Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

200 ಮೀಟರ್ ಮಿಂಚಿನ ಓಟದಲ್ಲಿ ಉಸೇನ್ ಬೋಲ್ಟ್ ಗೆ ಚಿನ್ನ

sain-ರಿಯೋ ಡಿ ಜನೈರೋ: ಜಮೈಕಾದ ಮಿಂಚಿನ ಓಟಗಾರ ಉಸೇನ್‌ ಬೋಲ್ಟ್ ಒಲಿಂಪಿಕ್ಸ್ ನ 200 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ತಮ್ಮ ಕೊರಳಿಗೆ ಹಾಕಿಕೊಳ್ಳುವ ಮೂಲಕ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ.

ಜಮೈಕನ್ ಮಿಂಚಿನ ಓಟಗಾರ ಬೋಲ್ಟ್ 19.78ಸೆಕೆಂಡ್ಸ್ ಗಳಲ್ಲಿ 200 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ಬಂಗಾರದ ಪದಕ ಗೆದ್ದಿದ್ದಾರೆ. ಕೆನಡಾದ ಆಂಡ್ರೆ ಡೆ ಗ್ರಾಸ್ಸೆ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದರೆ, ಕ್ರಿಸ್ಟೋಫ್ ಲೆಮೆಟ್ರಿ ಕಂಚಿನ ಪದಕ ಗೆದ್ದಿದ್ದಾರೆ.

ಬೋಲ್ಟ್ ಅವರು ತಮ್ಮದೇ ಹಿಂದಿನ ದಾಖಲೆ ಮುರಿಯುವ ಕನಸು ಈ ಬಾರಿ ನನಸಾಗಿಲ್ಲ, ಬೋಲ್ಟ್ ಅವರ ದಾಖಲೆ 200 ಮೀಟರ್ ಓಟವನ್ನು 19.78 ಸೆಕೆಂಟ್ ಗಿಂತ ಅರ್ಧ ಸೆಕೆಂಡ್ ಮೊದಲೇ ಪೂರ್ಣಗೊಳಿಸಿದ್ದರು.

ರಿಯೋ ಒಲಿಂಪಿಕ್ಸ್ ನಲ್ಲಿ ಭಾನುವಾರ ರಾತ್ರಿಯ 100 ಮೀಟರ್ ಓಟವನ್ನು  9.81 ಸೆಕೆಂಡ್ಸ್‌ಗಳಲ್ಲಿ ಕ್ರಮಿಸುವ ಮೂಲಕ ಬೋಲ್ಟ್ ಬಂಗಾರದ ಪದಕ ಗೆದ್ದಿದ್ದರು. ಆ ಮೂಲಕ 100 ಮೀಟರ್ ನಲ್ಲಿ ಹ್ಯಾಟ್ರಿಕ್ ಬಂಗಾರ ಗೆದ್ದಿದ್ದರು.

No Comments

Leave A Comment