Log In
BREAKING NEWS >
ಕೊಪ್ಪಳದಲ್ಲಿ ಮುಂಜಾನೆ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ....

ರನ್ನಿಂಗ್ ನಲ್ಲಿ ಮತ್ತೆ “ಕಿಂಗ್” ಆದ ಉಸೇನ್ ಬೋಲ್ಟ್

Usain-Boltರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಮತ್ತೆ ಚಿನ್ನ ಗೆದ್ದಿದ್ದು, ಶನಿವಾರ ನಡೆದ 400 ಮೀಟರ್ ಓಟದ  ಫೈನಲ್ ಸ್ಪರ್ಧೆಯಲ್ಲಿ ಜಯ ಸಾಧಿಸುವ ಮೂಲಕ ಕೂಟದಲ್ಲಿ 3ನೇ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ರಿಯೋ ಡಿ ಜನೈರೋದಲ್ಲಿರುವ ಕ್ರೀಡಾ ಗ್ರಾಮದಲ್ಲಿ ನಡೆದ 400 ಮೀಟರ್ ರಿಲೇ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಜಮೈಕನ್ ಕಿಂಗ್ ಉಸೇನ್ ಬೋಲ್ಟ್ 37.27 ಸೆಕೆಂಡ್ ಗಳಲ್ಲಿ ಗುರಿ ತಲುಪುವ  ಮೂಲಕ ಕೂಟದಲ್ಲಿ 3ನೇ ಚಿನ್ನದ ಗಳಿಸಿದರು. ಈಗಾಗಲೇ ಕ್ರೀಡಾಕೂಟದ 100 ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನಗೆದ್ದಿರುವ ಬೋಲ್ಟ್ 400 ಮೀಟರ್ ರಿಲೇಯಲ್ಲೂ ಚಿನ್ನಗೆಲ್ಲುವ  ಮೂಲಕ ತಮ್ಮ ತ್ರಿವಳಿ-ತ್ರಿವಳಿ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಈ ಹಿಂದಿನ 2 ಕ್ರೀಡಾಕೂಟಗಳಲ್ಲಿಯೂ ಇದೇ ಸಾಧನೆ ಮಾಡಿದ್ದ ಬೋಲ್ಟ್ ಹಾಲಿ ಒಲಿಂಪಿಕ್ಸ್ ನಲ್ಲೂ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇನ್ನು ಈ ಫೈನಲ್ ಸ್ಪರ್ಧೆಯಲ್ಲಿ ಬೋಲ್ಟ್ ಗೆ ತೀವ್ರ ಪೈಪೋಟಿ ನೀಡಿದ್ದ ಅಮೆರಿಕ ಮತ್ತು ಜಪಾನ್ ದೇಶದ ಆಟಗಾರರು ಲೈನ್ ಕ್ರಾಸ್ ಮಾಡಿದ ಹಿನ್ನಲೆಯಲ್ಲಿ ಅವರನ್ನು ಸ್ಪರ್ಧೆಯಿಂದ  ಅನರ್ಹಗೊಳಿಸಲಾಯಿತು.

No Comments

Leave A Comment