Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಮುಂಬೈನಲ್ಲಿ ದೋಣಿ ಮುಳುಗಡೆ: 15 ಮೀನುಗಾರರ ರಕ್ಷಿಸಿದ ಕರಾವಳಿ ರಕ್ಷಣಾ ಪಡೆ

coast-guardಮುಂಬೈ: ಮುಂಬೈ ಕರಾವಳಿ ತೀರದಿಂದ 70 ನಾಟಿಕಲ್ ಮೈಲು ದೂರದಲ್ಲಿ ಮುಳುಗುತ್ತಿದ್ದ ಎರಡು ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಕಾಪಾಡಿದ್ದಾರೆ.

ಕಳೆದ ರಾತ್ರಿ ಹಿಮಸಾಗರ್ ಮತ್ತು ಕೃಷ್ಣಸಾಗರ ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ಭಾರತೀಯ ನೌಕಾದಳದ ಹಡಗು ಗಂಗಾ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆ ಹಡಗು ಅಗ್ರಿಮ್ ಜತೆ ಎ ಸೀ ಕಿಂಗ್ 42ಬಿ ಹೆಲಿಕಾಫ್ಟರ್ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು ಎಲ್ಲಾ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದೆ.

ನಿನ್ನೆ ಸಂಜೆ ಹಿಮಸಾಗರ್ ಮತ್ತು ಕೃಷ್ಣಸಾಗರ್ ದೋಣಿಯಲ್ಲಿ 15 ಮಂದಿ ಮೀನುಗಾರರು ಮೀನು ಹಿಡಿಯಲು ತೆರಳಿದ್ದು ರಾತ್ರಿಯಾದರೂ ಬಾರದೆ ಇದ್ದಿದ್ದರಿಂದ ಮೀನುಗಾರರನೊಬ್ಬ ಕರಾವಳಿ ರಕ್ಷಣಾ ಪಡೆಗೆ ವಿಷಯ ಮುಟ್ಟಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

No Comments

Leave A Comment