Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ವಿಶ್ವದ ಅತೀ ದೊಡ್ಡ ಗಾಜಿನ ಸೇತುವೆ ಲೋಕಾರ್ಪಣೆ ಮಾಡಿದ ಚೀನಾ

china-glass-bridgeಬೀಜಿಂಗ್: ವಿವಿಧ ಬಗೆಯ ವಿನೂತ ನಿರ್ಮಾಣಗಳನ್ನು ಮಾಡುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಇದೀಗ ಮತ್ತೊಂದು ವಿಶ್ವದಾಖಲೆಯ ಗಾಜಿನ  ಸೇತುವೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ.

ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬೃಹತ್ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದ್ದು, ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಗಾಜು ಸೇತುವೆ ಎಂಬ ಖ್ಯಾತಿಗೆ ಒಳಗಾಗಿದೆ. ಹುನಾನ್  ಪ್ರಾಂತ್ಯದಲ್ಲಿರುವ ಎರಡು ಬೆಟ್ಟಗಳ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಈ ಸೇತುವೆ ಸಮುದ್ರಮಟ್ಟದಿಂದ ಸುಮಾರು 1,410 ಅಡಿ (430 ಮೀಟರ್) ಎತ್ತರದಲ್ಲಿದೆ.

ಪ್ರವಾಸಿಗರ ಆಕರ್ಷಣೆಗೆ ತಯಾರಾಗಿರುವ ಸೇತುವೆಯಲ್ಲಿ ಮೂರು ಪದರ ಗಾಜಿನ ಕೋಟಿಂಗ್ ಇದ್ದು, ಇದರ ಮೇಲೆ ನಡೆದುಕೊಂಡು ಆಳದ ಭೂಮಿಯ ವೀಕ್ಷಣೆ ಮಾಡುವುದು ರೋಮಾಂಚನ  ಎಂದು ಬಣ್ಣಿಸಲಾಗಿದೆ. ಈ ಬೃಹತ್ ಸೇತುಗೆ 3 ಪದರಗಳ 99 ಬೃಹತ್ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಈ ಗಾಜಿನ ಸೇತುವೆ ನಿರ್ಮಾಣಕ್ಕಾಗಿ ಚೀನಾ ಸುಮಾರ 3.4 ಬಿಲಿಯನ್  ವ್ಯಯಿಸಿದೆ.

ಮೂಲಗಳ ಪ್ರಕಾರ ಈ ಬೃಹತ್ ಸೇತುವೆ 6 ಮೀಟರ್ ಅಗಲವಿದ್ದು, ಇಸ್ರೇಲ್ ಮೂಲದ ನಿರ್ಮಾಣ ಸಂಸ್ಥೆ ಹೇಮ್ ಡೊಟಾನ್ ಈ ಗಾಜಿನ ಸೇತುವೆಯನ್ನು ನಿರ್ಮಿಸಿದೆ. ಆ ಮೂಲಕ ವಿಶ್ವದ  ಅತೀ ದೊಡ್ಡ ಗಾಜಿನ ಸೇತುವೆ ನಿರ್ಮಾಣ ಮಾಡಿದ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ. ಇನ್ನು ಪ್ರತೀ ದಿನ ಈ ಸೇತುವೆ ವೀಕ್ಷಣೆಗೆ ಗರಿಷ್ಠ 8 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜೂನ್​ನಲ್ಲಿ ರಕ್ಷಣೆ ಪರೀಕ್ಷೆ ನಡೆಸಿದ್ದ ಚೀನಾ ಇದೀಗ ಸೇತುವೆಯನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.

‘ಅವತಾರ್’ ಎಂಬ ಹಾಲಿವುಡ್​ನ ಸೂಪರ್​ಹಿಟ್ ಚಿತ್ರದ ಕೆಲಭಾಗವನ್ನು ಇದೇ ತಿಯಾನ್ಮನ್ ಮೌಂಟೇನ್ ನ್ಯಾಷನಲ್ ಪಾರ್ಕ್ ಬೆಟ್ಟದ ತಪ್ಪಲಲ್ಲಿ ಶೂಟಿಂಗ್ ಮಾಡಲಾಗಿತ್ತು ಎಂಬುದು ವಿಶೇಷ.

No Comments

Leave A Comment