Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ನರಸಿಂಗ್ ಯಾದವ್ ಗೆ 4 ವರ್ಷ ನಿಷೇಧ; ಒಲಿಂಪಿಕ್ಸ್ ಕನಸು ನುಚ್ಚುನೂರು

Narsingh-Yadavರಿಯೋ ಡಿ ಜನೈರೋ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಬರೊಬ್ಬರಿ ನಾಲ್ಕು ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ನಿಷೇಧ ಹೇರಲಾಗಿದೆ.

ವಿವಾದಗಳ ಮೂಲಕವೇ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಕನಸು ಕಾಣುತ್ತಿದ್ದ ನರಸಿಂಗ್ ಯಾದವ್ ಕನಸು ನುಚ್ಚು ನೂರಾಗಿದ್ದು, ಕೇವಲ ಹಾಲಿ ರಿಯೋ ಒಲಿಂಪಿಕ್ಸ್ ಮಾತ್ರವಲ್ಲೇ  ಮುಂಬರುವ 4 ವರ್ಷಗಳ ಕಾಲ ಅವರನ್ನು ಕುಸ್ತಿಯಿಂದ ನಿಷೇಧಹೇರಲಾಗಿದೆ. ರಿಯೊ ಒಲಿಪಿಂಕ್ಸ್ ಪಂದ್ಯವನ್ನಾಡಲು ಕ್ಷಣಗಣನೆ ಆರಂಭವಾಗಿರುವಂತೆಯೇ ಕೋರ್ಟ್ ಆಫ್ ಆರ್ಬಿಟ್ರೇಷನ್  ಫಾರ್ ಸ್ಪೋರ್ಟ್ಸ್ ಸಂಸ್ಥೆ (ಸಿಎಎಸ್)  ನರಸಿಂಗ್ ಯಾದವ್ ಅವರ ವಿಚಾರಣೆ ನಡೆಸಿ ಅವರಿಗೆ ನಾಲ್ಕು ವರ್ಷಗಳ ನಿಷೇಧ ಹೇರಿದೆ.

ಈ ಹಿಂದೆ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿದ್ದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ನಿರ್ಣಯವನ್ನು ಅಂತಾರಾಷ್ಟ್ರೀಯ ಉದ್ದೀಪಮ ಮದ್ದು ತಡೆ ಘಟಕ ಅಂತಾರಾಷ್ಟ್ಕೀಯ ಕ್ರೀಡಾ ವ್ಯಾಜ್ಯಗಳ ನ್ಯಾಯಾಲಯ ಸಿಎಎಸ್ ನಲ್ಲಿ ಪ್ರಶ್ನಿಸಿತ್ತು. ಈ ಹಿನ್ನಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನರಸಿಂಗ್ ಯಾದವ್ ಅವರ ಮೇಲೆ ನಿಷೇಧ ಹೇರಿದೆ. ಸತತ ನಾಲ್ಕು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಉದ್ದೀಪನ ಮದ್ದು ಪತ್ತೆ ಅಂಶಕ್ಕೆ ಸಂಬಂಧಿಸಿದಂತೆ ನರಸಿಂಗ್ ಯಾದವ್ ನೀಡಿದ ಸಮರ್ಥನೆಗಳನ್ನು ಮತ್ತು ಉತ್ತರವನ್ನು ಸಿಎಎಸ್ ಸಾರಾಸಗಟಾಗಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ವಿವಾದಿತ ಭಾರತದ ಕುಸ್ತಿಪಟು ಅಥ್ಲೀಟ್ ನರಸಿಂಗ್ ಯಾದವ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇಂದಿನಿಂದಲೇ ಜಾರಿಯಾಗುವಂತೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.

ಕಳೆದ ಜೂನ್ 25ರಂದು  ನಾಡಾ ನಡೆಸಿದ ಉದ್ದೀಪನ ಮದ್ದು ತಡೆಯಲ್ಲಿ ನರಸಿಂಗ್ ಯಾದವ್ ರಕ್ತದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ  ಅವರನ್ನು ರಿಯೋ ಒಲಿಂಪಿಕ್ಸ್ ನಿಂದ ಕೈ ಬಿಡಲಾಗಿತ್ತು. ಭಾರತದ ಮತ್ತೋರ್ವ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಹಿಂದಿಕ್ಕಿ ರಿಯೋ ಒಲಿಂಪಿಕ್ಸ್ ಗೆ ಸ್ಥಾನಗಿಟ್ಟಿಸಿದ್ದ ನರಸಿಂಗ್ ಯಾದವ್ ಬಳಿಕ ಡೋಪಿಂಗ್ ಟೆಸ್ಟ್ ಪ್ರಕರಣದಿಂದ ವಿವಾದಕ್ಕೀಡಾಗಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ನರಸಿಂಗ್ ಯಾದವ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲದೆ ನಾಡಾ ಕೂಡ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿತ್ತು.

No Comments

Leave A Comment