ಬ್ರಹ್ಮಾವರ: ಊರಿಗೆಂದು ಹೋದವಳು ಕಾಣೆ
ಉಡುಪಿ:ಬ್ರಹ್ಮಾವರದಲ್ಲಿ ಮನೆ ಕೆಲಸ ಹಾಗೂ ಅನಾರೋಗ್ಯದ ವ್ಯಕ್ತಿಗಳನ್ನು ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ (ವಿಳಾಸ: ಓಒಆಅ ಕೈಮರ ಅಂಚೆ, ಚಿಕ್ಕಮಗಳೂರು) ಸುಮಾರು 20ವರ್ಷ ಪ್ರಾಯದ ತಾರಾ ಎಂಬವರು ಫೆಬ್ರವರಿ ತಿಂಗಳಲ್ಲಿ ತನ್ನ ಊರಿಗೆಂದು ಹೋದವರು ಮನೆಗೂ ಹೋಗದೆ, ಕೆಲಸಕ್ಕೂ ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು ಬ್ರಹ್ಮಾಔರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಗೋಧೀ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿ, 4ಅಡಿ 10 ಇಂಚು ಎತ್ತರ ಇದ್ದು, ಕನ್ನಡ ತುಳು ಭಾಷೆ ಬಲ್ಲವರಾಗಿರುತ್ತಾರೆ. ಚೂಡಿದಾರ ಧರಿಸಿರುತ್ತಾರೆ.
ಸದರಿ ಹುಡುಗಿಯ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.