Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಉಡುಪಿ ಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ: ಸಚಿವ ರೈ

ಉಡುಪಿ: ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ ನೀಡುವುದಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. KAT_4137ರಾಜಾಂಗಣದಲ್ಲಿ ರವಿವಾರ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣಮಠಕ್ಕೆ ಹಿಂದೆ ವೀರಪ್ಪ ಮೊಲಿ ಆನೆ ನೀಡಿದ್ದರು. ಆನೆ ಸುಭದ್ರೆಯನ್ನು ಅರಣ್ಯ ಇಲಾಖೆಗೆ ಚಿಕಿತ್ಸೆಗೆ ನೀಡಿದ್ದು ತಿಳಿದಿದೆ. ಅಷ್ಟಮಿ ಉತ್ಸವಕ್ಕೆ ಅಧಿಕಾರಿಧಿಗಳಲ್ಲಿ ಮಾತನಾಡಿ ಆನೆ ನೀಡುತ್ತೇನೆ ಎಂದರು.

ಉಭಯ ಜಿಲ್ಲೆಗಳಲ್ಲಿ ಕೃಷ್ಣಾಷ್ಟಮಿ ಉತ್ಸವ, ಮೊಸರುಕುಡಿಕೆ ಸಂಭ್ರಮ ಜರುಗುತ್ತಿದೆ. ನಾನು ಚಿಕ್ಕವನಿದ್ದಾಗ ಅಷ್ಟಮಿ, ಚೌತಿಯ ಮರ್ಯಾದೆಧಿಗೆಂದು ಜನರು ಬರುತ್ತಿದ್ದರು. ಇದು ಮರ್ಯಾದೆಯಲ್ಲ. ಹಸಿವು ಇಂಗಿಸುವ ಕೆಲಸ. ಆಗ ಬಡತನವಿತ್ತು, ಈಗ ಅಂತಹ ಬಡತನವಿಲ್ಲ ಎಂದು ರೈ ಹೇಳಿದರು.

ಸಚಿವ ಪ್ರಮೋದ್‌ ಮಧ್ವರಾಜ್‌ ಕೃಷ್ಣಾಷ್ಟಮಿ ಆಚರಣೆ ಮಹತ್ವದ ಕುರಿತು ಮಾತನಾಡಿದರು. ಪರ್ಯಾಯ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನಧಿತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪ್ರೊ. ಎಂ.ಎಲ್‌. ಸಾಮಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಕೃಷ್ಣನ ರಾಜನೀತಿ ಮೂಲಕ ಅಭಿವೃದ್ಧಿ: ಸೂಲಿಬೆಲೆ
ಶ್ರೀಕೃಷ್ಣನ ಬದುಕಿನುದ್ದಕ್ಕೂ ರಾಜನೀತಿ ಎದ್ದು ಕಾಣುತ್ತದೆ. ರಾಮ, ಕೃಷ್ಣ, ಚಾಣಕ್ಯರ ಭಾವಚಿತ್ರ ಕಾಣದೆ ಅವರ ಶಕ್ತಿ, ಯುಕ್ತಿ, ಪ್ರೇಮದ ದಾರಿ ತೋರಿ ರಾಷ್ಟ್ರದ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.  “ಶ್ರೀಕೃಷ್ಣನ ರಾಜನೀತಿ’ ಕುರಿತು ಮಾತನಾಡಿದ ಅವರು, ರಾಜಕೀಯ ಮತ್ತು ರಾಜನೀತಿ ಬೇರೆ. ರಾಜನೀತಿ ಅರಿತ ರಾಜಕಾರಣಿ ಮಾತ್ರ ರಾಜನೀತಿಜ್ಞನಾಗುತ್ತಾನೆ ಎಂದರು.

ಪಾಂಡವರು ಕೌರವರಲ್ಲಿ ಐದು ಗ್ರಾಮಗಳನ್ನು ಕೇಳಿದ ಕತೆ ಗೊತ್ತಿದೆ. ಅರಗಿನ ಮನೆಯನ್ನು ಸುಟ್ಟ ಗ್ರಾಮ, ಇಂದ್ರಪ್ರಸ್ಥದ ಗ್ರಾಮ ಮತ್ತು ಯಾವುದೇ ಇತರ ಎರಡು ಗ್ರಾಮಗಳನ್ನು ಪಾಂಡವರು ಕೇಳಿ ಹಿಂದೆ ಮಾಡಿದ ಮೋಸಕ್ಕೆ ಪ್ರತ್ಯುತ್ತರ ಕೊಡುತ್ತಾರೆ. ಇದು ರಾಜನೀತಿ. ಕೃಷ್ಣ ವಿದುರನ ಮನೆಗೆ ಹೋಗಿ ವಿದುರನೂ ಮೇಲಕ್ಕೇರಿದ, ತಾನೂ ಮೇಲ್ದರ್ಜೆಗೇರಿದ. ಭಾರತದ ಪ್ರಧಾನಿ ಮೊದಲು ಪುಟ್ಟ ದೇಶ ಭೂತಾನಕ್ಕೆ ತೆರಳಿ ಚೀನಕ್ಕೆ ಸಡ್ಡು ಹೊಡೆದರು. ಪ್ರಧಾನಿ ಕಚೇರಿಯಿಂದ ಆ. 15ರಂದು ಕಾಶ್ಮೀರ ಮಾತ್ರವಲ್ಲ ಪಾಕ್‌ ಆಕ್ರಮಿತ ಕಾಶ್ಮೀರವೂ ನಮಗೆ ಸೇರಿದ್ದು, ಬಲೂಚಿಸ್ಥಾನದ ಮೇಲೆ ಪಾಕಿಸ್ಥಾನ ನಡೆಸುವ ಭಯೋತ್ಪಾದನೆ ವಿಷಯ ಎತ್ತುತ್ತೇವೆ ಎಂಬ ಸಂದೇಶ ಹೋದದ್ದೆ ಸರಿ ಈಚೆ ಬಾಂಗ್ಲಾ, ಆಚೆ ಅಫ್ಘಾನಿಸ್ಥಾನ ಬೆಂಬಲಕ್ಕೆ ನಿಂತಿತು. ಚೀನ ನ್ಯೂಕ್ಲಿಯರ್‌ ಒಕ್ಕೂಟದಿಂದ ಭಾರತವನ್ನು ಹೊರಗಿಡಲು ಯತ್ನಿಸಿದಾಗ ಕ್ಷಿಪಣಿ ತಂತ್ರಜ್ಞಾನದ ಒಕ್ಕೂಟದಲ್ಲಿ ಭಾರತ ಸದಸ್ಯನಾಯಿತು. ಇದು ರಾಜನೀತಿ ಎಂದರು.

ಕೃಷ್ಣನ ಪ್ರೀತಿ ಬಡವರ ಮೇಲೆ: ತೋಳ್ಪಾಡಿ
ಕೃಷ್ಣನಿಗೆ ರುಕ್ಮಿಣಿ ಪ್ರೇಮಪತ್ರ ಬರೆದ ಬಳಿಕ ಮೊತ್ತಮೊದಲು ಹೇಳಿದ್ದು, ನನಗೆ ಸಂಸಾರದಲ್ಲಿ ಆಸಕ್ತಿ ಇಲ್ಲ. ಆತ್ಮದ ಲಾಭವಾಗಿರುವುದರಿಂದ ಎಲ್ಲವನ್ನೂ ಸಾಕ್ಷೀಪ್ರಜ್ಞೆಯಿಂದ ನೋಡುತ್ತೇನೆ. ನನಗೆ ಬಡವರ ಮೇಲೆ ಬಹಳ ಪ್ರೀತಿ, ಸಿರಿವಂತರ ಮೇಲಲ್ಲ ನಾನೂ ಬಡವ ಎಂದು. ರುಕ್ಮಿಣಿಯನ್ನು ಲಕ್ಷ್ಮೀ ಎಂದು, ಕೃಷ್ಣನನ್ನು ನಾರಾಯಣ ಎಂದು ತಿಳಿಯುವುದಾದರೆ ಕೃಷ್ಣ ಮಾತ್ರ ಹೇಳಬಹುದಾದ ಭ್ರಮೆಯನ್ನು ನಿರಸನ ಮಾಡುವ ಮಾತಿದು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ನನ್ನನ್ನು ಹೇಗೆ ನೋಡುತ್ತಾರೋ ನಾನು ಹಾಗೆ ತೋರುತ್ತೇನೆ ಎಂದು ಕೃಷ್ಣ ಹೇಳುತ್ತಾನೆ. ಗುರಿ ಮತ್ತು ದಾರಿ ಕುರಿತು ಹೇಳುವುದಾದರೆ ದಾರಿಯಲ್ಲಿ  ಹೋಗುವವರು ನನ್ನ ದಾರಿ ಇದೆಂದು ಹೇಳಬೇಕಷ್ಟೆ. ಗುರಿ ಮಾತ್ರ ಅದು ತನ್ನತನವನ್ನು ಹೇಳಬಹುದು. ಆಗ ಗುರಿಯೇ ದಾರಿ ತೋರಿಸುತ್ತದೆ. ನಾವು ಸತ್ಯವನ್ನು ಭೇದಿಸಧಿಲಾರೆವು, ಸತ್ಯ ತನ್ನನ್ನು ತೋರಿಸಬೇಕಷ್ಟೆ ಎಂದು ತೋಳ್ಪಾಡಿ ಹೇಳಿದರು.

 

No Comments

Leave A Comment