Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ವಿಶ್ವ ಛಾಯಾಗ್ರಹಣ ದಿನಾಚರಣೆ; ಉಪ್ಪಾ ಪುರಸ್ಕಾರ್

Uppa_news_photo1ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮುಂಬಾಯಿಯ ಛಾಯಾಚಿತ್ರಗಾರ ಸುಧಾರಕ ಓಳ್ವೆ ಉಡುಪಿ ಪ್ರೆಸ್ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ಸ್ (ಉಪ್ಪಾ) ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರ ಲಯನ್ ಕೆ.ನವೀನ್‌ಚಂದ್ರ ಬಲ್ಲಾಳ್‌ರವರನ್ನು ಉಡುಪಿಯ ನವೀನ್ ಸ್ಟುಡಿಯೋದಲ್ಲಿ “ಛಾಯಾ ಸ್ಫೂರ್ತಿ” ಬಿರುದು ನೀಡಿ ಸನ್ಮಾನಿಸಿ ಮಾತನಾಡಿದರು. ಛಾಯಾಗ್ರಹಣವಿಲ್ಲದ ಪ್ರಪಂಚವನ್ನು ನಾವಿಂದು ಊಹಿಸಲೂ ಸಾಧ್ಯವಿಲ್ಲ. ವೃತ್ತಿಯಲ್ಲಿ ಸೇವಾ ಮನೋಭಾವದೊಂದಿಗೆ ವ್ಯವಹರಿಸಿದರೆ ಯಶಸ್ಸು ಖಂಡಿತ ಎಂದರು.

ಉಪ್ಪಾ ಪುರಸ್ಕಾರ ಸ್ವಿಕರಿಸಿದ ಕೆ. ನವೀನ್‌ಚಂದ್ರ ಬಲ್ಲಾಳ್ ೩೫ ವರ್ಷದಿಂದ ಈ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದೇನೆ. ಕಪ್ಪು ಬಿಳುಪಿನ ಸಮಯದಲ್ಲಿ ಛಾಯಾಗ್ರಹಣ ಬಹಳ ಕಷ್ಟದ ಕೆಲಸ. ಉಡುಪಿಗೆ ಬಂದ ವಿವಿ‌ಐಪಿಗಳ ಫೋಟೋ ತೆಗೆಯಲು ಅಧಿಕೃತ ಛಾಯಾಚಿತ್ರಗ್ರಾಹಕನಾಗಿ ತನ್ನ ಅನುಭವವನ್ನು ಹಂಚಿಕೊಂಡು ಉಪ್ಪಾ ಸಂಘಟನೆಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪ್ಪಾದ ಅನಂತಕೃಷ್ಣ ಭಾಗವತ್ ಹಾಗು ಎಸ್‌ಕೆಪಿ‌ಎ ಉಡುಪಿ ವಲಯ ಅಧ್ಯಕ್ಷ ವಾಮನ ಪಡುಕರೆ, ಕಾರ್ಯದರ್ಶಿ ಸಂತೋಷ್ ಕೊರಂಗ್ರಪಾಡಿ, ಸುರಭಿ ರತನ್, ಗೋವಿಂದ ಕಲ್ಮಾಡಿ, ಜೇಸಿ ರಾಘವೇಂದ್ರ ಪ್ರಭು ಕರ್ವಾಲು, ದಯಾನಂದ ನಿಟ್ಟೂರು, ಅಶೋಕ್, ಪ್ರಸಾದ್ ಜತ್ತನ್, ಧನಂಜಯ್, ಈಶನ್ ಬಲ್ಲಾಳ್ ಉಪಸ್ಥಿತರಿದ್ದರು. ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಕಲ್ಯಾಣ್‌ಪುರ ವಂದಿಸಿದರು. ಕೋಶಾಧ್ಯಕ್ಷ ಆಸ್ಟ್ರೋಮೋಹನ್ ನಿರೂಪಿಸಿ, ಪ್ರಸ್ತಾವನೆಗೈದರು.

No Comments

Leave A Comment