಾಜ್ಯರಾಣಿ ಎಕ್ಸ್ ಪ್ರೆಸ್, ಎಗ್ಮೋರ್ – ಗುರುವಾಯೂರ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಅಪೂರ್ಣ ಪ್ರಯಾಣಕ್ಕಾಗಿ ಪ್ರಯಾಣಿಕರಿಗೆ ಅವರ ಹಣವನ್ನು ಮರುಪಾವತಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಆನ್ ಲೈನ್ ನಲ್ಲಿ ಬುಕ್ ಮಾಡಿದವರಿಗೆ ಸ್ವಯಂಚಾಲಿತವಾಗಿ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಇಲಾಖೆಯ ಸಹಾಯವಾಣಿ ಸಂಖ್ಯೆ: ತ್ರಿಸ್ಸೂರು 0487 2429241, ಎರ್ನಾಕುಲಂ 0484 2100317, ತಿರುನಂತಪುರಂ 0471 1072.

No Comments

Leave A Comment