Log In
BREAKING NEWS >
ಜುಲೈ.5ಕ್ಕೆ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆ: ಸಿಎಂ ಕುಮಾರಸ್ವಾಮಿ.....ಉಗ್ರರ ದಮನಕ್ಕೆ ಕಾಶ್ಮೀರ ಸಿದ್ಧ : ಕಾಶ್ಮೀರಕ್ಕೆ Snipers, NSG ರವಾನೆ

ರಿಯೋ ಒಲಿಂಪಿಕ್ಸ್: ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು

rio-sindhuರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಸ್ಪೇನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಪರಾಭವಗೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸೆಟ್ ನ ಜಿದ್ದಾಜಿದ್ದಿನ ಹೋರಾಟದಲ್ಲಿ 21-19 ಅಂಕಗಳ ಅಂತರದಲ್ಲಿ ಮಣಿಸಿದರು. ಎರಡನೇ ಸೆಟ್ ನಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್ 21-12 ಅಂಕಗಳಿಂದ ಸಿಂಧುರನ್ನು ಮಣಿಸಿದರು. ಮೂರನೇ ಸೆಟ್ ನಲ್ಲಿ ಸಿಂಧು ವಿರುದ್ಧ ಮತ್ತೆ ಆಕ್ರಮಣ ಆಟವಾಡಿದ ಮರಿನ 21-15 ಅಂಕಗಳಿಂದ ಸೋಲಿಸಿ ಸ್ವರ್ಣಕ್ಕೆ ಮುತ್ತಿಟ್ಟರು. ಇದರೊಂದಿಗೆ ಸಿಂಧು ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಸಾಂಬಾ ನಾಡಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್ ನ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದ ಪಿವಿ ಸಿಂಧು ಭಾರತದ ಪರ ಬೆಳ್ಳಿ ಪದಕಕ್ಕೆ ತೃಪ್ತರಾದರು

No Comments

Leave A Comment