Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

190816ರಾಮನಗರ: ವ್ಯಕ್ತಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸತೀಶ್‌ (35), ಮಂಜುಳಾ ಹಾಗೂ ಅವರ ಮಕ್ಕಳಾದ ವಿಜಯ್‌ (5), ಶ್ರೇಯಾ (3) ಮೃತರು. ಸತೀಶ್‌ ಕೂಲಿ ಕೆಲಸ ಮಾಡಿ ಕೊಂಡಿ ದ್ದರೆ, ಅವರ ಪತ್ನಿ ಗಾರ್ಮೆಂಟ್‌ ಕಾರ್ಖಾ ನೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.

ಈ ಕುಟುಂಬದವರು ಬುಧ ವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದು, ಗುರುವಾರ ಮುಂಜಾನೆ 9 ಗಂಟೆಯಾದರೂ ಮನೆಯ ಬಾಗಿಲು ತೆರೆದಿಲ್ಲ. ಮಂಜುಳಾರ ತಾಯಿ ಹಾಗೂ ಸಹೋದರಿ ಸಮೀಪದಲ್ಲಿಯೇ ಮನೆ ಮಾಡಿಕೊಂಡಿದ್ದು, ಬೆಳಿಗ್ಗೆಯಾದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಮನೆಗೆ ಬಂದು ಕಿಟಕಿ ಮೂಲಕ ನೋಡಿದ್ದಾರೆ.

ಈ ಸಂದರ್ಭ ಛಾವಣಿಯಲ್ಲಿ ಸತೀಶ್‌ ಶವ ನೇತಾಡುತ್ತಿರುವುದು ಕಂಡು ಬಂತು. ಬಾಗಿಲು ಒಡೆದು ಒಳಹೋದ ಬಳಿಕ ಉಳಿದ ಮೂವರೂ ಮೃತಪಟ್ಟಿರುವುದು ಕಂಡುಬಂತು ಎಂದು ಕುಂಬಳಗೋಡು ಠಾಣೆ ಪೊಲೀಸರು ತಿಳಿಸಿದರು.

ಸತೀಶ್‌ ತನ್ನ ಪತ್ನಿ ಹಾಗೂ ಮಕ್ಕಳನ್ನು ಟವಲ್‌ನಿಂದ ಕುತ್ತಿಗೆಗೆ ಬಿಗಿದು ಕೊಂದು ಬಳಿಕ ತಾನೂ ಆತ್ಮ ಹತ್ಮೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶವಗಳ ಮರ ಣೋತ್ತರ ಪರೀಕ್ಷೆ ಬಳಿಕ ವಾರಸು ದಾರರಿಗೆ ಒಪ್ಪಿಸಲಾಯಿತು.

No Comments

Leave A Comment