Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಬಿಎಸ್‌ವೈ ಅವರೇ ಮುಂದಿನ ಸಿಎಂ: ಶಾ ಸ್ಪಷ್ಟ ಸಂದೇಶ

bsyಮಂಗಳೂರು:  “ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌’ ಹಿನ್ನೆಲೆಯಲ್ಲಿ ಈಶ್ವರಪ್ಪ-ಯಡಿಯೂರಪ್ಪ ನಡುವೆ ಮುಸುಕಿನ ಗುದ್ದಾಟ, ಹಲವು ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯ ನಾಯಕರ ಆಂತರಿಕ ಅಸಮಾಧಾನ ಆರಂಭ ಗೊಂಡಿರುವ ಬೆನ್ನ ಹಿಂದೆಯೇ, ಮಂಗಳೂರಿನ ತಿರಂಗ ಯಾತ್ರೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮಂಗಳೂರಿನಲ್ಲಿ ರವಿವಾರ ತಿರಂಗ ಯಾತ್ರೆಯ ಬೃಹತ್‌ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ತನ್ನ ಭಾಷಣದಲ್ಲಿ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದೇ ಸಂಬೋಧಿ ಸಿದರು. ದೇಶಾದ್ಯಂತ ಮೋದಿ ಅಲೆ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಬಿಜೆಪಿ ಅಧಿಕಾರಕ್ಕೆ ಬಂದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದರು.

ಭಾಷಣ ಆರಂಭಿಸಿದ ಅಮಿತ್‌ ಶಾ, ವೇದಿಕೆಯಲ್ಲಿದ್ದವರ ಹೆಸರುಗಳನ್ನು ಉಲ್ಲೇಖೀಸಿದರು. ಈ ವೇಳೆ, ಯಡಿಯೂರಪ್ಪ ಅವರ ಹೆಸರು ಹೇಳುತ್ತಾ  “ಕರ್ನಾಟಕ್‌ಗೆ ಪೂರ್ವ ಔರ್‌ ಹೋನೆವಾಲೆ ಮುಖ್ಯಮಂತ್ರಿ’ (ಕರ್ನಾಟಕದಲ್ಲಿ ಹಿಂದೆ ಇದ್ದ ಮುಖ್ಯ ಮಂತ್ರಿ ಹಾಗೂ ಮುಂದೆ ಮುಖ್ಯ ಮಂತ್ರಿಯಾಗುವವರು) ಎಂದೇ ಸಂಬೋಧಿಸಿದರು. ಆಗ ಸಭೆಯಲ್ಲಿ ಭಾರೀ ಹರ್ಷೋದ್ಘಾರ ಹಾಗೂ ಕರತಾಡನ ವ್ಯಕ್ತವಾಯಿತು. ಅಲ್ಲದೆ, ರಾಜ್ಯ ಬಿಜೆಪಿಯಲ್ಲಿ ಪ್ರಸ್ತುತ ನಡೆ ಯುತ್ತಿರುವ ವಿದ್ಯಮಾನಗಳ ಬಗ್ಗೆ ಇದು ಪರೋಕ್ಷವಾಗಿ ಒಂದು ಸಂದೇಶ ವಾಗಿಯೂ ಗೋಚರಿಸಿತು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರ “ಹಿಂದ’ ಸಮಾವೇಶ ಹಾಗೂ  “ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌’ ಸ್ಥಾಪನೆ ಹಿನ್ನೆಲೆ ಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಒಡಮೂಡಿದೆ. ಅದರಲ್ಲೂ ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿ ಯೂರಪ್ಪ  ನಡುವೆ ಮುಸುಕಿನ ಗುದ್ದಾಟ ಆರಂಭಗೊಂಡಿದೆ. ಯಡಿಯೂರಪ್ಪಗೆ ಸಿಎಂ ಸ್ಥಾನ ತಪ್ಪಿಸುವ ಹುನ್ನಾರ ಪಕ್ಷದ ನಾಯಕರಿಂದಲೇ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಾ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.

No Comments

Leave A Comment