Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಮಲ್ಪೆ ವಡಭಾಂಡೇಶ್ವರದಲ್ಲಿ ಸಮಸ್ತ ಮೀನುಗಾರರಿಂದ ಸಮುದ್ರಪೂಜೆ

alpe-Samಮಲ್ಪೆ: ಸಮಸ್ತ ಮೀನುಗಾರರ ಶ್ರೇಯೋಭಿವೃದ್ಧಿಗೆ ಮಲ್ಪೆ ಮೀನುಗಾರ ಸಂಘದ ವತಿಯಿಂದ ವಡಭಾಂಡೇಶ್ವರ ಸಮುದ್ರತೀರದಲ್ಲಿ ಆ. 18ರಂದು ಸಮುದ್ರಪೂಜೆ ನಡೆಯಿತು. ಬೆಳಗ್ಗೆ ಮೀನುಗಾರರೆಲ್ಲರೂ ವಡಭಾಂಡ ಬಲರಾಮ ದೇವಸ್ಥಾನ ಮತ್ತು ಬಬ್ಬರ್ಯ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಜನೆ, ವಾಧ್ಯಘೋಷಗಳೊಂದಿಗೆ ಶೋಭಾಯಾತ್ರೆಯಲ್ಲಿ ಬಂದು ಸಮುದ್ರ ತೀರದಲ್ಲಿ ಪೂಜಾ ಕೈಂಕರ್ಯ ನಡೆಸಿದರು. ಮುಂಬರುವ ದಿನಗಳಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಆತಂಕಗಳು ಬಾರದಿರಲಿ, ಹೇರಳ ಮತ್ಸé ಸಂಪತ್ತು ಲಭಿಸಲಿ ಎಂದು ಮೀನುಗಾರೆಲ್ಲರೂ ಸಾಮೂಹಿಕವಾಗಿ ಪ್ರಾರ್ಥಿಸಿ ಸೀಯಾಳ, ಫಲ ಪುಷ್ಪ, ಕ್ಷೀರವನ್ನು ಗಂಗಾಧಿಮಾತೆಗೆ ಅರ್ಪಿಸಿದರು.

ಸುರಕ್ಷೆಯ ಮೀನುಗಾರಿಕೆಯಾಗಲಿ: ಮೀನುಗಾರಿಕಾ ಸಚಿವ ಪ್ರಮೋದ್‌
ಸಮುದ್ರ ಪೂಜೆಯಲ್ಲಿ ಪಾಲ್ಗೊಂಡ ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ನಾರಿಯಲ್‌ ಪೂರ್ಣಿಮೆಯ ದಿನ ಸಮುದ್ರಪೂಜೆ ನಡೆಸುವ ಕ್ರಮ. ಆ ದಿನ ಸಮುದ್ರರಾಜನಿಗೆ ಪೂಜೆ ಸಲ್ಲಿಸಿ ಮೀನುಗಾರಿಕೆ ಪ್ರಾರಂಭಿಸುವ ಹಿಂದಿನ ಪರಿಪಾಠದಂತೆ ಮೀನುಗಾರರು ಸಮುದ್ರರಾಜನಿಗೆ ಹಾಲು ಪುಷ್ಪ ಅರ್ಪಿಸಿದ್ದಾರೆ. ಗುಜರಾತ್‌, ಮಹಾರಾಷ್ಟ್ರ , ಕೇರಳ ಮತ್ತು ಕರ್ನಾಟಕದಲ್ಲಿ ಒಂದೇ ದಿನ ಮೀನುಗಾರರು ಸಮುದ್ರಪೂಜೆ ಆಚರಿಸುತ್ತಾರೆ. ಸಮುದ್ರಪೂಜೆ ಮಾಡಿದ ಮಾರನೆ ದಿನದಿಂದ ಮೀನುಗಾರಿಕೆಗೆ ತೆರಳುವುದೆಂಬ ಪರಿಪಾಠ ಇದೆ. ಸರಕಾರದ ನೀತಿಯಿಂದ ಮೀನುಗಾರಿಕೆ ಈ ಮೊದಲೇ ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ಸುರಕ್ಷೆಯ ಮೀನುಗಾರಿಕೆ ನಡೆಯಲಿ ಎಂದರು.

ಮಾಜಿ ಶಾಸಕ ಕೆ. ರಘಪತಿ ಭಟ್‌, ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಕಾರ್ಯದರ್ಶಿ ದಯಾನಂದ ಕೆ. ಸುವರ್ಣ, ವಿವಿಧ ಮೀನುಗಾರಿಕಾ ಸಂಘಟನೆಗಳ ಮುಖಂಡರಾದ ಯಶ್‌ಪಾಲ್‌ ಎ. ಸುವರ್ಣ, ಶಿವಪ್ಪ ಟಿ. ಕಾಂಚನ್‌, ಗೋಪಾಲ ಕುಂದರ್‌, ಯಶೋಧರ್‌ ಅಮೀನ್‌, ಆನಂದ ಪಿ. ಸುವರ್ಣ, ವಿಠಲ ಕರ್ಕೇರ, ದಯಾನಂದ ಕುಂದರ್‌, ರತ್ನಾಕರ ಸಾಲಿಯಾನ್‌, ರಮೇಶ್‌ ಕೋಟ್ಯಾನ್‌, ಗುಂಡು ಬಿ. ಅಮೀನ್‌, ರಾಮಚಂದ್ರ ಕುಂದರ್‌, ಸಾಧು ಸಾಲಿಯಾನ್‌, ಗೋಪಾಲ್‌ ಆರ್‌.ಕೆ., ಕಿಶೋರ್‌ ಪಡುಕರೆ, ದಾಸ ಕುಂದರ್‌, ಕೃಷ್ಣಪ್ಪ ಮರಕಾಲ, ರವಿರಾಜ್‌ ಸುವರ್ಣ, ಸೋಮನಾಥ್‌ ಕಾಂಚನ್‌, ಸುರೇಶ್‌ ಕುಂದರ್‌, ನಾರಾಯಣ ಕರ್ಕೇರ, ಶೇಖರ್‌ ಜಿ. ಕೋಟ್ಯಾನ್‌, ಜನಾರ್ದನ ತಿಂಗಳಾಯ, ಹರಿಶ್ಚಂದ್ರ ಕಾಂಚನ್‌, ತಿಮ್ಮ ಮರಕಾಲ, ರಾಘವ ಜಿ.ಕೆ., ಕಿಶೋರ್‌ ಡಿ. ಸುವರ್ಣ, ಸಂತೋಷ್‌ ಸಾಲ್ಯಾನ್‌, ಜಲಜ ಕೋಟ್ಯಾನ್‌, ಬೇಬಿ ಎಚ್‌. ಸಾಲ್ಯಾನ್‌, ಉದ್ಯಮಿ ಪ್ರಸಾದ್‌ರಾಜ್‌ ಕಾಂಚನ್‌, ಟಿ. ರಾಘವೇಂದ್ರ ರಾವ್‌, ಪ್ರಖ್ಯಾತ್‌ ಶೆಟ್ಟಿ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

No Comments

Leave A Comment