Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಕೀಟನಾಶಕ ಸೇವಿಸಿ ಹಾಗೂ ಕೈಯ ರಕ್ತ ನಾಳವನ್ನು ಕತ್ತರಿಸಿ ಆತ್ಮಹತ್ಯ

19(2)ಉಡುಪಿ: ಪಿರ್ಯಾದಿದಾರರಾದ ಪ್ರವೀಣ ಕುಮಾರ್ (30), ತಂದೆ: ಶಂಕರ ಗುಜರನ್, ವಾಸ: ಅಡ್ವೆ ಗರಡಿ ಮನೆ ನಂದಿಕೂರು ಪೋಸ್ಟ್ ಉಡುಪಿ ಇವರು ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಇರುವ  ಶಾಂತಲಾ ಲಾಡ್ಜ್‌‌ನಲ್ಲಿ ಮ್ಯಾನೇಜರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 16/08/2016 ರಂದು ಬೆಳಿಗ್ಗೆ 7:15 ಗಂಟೆಗೆ  ಸುಮಾರು 60 ರಿಂದ 65 ವರ್ಷದ ಎಸ್ ವಿಶ್ವನಾಥ ಎಂಬುವವರು  ದೇವಸ್ಥಾನಕ್ಕೆ ಎಂದು ಕಾರಣ ಹೇಳಿ ರೂಂ ಪಡೆದಿದ್ದು , ಅವರು ದಿನಾಂಕ 18/08/2016 ರಂದು ರೂಂನಿಂದ ಹೊರಗೆ ಬಾರದ ಕಾರಣ ಹಾಗೂ ರೂಂನ ಬಾಡಿಗೆ ಪಾವತಿಸದ ಕಾರಣ ವಿಚಾರಿಸಲು ರೂಂಗೆ ರೂಂ ಬಾಯ್ ಶಂಕರಪ್ಪ ಎಂಬುವವರನ್ನು ಕಳುಹಿಸಿದ್ದು ಅವರು ವಾಪಾಸು ಬಂದು ರೂಂ ಲಾಕ್ ಮಾಡಿದ್ದಾಗಿ ತಿಳಿಸಿದ್ದು, ರಾತ್ರಿ 8:00 ಗಂಟೆಗೆ  ರೂಂ ತೆರೆಯದ ಕಾರಣ ಇನ್ನೊಂದು ಕೀಯಿಂದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾಗ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದ್ದು ಈ ವಿಚಾರವನ್ನು ಮಾಲಕರಾದ ಸುಂದರ ಶೆಟ್ಟಿರವರಿಗೆ ತಿಳಿಸಿ ಬಾಗಿಲನ್ನು ಒಡೆದು ಒಳಗೆ ನೋಡಿದಾಗ ಆ ವ್ಯಕ್ತಿಯು ನೆಲದ ಮೇಲೆ ಮೃತ ಪಟ್ಟು ಬಿದಿದ್ದು ಎಡಗೈಯ ಮಣಿ ಗಂಟಿನ ಹತ್ತಿರ ಗಾಯ ಮಾಡಿಕೊಂಡು ರಕ್ತ ನೆಲದ ಮೇಲೆ ಬಿದ್ದಿದ್ದು ಯಾವುದೋ ಕೀಟನಾಶಕದ ಬಾಟಲಿ ಇದ್ದು,  ಆ ವ್ಯಕ್ತಿಯು ಯಾವುದೋ ಕಾರಣದಿಂದ ಕೀಟನಾಶಕ ಸೇವಿಸಿ ಹಾಗೂ ಕೈಯ ರಕ್ತ ನಾಳವನ್ನು ಕತ್ತರಿಸಿ ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 63/2016 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

No Comments

Leave A Comment