Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಸ್ಪಷ್ಟ: ಕೃಪಾ ಆಳ್ವ

krupa-alvaಮಂಗಳೂರು: ರಾಜ್ಯದಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆ ಯಾಗಿರುವುದು ಆಯೋಗದ ಗಮನಕ್ಕೆ ಬಂದಿದೆ. ಈ ಕುರಿತು ಆಯೋಗಕ್ಕೆ ರಾಜ್ಯಾದ್ಯಂತ 300ಕ್ಕೂ ಅಧಿಕ ದೂರುಗಳು ಬಂದಿದ್ದು, ಇದಕ್ಕೆ ಶೀಘ್ರದಲ್ಲಿ ಆಯೋಗ ಸ್ಪಂದಿಸಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್‌ ಆಳ್ವ ತಿಳಿಸಿದರು.

ಅವರು ಶನಿವಾರ ನಗರದ ಲೇಡಿಹಿಲ್‌ ಬಳಿಯ ಗಾಂಧಿನಗರ ಹಿ.ಪ್ರಾ. ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಸಮಸ್ಯೆ ಕುರಿತು ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಣ ಪ್ರೇಮಿಗಳು ಹಾಗೂ ಎಸ್‌ಡಿಎಂಸಿ ಅವರಿಂದ ಅಹವಾಲು ಸ್ವೀಕರಿಸಿದರು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ಆ. 24ರಂದು ಈ ಕುರಿತು ಮುಖ್ಯಮಂತ್ರಿಯೊಂದಿಗೆ ಸಭೆ ನಡೆಯಲಿದೆ. ಸಭೆ ಬಳಿಕ ಆಯೋಗ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸರಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕ ವರ್ಗಾವಣೆಯಿಂದ ಹೆಚ್ಚಿನ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮಸ್ಯೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದ್ದು, ಪ್ರಸ್ತುತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ತತ್‌ಕ್ಷಣ ಸಮಸ್ಯೆಯನ್ನು ಅವರಿಗೂ ತಿಳಿಸಲಾಗುವುದು ಎಂದರು.

ಉಳಾಯಿಬೆಟ್ಟು, ಮೂಡುಶೆಡ್ಡೆ, ಸುರತ್ಕಲ್‌, ಅಂಬ್ಲಿಮೊಗರು, ಅಡೂxರು, ಕಿನ್ಯಾ, ಕೆರೆಕಾಡು, ಪಡುಪಣಂಬೂರು, ಮುನ್ನೂರು, ಕೊಂಪದವು, ಮರಕಡ, ಕಾಟಿಪಳ್ಳ ಮೊದಲಾದ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕರ ಕೊರತೆ ಕುರಿತು ಆಯೋಗ ಅಧ್ಯಕ್ಷರ ಗಮನಕ್ಕೆ ತಂದರು.

ಸೇವಾದಳದ ಬಟ್ಟೆ ಏನು ಮಾಡಬೇಕು.?
ಸುರತ್ಕಲ್‌ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯ ಶಿಕ್ಷಕರ ವರ್ಗಾವಣೆ ಕುರಿತು ಮಾತನಾಡಿ, ನಮ್ಮ ಶಾಲೆಯ ಸೇವಾದಳದ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಈಗ ಸೇವಾದಳಕ್ಕೆ ಶಿಕ್ಷಕರಿಲ್ಲ. ಹೀಗಾಗಿ ನಾವು ನಮ್ಮ ಸೇವಾದಳದ ಸಮವಸ್ತ್ರವನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಈ ಸಂದರ್ಭ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಡಿಪಿಐ ಅವರು ಬೇರೆ ಶಿಕ್ಷಕರಿಗೆ ಸೇವಾದಳದ ತರಬೇತಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಬೇರೆ ಶಿಕ್ಷಕರನ್ನು ವರ್ಗಾಯಿಸಿ
ಪಡುಪಣಂಬೂರು ಶಾಲೆಯಲ್ಲಿ ಇಬ್ಬರು ಅಂಗವಿಕಲ ವಿದ್ಯಾರ್ಥಿ ಗಳಿದ್ದಾರೆ. ಅವರನ್ನು ಪ್ರಸ್ತುತ ಶಾಲೆಯಿಂದ ವರ್ಗಾವಣೆಗೊಂಡಿರುವ ಶಿಕ್ಷಕಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಆ ಶಿಕ್ಷಕಿಯನ್ನು ನಮ್ಮಲ್ಲೇ ಉಳಿಸಿಕೊಂಡು ಇನ್ನೊಬ್ಬ ಶಿಕ್ಷಕರನ್ನು ವರ್ಗಾಯಿಸಿ ಎಂದು ವಿದ್ಯಾರ್ಥಿಗಳು ಹಾಗೂ ಹೆತ್ತವರು ಮನವಿ ಮಾಡಿದರು.

ವಿದ್ಯಾರ್ಥಿಗಳ ಸಮಸ್ಯೆ ಕುರಿತು ಶಿಕ್ಷಣ ಪ್ರೇಮಿಯೊಬ್ಬ ಮಾತನಾಡಿ, ಸರಕಾರ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡುವ ಮೂಲಕ ಒಬ್ಬ ವಿದ್ಯಾರ್ಥಿಯ ಭವಿಷ್ಯವನ್ನೇ ಕೊಲ್ಲುತ್ತಿದೆ. ಒಂದು ಶಾಲೆಯಿಂದ ವಿಜ್ಞಾನ ಶಿಕ್ಷಕರು ವರ್ಗಾವಣೆಗೊಂಡರೆ ಆ ವಿದ್ಯಾರ್ಥಿ ವಿಜ್ಞಾನ ಶಿಕ್ಷಣದಿಂದ ವಂಚಿತನಾಗುತ್ತಾವೆ. ಇದರಿಂದ ಆತ ಎಂಜಿನಿಯರೋ, ಡಾಕ್ಟರೋ ಆಗುವ ಅವಕಾಶ ತಪ್ಪಿ ಹೋಗುವ ಸಾಧ್ಯತೆ ಇದೆ ಎಂದು ಆಯೋಗದ ಅಧ್ಯಕರ ಗಮನಕ್ಕೆ ತಂದರು.

ಶಿಕ್ಷಣ ಪ್ರೇಮಿಗಳಾದ ಲೋಲಾಕ್ಷ, ರೆನ್ನಿ ಡಿ’ಸೋಜಾ, ನಿತಿನ್‌ ಕುತ್ತಾರ್‌, ದಯಾನಂದ ಶೆಟ್ಟಿ, ಚರಣ್‌ ಶೆಟ್ಟಿ, ಲೋಕೇಶ್‌ ಗೌಡ ಅಲುಂಬುಡ, ರೆಹ ಮಾನ್‌, ಇಸ್ಮಾಯಿಲ್‌, ಅಶೋಕ್‌ ಭಟ್‌, ಕಮಲಾ ಮೊದಲಾದವರು ಶಿಕ್ಷಕರ ಕೊರತೆಯ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.

ಡಿಡಿಪಿಐ ವಾಲ್ಟರ್‌ ಡಿಮೆಲ್ಲೊ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಶಿಕ್ಷಣಾಧಿಕಾರಿ ಸದಾನಂದ ಪೂಂಜ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment