Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಕಂಚು ವಿಜೇತೆ ಸಾಕ್ಷಿಗೆ ತವರಿನಲ್ಲಿ ಅದ್ಧೂರಿ ಸನ್ಮಾನ

sakshiರೊಹ್ಟಕ್: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ಗೆದ್ದಿರುವ ಭಾರತದ ಹೆಣ್ಣು ಹುಲಿ ಸಾಕ್ಷಿ ಮಲಿಕ್ ತವರಾದ ಹರಿಯಾಣದ ರೊಹ್ಟಕ್ ಜಿಲ್ಲೆಯ ಬಹದ್ದೂರ್ ಗಡದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸನ್ಮಾನಿಸಿದರು.

ಸಾಕ್ಷಿ ತವರೂರಾದ ರೊಹ್ಟಕ್ ನಲ್ಲಿ ಸನ್ಮಾನಕ್ಕೆ ಹರಿಯಾಣ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇಂದು ತವರಿಗೆ ಆಗಮಿಸಿದ ಸಾಕ್ಷಿಗೆ ಹಾಗೂ ಸಾಕ್ಷಿ ಅವರ ಕೋಚ್ ಗೂ ಸನ್ಮಾನಿಸಲಾಯಿತು. ಈ ಸನ್ಮಾನ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಅಭಿಮಾನಿಗಳು ಹಾಗೂ ಗಣ್ಯರು ಸೇರಿದ್ದರು.

ಸನ್ಮಾನದ ನಂತರ ಮಾತನಾಡಿದ ಮನೋಹರ್ ಲಾಲ್ ಖಟ್ಟರ್ ಅವರು ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆ ‘ಬೇಟಿ ಬಚಾವೋ ಬೇಟಿ ಪಡಾವೋ’ಗೆ ರಾಯಭಾರಿಯನ್ನಾಗಿ ನೇಮಿಸಿರುವುದಾಗಿ ಘೋಷಿಸಿದರು.

ಈ ವೇಳೆ ಮಾತನಾಡಿ ರಿಯೋ ಒಲಿಂಪಿಕ್ಸ್ ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವುದು ನನ್ನ ಬಹುದಿನಗಳ ಕನಸಾಗಿತ್ತು. ಅದಕ್ಕಾಗಿ ಕಳೆದ ಹನ್ನೆರಡು ವರ್ಷಗಳಿಂದ ಕಠಿಣ ಪರಿಶ್ರಮಪಟ್ಟಿದೆ. ನನ್ನ ತಪಸ್ಸಿಗೆ ಫಲ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿ ಸಮಸ್ತ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ.

No Comments

Leave A Comment