Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 16ನೇ ಶ್ರೀಶಾರದಾ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ...

ಅಮೆರಿಕ ಪರ ಬೆಳಿ ಪದಕ ಗೆದ್ದ ಬೆಂಗಳೂರಿನ ರಾಜೀವ್‌ ರಾಮ್‌!

venus-rajeevರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್‌ ಪದಕ ಪಟ್ಟಿಯಲ್ಲಿ ಭಾರತ ಇನ್ನೂ ಪದಕ ಖಾತೆಯನ್ನೇ ತೆರೆದಿಲ್ಲ. ಈ ಬೆನ್ನಲ್ಲೇ ಬೆಂಗಳೂರು ಮೂಲದ ರಾಜೀವ್‌ ರಾಮ್‌ ಅಮೆರಿಕ ಪ್ರತಿನಿಧಿಸಿ ಮಿಶ್ರ ಡಬಲ್ಸ್‌ ಟೆನಿಸ್‌ನಲ್ಲಿ ಬೆಳ್ಳಿ ಪದಕ
ಗೆದ್ದ ಸಾಧನೆ ಮಾಡಿದ್ದಾರೆ!

ಅಮೆರಿಕದ ವೀನಸ್‌ ವಿಲಿಯಮ್ಸ್‌ ಜತೆಗೂಡಿ ರಾಜೀವ್‌ ರಾಮ್‌ ಒಲಿಂಪಿಕ್ಸ್‌ ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದರು.
ಸೆಮಿಫೈನಲ್‌ನಲ್ಲಿ ಭಾರತದ ಜೋಡಿ ರೋಹನ್‌ ಬೋಪಣ್ಣ-ಸಾನಿಯಾ ಮಿರ್ಜಾ ಜೋಡಿಯನ್ನು ಪರಾಭವಗೊಳಿಸಿದ್ದರು. ಆದರೆ ಫೈನಲ್‌ನಲ್ಲಿ ರಾಜೀವ್‌ ರಾಮ್‌-ವೀನಸ್‌ ಜೋಡಿ ಆಟ ನಡೆಯಲಿಲ್ಲ. ಫೈನಲ್‌ ಹೋರಾಟದಲ್ಲಿ ತಮ್ಮದೇ ದೇಶದ ಬೆಥಾನಿ ಮಾಟೆಕ್‌- ಜಾಕ್‌ ಸಾಕ್‌ ಜೋಡಿ ವಿರುದ್ಧ 6-7 (3/7), 6-1, 10-7 ಸೆಟ್‌ಗಳಿಂದ ಸೋಲು ಕಂಡರು. ಇದರೊಂದಿಗೆ ಬೆಳ್ಳಿ ಪದಕಕ್ಕೆ ರಾಮ್‌- ವಿಲಿಯಮ್ಸ್‌ ತೃಪ್ತಿಪಟ್ಟುಕೊಂಡರು.

5 ಚಿನ್ನದ ದಾಖಲೆ ತಪ್ಪಿಸಿಕೊಂಡ ವೀನಸ್‌:
ಒಲಿಂಪಿಕ್ಸ್‌ನಲ್ಲಿ ಒಟ್ಟಾರೆ 5 ಚಿನ್ನದ ಪದಕ ಗೆಲ್ಲುವ ದಾಖಲೆಯನ್ನು ವೀನಸ್‌ ಕಳೆದುಕೊಂಡಿದ್ದಾರೆ. 2000 ಸಿಡ್ನಿ ಒಲಿಂಪಿಕ್ಸ್‌ನಲ್ಲಿ ವೀನಸ್‌ ಸಿಂಗಲ್ಸ್‌ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ವರ್ಷ ಸಿಡ್ನಿ ಒಲಿಂಪಿಕ್ಸ್‌ ಮಹಿಳಾ ಡಬಲ್ಸ್‌ನಲ್ಲಿ, 2008 ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ, 2012 ಲಂಡನ್‌ ಒಲಿಂಪಿಕ್ಸ್‌ ಮಹಿಳಾ ಡಬಲ್ಸ್‌ನಲ್ಲಿ ಬಂಗಾರದ
ಪದಕ ಗೆದ್ದಿದ್ದರು.

ರಾಜೀವ್‌ಗೆ ಬೆಂಗಳೂರು ಸಂಪರ್ಕ ಹೇಗೆ?
ರಾಜೀವ್‌ ರಾಮ್‌ ತಂದೆತಾಯಿ ಮೂಲತಃ ಬೆಂಗಳೂರಿನವರು. ಅವರು ಅಮೆರಿಕದ ಡೆನ್ವರ್‌ಗೆ ಹೋಗಿ ನೆಲೆಸಿದರು. ಅಲ್ಲಿಂದ ಇಂಡಿಯಾನ ಪೊಲೀಸ್‌ ಗೆ ಚಲಿಸಿದರು. ಈ ಮಧ್ಯೆ ಅಮೆರಿಕದಲ್ಲೇ ಹುಟ್ಟಿದ ರಾಜೀವ್‌ ಸಹಜವಾಗಿ ಅಲ್ಲಿನ ಪೌರತ್ವ ಪಡೆದರು. ವಿಶೇಷವೆಂದರೆ ರಾಜೀವ್‌ ಗೆ ಭಾರತವನ್ನು ಪ್ರತಿನಿಧಿಸುವ ಆಸೆಯಿತ್ತಂತೆ. ಆದರೆ ಪಾಸ್‌ಪೋರ್ಟ್‌ನಂತಹ ತಾಂತ್ರಿಕ ತೊಂದರೆಗಳಿಂದ ಆ ಯೋಜನೆಯನ್ನು ಕೈಬಿಟ್ಟಿದ್ದಾರೆ
ಎಂದು ಹೇಳಲಾಗಿದೆ.

No Comments

Leave A Comment