Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ದಾವೂದ್‌ ಕರಾಚಿಯಲ್ಲಿ ಇಲ್ಲ: ವಿಶ್ವಸಂಸ್ಥೆಗೆ ಭಾರತದ ಕುಮ್ಮಕ್ಕು: ಪಾಕ್

Ibrahim-ಇಸ್ಲಾಮಾಬಾದ್‌ : ಕುಖ್ಯಾತ ಭೂಗತ ಪಾತಕಿ,  ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್‌ ಇಬ್ರಾಹಿಂ ಪಾಕಿಸ್ಥಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದನ್ನು ನಿರೂಪಿಸಲು ಭಾರತವು ನೀಡಿದ್ದ ಆತನ 9 ವಿಳಾಸಗಳ ಪೈಕಿ ಆರು ಸರಿಯಾಗಿವೆ ಎಂದು ದೃಢೀಕರಿಸಿ ವಿಶ್ವಸಂಸ್ಥೆ  ನೀಡಿರುವ ವರದಿಯನ್ನು ಪಾಕಿಸ್ಥಾನ ನಿರೀಕ್ಷೆಯಂತೆ ಯಥಾ ಪ್ರಕಾರ ತಿರಸ್ಕರಿಸಿದೆ.

“ಭಾರತದ ಕುಮ್ಮಕ್ಕಿನಿಂದಾಗಿ ವಿಶ್ವಸಂಸ್ಥೆಯು ಈ ರೀತಿಯ ವರದಿ ನೀಡಿದೆ’ ಎಂದು ಪಾಕಿಸ್ಥಾನ ಆರೋಪಿಸಿದೆಯಲ್ಲದೆ, ದಾವೂದ್‌ ಇಬ್ರಾಹಿಂ ತನ್ನ ದೇಶದಲ್ಲಿ ಈಗಲೂ ಇಲ್ಲವೇ ಇಲ್ಲ ಎಂದು ಪಟ್ಟು ಹಿಡಿದು ವಾದಿಸಿದೆ.

“ಪಾಕಿಸ್ಥಾನದ ಪ್ರತಿಷ್ಠೆಗೆ ಮಸಿ ಬಳಿಯಲು ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕುವ ಅದರ ಪ್ರಾಮಾಣಿಕ ಪ್ರಯತ್ನಗಳನ್ನು ಕಡೆಗಣಿಸುವ ಭಾರತದ ದುರುದ್ದೇಶದಿಂದ ಪ್ರೇರಿತವಾಗಿರುವ ವಿಶ್ವಸಂಸ್ಥೆಯು ದಾವೂದ್‌ ಇಬ್ರಾಹಿಂ ಕುರಿತಾಗಿ ಈ ರೀತಿಯ ವರದಿ ನೀಡಿದೆ’ ಎಂದು ಪಾಕ್‌ ವಿದೇಶ ಸಚಿವಾಲಯ ಹೇಳಿದೆ.

1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಸೂತ್ರಧಾರಿಯಾಗಿರುವ ದಾವೂದ್‌ ಇಬ್ರಾಹಿಂನನ್ನು ಹಿಡಿದು ಶಿಕ್ಷಿಸುವ ಸಲುವಾಗಿ ಭಾರತವು ನಡೆಸುತ್ತಿದ ಸರ್ವ ಬಗೆಯ ಪ್ರಯತ್ನದ ಅಂಗವಾಗಿ ವಿಶ್ವಸಂಸ್ಥೆಗೆ ಭಾರತ ದಾವೂದ್‌ ಪಾಕಿಸ್ಥಾನದಲ್ಲಿ ಪದೇ ಪದೇ ಭೇಟಿ ನೀಡುವ 9 ತಾಣಗಳ ವಿಳಾಸಗಳನ್ನು ನೀಡಿತ್ತು. ಇವುಗಳ ಪೈಕಿ ಆರು ವಿಳಾಸಗಳು ಸರಿಯಾಗಿವೆ ಎಂದು ವಿಶ್ವಸಂಸ್ಥೆ ದೃಢೀಕರಿಸಿ ವರದಿ ನೀಡಿತ್ತು.

ದಾವೂದ್‌ ತನ್ನ ದೇಶದೊಳಗೆ ಇಲ್ಲವೇ ಇಲ್ಲವೆಂದು ಈ ತನಕವೂ ಪಾಕಿಸ್ಥಾನ ತನ್ನ ಮೊಂಡು ವಾದವನ್ನು ಮಂಡಿಸುತ್ತಾ ಬಂದಿತ್ತು. ಈಗ ವಿಶ್ವಸಂಸ್ಥೆಯೇ ತನ್ನ ವರದಿ ಮೂಲಕ ದಾವೂದ್‌ ಪಾಕಿಸ್ಥಾನದಲ್ಲೇ ಇರುವುದನ್ನು ದೃಢಪಡಿಸಿದೆ. ಹಾಗಿದ್ದರೂ ನಾಯಿ ಬಾಲ ಡೊಂಕು ಎನ್ನುವಂತೆ ಪಾಕಿಸ್ಥಾನ “ದಾವೂದ್‌ ನಮ್ಮ ದೇಶದಲ್ಲಿ ಇಲ್ಲ ಎಂದು ನಾವು ಈಗಲೂ ಹೇಳುತ್ತಿದ್ದೇವೆ’ ಎಂದು ಪುನರಪಿ ತನ್ನ ಮೊಂಡು ವಾದವನ್ನೇ ಮುಂದಿಟ್ಟಿದೆ.

No Comments

Leave A Comment