Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಚಾಲಕನ ನಿದ್ರೆ ಮಂಪರು; ಕಾಲುವೆಗೆ ಉರುಳಿದ ಬಸ್ , 10ಮಂದಿ ಸಾವು

khammamಖಮ್ಮಂ: ತೆಲಂಗಾಣದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ನಿದ್ರೆ ಮಂಪರಿನಲ್ಲಿದ್ದ ಚಾಲಕ ವೇಗವಾಗಿ ಬಸ್ ಚಲಾಯಿಸಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ  ಉರುಳಿದೆ. ಘಟನೆಯಲ್ಲಿ 10 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ರಾತ್ರಿ ಸುಮಾರು 2 ಗಂಟೆ ಸುಮಾರಿನಲ್ಲಿ ಈ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಖಮ್ಮಂ ಜಿಲ್ಲೆಯ ನಾಯಕನೇ ಗೂಡಂ ಪ್ರಾಂತ್ಯದ ಬಳಿ ಬಸ್ ಕಾಲುವೆಗೆ ಉರುಳಿದೆ ಎಂದು  ತಿಳಿದುಬಂದಿದೆ. ಘಟನೆಯಲ್ಲಿ 10 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಖಮ್ಮಂ, ಪಾಲೇರು ಸರ್ಕಾರಿ ಆಸ್ಪತ್ರೆಗೆ ದಾಖಲು  ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕವಾಗಿ ಆಸ್ಪತ್ರೆ ರವಾನಿಸಿದ್ದಾರೆ. ನೀರಿನಲ್ಲಿ ಮುಳುಗಿದ್ದ ಬಸ್  ಅನ್ನು 2 ಕ್ರೇನ್ ಗಳ ಮೂಲಕ ಮೇಲಕ್ಕೆ ಎತ್ತಲಾಗಿದೆ. ಮೂಲಗಳ ಪ್ರಕಾರ ಸುಮಾರು ಸಿಬ್ಬಂದಿ ಸೇರಿದಂತೆ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ಖಾಸಗಿ ಬಸ್ ಹೈದರಾಬಾದ್ ನ  ಮಿಯಾಪುರ್ ನಿಂದ್ ಸೂರ್ಯಪೆಟ್ ಗೆ ಖಮ್ಮಂ, ರಾಜಮಂಡ್ರಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಖಮ್ಮಂ ಜಿಲ್ಲೆಯ ನಾಯಕನೇ ಗೂಡಂ ಪ್ರಾಂತ್ಯದ ಬಳಿ ಕಾಲುವೆಗೆ ಉರುಳಿದೆ.

ಪ್ರತ್ಯಕ್ಷ ದರ್ಶಿಗಳು ತಿಳಿಸಿರುವಂತೆ ಬಸ್ ಅತಿಯಾದ ವೇಗದಿಂದ ಚಲಿಸಿ, ಕಾಲುವೆಗೆ ಉರುಳಿದೆ ಎಂದು ಹೇಳಿದ್ದಾರೆ. ಅಂತೆಯೇ ಗಾಯಗೊಂಡ ಪ್ರಯಾಣಿಕರು ಬಸ್ ಚಾಲಕ ನಿದ್ರೆ  ಮಂಪರಿನಲ್ಲಿದ್ದ ಎಂದು ಆರೋಪಿಸಿದ್ದಾರೆ.

No Comments

Leave A Comment