Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಭದ್ರಾಚಲಂ ದೇವಾಲಯದಲ್ಲಿ ಲಕ್ಷಾಂತರ ರು. ಮೌಲ್ಯದ ಆಭರಣ ಕಳ್ಳತನ

bhadra-newಕಮ್ಮಾಮ್: ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದ ಸುಮಾರು ಎರಡೂವರೆ ಲಕ್ಷ ರು.ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಭದ್ರಾಚಲಂ ನಲ್ಲಿರುವ ಶ್ರೀ ಸೀತಾರಾಮ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ದೇವರ ಆಭರಣ ನಾಪತ್ತೆಯಾಗಿರುವುದನ್ನು ಕಳೆದ ಶುಕ್ರವಾರ ದೇವಾಲಯದ ಪ್ರಧಾನ ಅರ್ಚಕ ಜಗನ್ನಾದಚಾರ್ಯಲು ಗಮನಿಸಿದ್ದಾರೆ.

ದೇವಾಲಯದಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಇಂಥಹ ಘಟನೆಗಳು ನಡೆದಿದ್ದು, ದತ್ತಿ ಇಲಾಖೆ ಸಚಿವ ಇಂದ್ರ ಕರಣ್ ರೆಡ್ಡಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಆಭರಣ ಕಳ್ಳತನದಲ್ಲಿ ದೇವಾಲಯದ ಒಳಗಿನ ಕೆಲವರ ಕೈವಾಡ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ. ಕದ್ದ ಆಭರಣಗಳನ್ನು ವಾಪಸ್ ತಂದಿಡಲು ಸಮಯ ನೀಡಿದ್ದು, ಆ ಗಡುವಿನಲ್ಲಿ ಆಭರಣವನ್ನು ದೇವಾಲಯಕ್ಕೆ ಮರಳಿಸದಿದ್ದರೇ ಪೊಲೀಸರಿಗೆ ದೂರು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಎಲ್ಲಾ ಅರ್ಚಕರ ಸಭೆ ಕರೆದು ಚರ್ಚೆ ನಡೆಸಿರುವ ಆಡಳಿತ ಮಂಡಳಿ, ದೇವಾಲಯದಲ್ಲಿರುವ ಚಿನ್ನದ ಆಭರಣಗಳ ಪಟ್ಟಿ ನೀಡುವಂತೆ ಸೂಚಿಸಿದೆ.

No Comments

Leave A Comment