Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಖಾಸಗಿ ಬಸ್’ಗೆ ಆ್ಯಂಬುಲೆನ್ಸ್ ಡಿಕ್ಕಿ: ರೋಗಿ ಸಾವು, 5 ಗಾಯ

ambulanceಬೆಂಗಳೂರು: ವೇಗವಾಗಿ ಬರುತ್ತಿದ್ದ ಆ್ಯಂಬುಲೆನ್ಸ್’ವೊಂದು ಖಾಸಗಿ ಬಸ್’ಗೆ ಡಿಕ್ಕಿ ಹೊಡೆದ ಪರಿಣಾಮ ಆ್ಯಂಬುಲೆನ್ಸ್ ಒಳಗಿದ್ದ ಮಹಿಳಾ ರೋಗಿ ಸ್ಥಳದಲ್ಲೇ ಮೃತಪಟ್ಟು 5 ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನ ಟೋಲ್ ಪ್ಲಾಜಾದ ಬಳಿ ಶುಕ್ರವಾರ ನಡೆದಿದೆ.

ಈರಮ್ಮ (46) ಮೃತಪಟ್ಟ ಮಹಿಳೆಯಾಗಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದವರಾಗಿದ್ದಾರೆ. ಹೃದಯ ಸ್ತಂಭನ ಸಮಸ್ಯೆಯಿಂದ ಬಳಲುತ್ತಿದ್ದ ಈರಮ್ಮ ಅವರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಶುಕ್ರವಾರ ಮುಂಜಾನೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಕುಟುಂಬಸ್ಥರು ಆ್ಯಂಬುಲೆನ್ಸ್ ನಲ್ಲಿ ಈರಮ್ಮ ಅವರನ್ನು ನಗರಕ್ಕೆ ಕರೆತರುತ್ತಿದ್ದರು.

ಬೆಳಿಗ್ಗೆ 6.45ರ ಸುಮಾರಿಗೆ ತುಮಕೂರು ಕಡೆಯಿಂದ ಬಂದ ಕೆನರಾ ಪಿಂಟೋ ಟ್ರಾವೆಲ್ಸ್ ಗೆ ಸೇರಿದ ಬಸ್ ಟೋಲ್ ಗೇಟ್ ದಾಟಿ ರಸ್ತೆಯ ಎಡಭಾಗದಲ್ಲಿ ನಿಲುಗಡೆಯಾಗಿ ಪ್ರಯಾಣಿಕರನ್ನು ಇಳಿಸುತ್ತಿತ್ತು. ಇದೇ ವೇಳೆ ವೇಗವಾಗಿ ಬಂದ ಆ್ಯಂಬುಲೆನ್ಸ್ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಈರಮ್ಮ ಆ್ಯಂಬುಲೆನ್ಸ್ ನಲ್ಲಿಯೇ ಮೃತಪಟ್ಟಿದ್ದಾರೆ. ಅಲ್ಲದೆ, ಚಾಲಕ, ಸುಶ್ರೂಶಕ ಹಾಗೂ ಈರಮ್ಮ ಅವರ ಮೂವರು ಸಂಬಂಧಿಕರು ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಚಾಲಕನನ್ನು ಬಂಧನಕ್ಕೊಳಪಡಿಸಿರುವ ಪೀಣ್ಯ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment