Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಪಾನಮತ್ತ ವಿದ್ಯಾರ್ಥಿನಿಯಿಂದ ಅಪಘಾತ: ಓರ್ವನ ಸಾವು

car-newಬೆಂಗಳೂರು: ಪಾನಮತ್ತ ವಿದ್ಯಾರ್ಥಿನಿ ಕಾರು ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸತ್ತು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿ ಸಂಭವಿಸಿದೆ.

ಲಂಡನ್‌ನ ‘ವೆಸ್ಟ್‌ ಮಿನಿಸ್ಟರ್’ ವಿಶ್ವವಿದ್ಯಾನಿಯಲಯದ ಎಂಬಿಎ ವಿದ್ಯಾರ್ಥಿನಿ ಭಾವತಾರಿಣಿ, ಮಿನರ್ವ ಸರ್ಕಲ್ ನಲ್ಲಿ ಡಿಕ್ಕಿ ಹೊಡೆದಿದ್ದಾಳೆ.  ಪರಿಣಾಮ ತ್ಯಾಗರಾಜನಗರ ನಿವಾಸಿ ಸುಬ್ರಹ್ಮಣ್ಯ (50) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಖಾಸಗಿ ಕಂಪೆನಿ ಉದ್ಯೋಗಿ ಸುಜಿತ್ (26)  ಗಾಯ ಗೊಂಡಿದ್ದಾರೆ.

ರಸ್ತೆ ಬದಿ ನಿಂತಿದ್ದ ಸ್ಕೂಟರ್ ಹಾಗೂ ಮನೆಯ ಕಾಂಪೌಂಡ್‌ಗೂ ಕಾರು ಗುದ್ದಿದೆ. ಈ ಸಂಬಂಧ ಪೊಲೀಸರು ಭವತರಣಿ ಯನ್ನು ಬಂಧಿಸಿ, 15 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ರಾಜಾಜಿನಗರ 3ನೇ ಬ್ಲಾಕ್ ನಿವಾಸಿಯಾದ ಭಾವತರಣಿ, ಲಂಡನ್‌ನಲ್ಲಿ ಓದುತ್ತಿದ್ದರು. ರಜೆ ಮೇಲೆ 12 ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಬುಧ ವಾರ ಸಂಜೆ ಸ್ನೇಹಿತರ ಜತೆ ಎಂ.ಜಿ.ರಸ್ತೆಗೆ ಬಂದಿದ್ದರು. ಇಲ್ಲಿ ಪಾರ್ಟಿ ಮುಗಿಸಿ ಕೊಂಡು 11 ಗಂಟೆಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು ಎಂದು ತನಿಖಾಧಿಕಾ ರಿಗಳು ವಿವರಿಸಿದರು.

ಲಾಲ್‌ಬಾಗ್ ಮುಖ್ಯದ್ವಾರದ ಕಡೆ ಯಿಂದ ವೇಗವಾಗಿ ಕಾರು ಚಲಾಯಿಸಿ ಕೊಂಡು ಬಂದಿರುವ ಭಾವತರಣಿ, ಮಿನರ್ವ ಸರ್ಕಲ್ ನಲ್ಲಿ ನಿಯಂತ್ರಣ ಕಳೆದು ಕೊಂಡಿದ್ದಾರೆ. ಆಗ, ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಗುದ್ದಿಕೊಂಡು ಪಾದಚಾರಿ ಮಾರ್ಗವನ್ನೇರಿದ ಕಾರು, ಸುಬ್ರಹ್ಮಣ್ಯ ಹಾಗೂ ಸುಜಿತ್ ಅವರಿಗೆ ಡಿಕ್ಕಿ ಮಾಡಿದೆ. ನಂತರವೂ ಮುಂದೆ ಸಾಗಿ ಮನೆಯ ಕಾಂಪೌಂಡ್‌ಗೆ ಗುದ್ದಿದೆ.

 

ಡಿಕ್ಕಿಯ ರಭಸಕ್ಕೆ ಇಬ್ಬರೂ ಮೂರ್ನಾಲ್ಕು ಅಡಿಯಷ್ಟು ಮೇಲೆ ಎಗರಿ ಬಿದ್ದಿದ್ದಾರೆ. ತಲೆಗೆ ಫುಟ್‌ಪಾತ್‌ನ ಕಲ್ಲು ತಾಕಿದ್ದರಿಂದ ಸುಬ್ರಹ್ಮಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಜಿತ್ ಅವರ ತಲೆ ಹಾಗೂ ಬೆನ್ನಿಗೆ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಮಾಹಿತಿ ನೀಡಿದರು. ಆಲ್ಕೋಮೀಟರ್ ಮೂಲಕ ಭಾವತರಣಿ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯದ ಪ್ರಮಾಣ 80 ಮಿ.ಗ್ರಾಂನಷ್ಟಿತ್ತು.
No Comments

Leave A Comment