Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಉಗ್ರವಾದವನ್ನು ಭಾರತ ಎಂದಿಗೂ ಸಹಿಸುವುದಿಲ್ಲ: ಪ್ರಧಾನಿ ಮೋದಿ

modi-I-dayನವದೆಹಲಿ: ಮುಗ್ಧರು ಹಾಗೂ ಅಮಾಯಕರನ್ನು ಹಿಂಸಿಸುವ, ಬಲಿ ತೆಗೆದುಕೊಳ್ಳುವ ಉಗ್ರ ಕೃತ್ಯಗಳನ್ನು, ಉಗ್ರವಾದಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಭಾರತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಪುರಾತನ ದೇಶವಾಗಿದೆ. ನಮ್ಮ ದೇಶ ಧೀರ್ಘಕಾಲಿಕ ಇತಿಹಾಸವನ್ನು ಹೊಂದಿದೆ. ದೇಶಕ್ಕಾಗಿ ಸಾಕಷ್ಟು ಮಂದಿ ತ್ಯಾಗ ಮಾಡಿದ್ದಾರೆ. ಇಂದು ನಾವು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು ನೆನೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೆ, ಆದನ್ನು ಪರಿಹರಿಸಿಕೊಳ್ಳುವುದಕ್ಕೆ 125 ಕೋಟಿ ಮಿದುಳುಗಳಿವೆ. ಎಂತಹ ಸಮಸ್ಯೆ ಎದುರಾದರೂ ಅದನ್ನು ಎದುರಿಸಲು ಭಾರತ ಸಿದ್ಧವಿದೆ. ಇಂದು ನಾವು ಸ್ವಯಂ ಆಡಳಿತದಿಂದ ಉತ್ತಮ ಆಡಳಿತದೆಡೆಗೆ ಹೆಜ್ಜೆ ಹಾಕಿದ್ದೇವೆ. ಜವಾಬ್ದಾರಿ ಮತ್ತು ಹೊಣೆಗಾರಿಕಾ ಕೆಲಸದಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ.

ಈ ಹಿಂದೆ ಉನ್ನತ ಆಸ್ಪತ್ರೆಗೆ ಹೋಗಬೇಕೆಂದರೆ ದೀರ್ಘಕಾಲದವರೆಗೂ ಕಾಯಬೇಕಿತ್ತು. ಆದರೆ, ಇಂದು ಆನ್ ಲೈನ್ ಮಾಧ್ಯಮಗಳು ಅಭಿವೃದ್ಧಿಗೊಂಡಾಗಿನಿಂದ ಆನ್ ಲೈನ್ ನೋಂದಾವಣಿ ಮಾಡಿಕೊಂಡು ಬದಲಾವಣೆಯನ್ನು ಕಂಡುಕೊಂಡಿದ್ದೇವೆ. ಇಂದು ನಾವು ಕೇವಲ 1 ನಿಮಿಷದಲ್ಲಿ 15 ಸಾವಿರ ರೈಲು ಟಿಕೆಟ್ ಗಳನ್ನು ಪಡೆಯಬಹುದಾಗಿದೆ. ಆನ್ ಲೈನ್ ಮೂಲಕವೇ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ನಾವು ಆರಂಭಿಸಿದ್ದೇವೆ. ಇಂದು ನಾವು 2-3 ವಾರದೊಳಗಾಗಿ ಹಣವನ್ನು ಸುಲಭವಾಗಿ ಹಿಂಪಡೆಯಬಹುದಾಗಿದೆ.

ಪಾಸ್ ಪೋರ್ಟ್ ಗಳಿಗಾಗಿ ಸಾಕಷ್ಟು ಪ್ರಕ್ರಿಯೆಗಳು ಪೂರ್ಣಗಳೊಳ್ಳುವವರೆಗೂ ಈ ಹಿಂದೆ ಕಾಯಬೇಕಿತ್ತು. ಇದಕ್ಕಾಗಿ ಸಾಕಷ್ಟು ತಪಾಸಣಾ ಪ್ರಕ್ರಿಯೆಗಳಿದ್ದವು. ಒಂದು ಪಾಸ್ ಪೋರ್ಟ್ ಮಾಡಿಸಿಕೊಳ್ಳಬೇಕೆಂದರೆ ಕನಿಷ್ಠ ಪಕ್ಷ 4-6 ತಿಂಗಳುಗಳ ಕಾಲ ಕಾಯಬೇಕಿದ್ದು. ಆದರೆ ಇಂದು ಕೇವಲ ವಾರಗಳಲ್ಲಿ ಪಾಸ್ ಪೋರ್ಟ್ ಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ನಾವು ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಇಂದು ನಾವು ಹಳ್ಳಿಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಒಂದು ದಿನಗಲ್ಲಿ 100 ಕಿ.ಮೀ ನಷ್ಟು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ದಿನದಲ್ಲಿ 70-75 ಕಿ.ಮೀ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು.

60 ವರ್ಷಗಳಲ್ಲಿ 14 ಜನರು ಗ್ಯಾಸ್ ಸಂಪರ್ಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ನಮ್ಮ ಸರ್ಕಾರ 60 ವಾರಗಳಲ್ಲಿ 4 ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನು ನೀಡಿದೆ. ಹಣದುಬ್ಬರವನ್ನು ಶೇ.6ಕ್ಕಿಂತ ಹೆಚ್ಚಾಗಲು ನಾವು ಬಿಟ್ಟಿಲ್ಲ. 2 ವರ್ಷಗಳಿಂದ ದೇಶದಲ್ಲಿ ಸಂಭವಿಸಿದ ಬರ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಸವಾಲನ್ನು ಎದುರಿಸಬೇಕಾಗಿ ಬಂದು. ಇದರ ಪರಿಣಾಮ ಬೆಲೆ ಏರಿಕೆಯಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಎನ್ ಡಿಎ ಸರ್ಕಾರ ರೈತರಿಗೆ ಮಾಡಿದ ಸಹಾಯದ ಕುರಿತಂತೆ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ರೈತರು ಪಾತ್ರ ಆಪಾರವಾದದ್ದು. ಸ್ವಾತಂತ್ರ್ಯೋತ್ಸವ ದಿನದಂದು ಅನ್ನದಾತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಶ್ರಮದಿಂದಾಗಿ ದೇಶದಲ್ಲಿ ಆಹಾರ ಉತ್ಪಾದನೆಯು ಶೇ.20ರಷ್ಟು ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ರೈತರಿಗೆ ಸಹಾಯಕವಾಗುವ ಸಲುವಾಗಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ದೇಶದ ರೈತರಿಗೆ ಸರಿಯಾದ ರೀತಿಯಲ್ಲಿ ನೀರು ದೊರಕಿದ್ದೇ ಆದರೆ, ನಮ್ಮ ಭೂಮಿಯನ್ನು ಅವರು ಚಿನ್ನವಾಗಿ ಮಾರ್ಪಾಡು ಮಾಡುತ್ತಾರೆ. 2022ರೊಳಗಾಗಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ನನ್ನ ಕನಸಾಗಿದೆ. ಈ ಕನಸನ್ನು ವಾಸ್ತವಕ್ಕೆ ತರಲಾಗುತ್ತದೆ.

ಮುದ್ರಾ ಯೋಜನೆಯ ಉಪಯೋಗವನ್ನು 3.5 ಕೋಟಿ ಜನರು ಪಡೆದುಕೊಳ್ಳುತ್ತಿದ್ದಾರೆ. ಬಡವರ ಉನ್ನತಿಗಾಗಿ ನಾವು ಬದ್ಧರಾಗಿದ್ದೇವೆ. ಮಹಿಳೆಯರ ರಕ್ಷಣೆಯೇ ನಮ್ಮ ಗುರಿಯಾಗಿದೆ. ಮಹಿಳೆಯರ ಸಬಲೀಕರಣವಾದ್ರೆ ಬಡ ಕುಟುಂಬಗಳು ಅಭಿವೃದ್ಧಿ ಹೊಂದುತ್ತವೆ. ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರವಾಗಿದೆ. ಮಹಿಳೆಯರ ಸಬಲೀಕರಣವಾದರೆ ಬಡ ಕುಟುಂಬಗಳೂ ಅಭಿವೃದ್ಧಿ ಹೊಂದುತ್ತೆ. ಈ ನಿಟ್ಟಿನಲ್ಲಿ ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆಯನ್ನು ಜಾರಿಗೆ ತಂದಿದ್ದೇವೆ.

ನಾವೆಲ್ಲರೂ ಸಮಾಜದ ಕೆಡಕುಗಳ ವಿರುದ್ಧ ಹೋರಾಡಬೇಕಿದೆ. ಸಾಮಾಜಿಕ ನ್ಯಾಯದ ಬಲದಿಂದಷ್ಟೇ ಸ್ವಾಸ್ಥ್ಯ ಭಾರತ ನಿರ್ಮಾಣ ಸಾಧ್ಯ. ಹೀಗಾಗಿ ನಾವು ಸಾಮಾಜಿಕ ನ್ಯಾಯಕ್ಕೆ ನಾವು ಹೆಚ್ಚು ಒತ್ತುಕೊಡಬೇಕಿದೆ. ದಲಿತರು, ಆದಿವಾಸಿಗಳು, ಹಿಂದುಳಿದವರನ್ನು ಬಲಪಡಿಸಬೇಕಿದೆ. ಆಗಷ್ಟೇ ನಾವು ಸಮರ್ಥ ಭಾರತವನ್ನ ನಿರ್ಮಾಣ ಮಾಡಬಹುದು. ದೇಶದಲ್ಲಿ ಕೂಲಿ ಕಾರ್ಮಿಕರಿಗೆ ಒನ್ ಪ್ರೈಸ್ ಯೋಜನೆ ಜಾರಿಗೆ ತರಲಾಗಿದೆ.

ದೇಶದ ಅಭಿವೃದ್ಧಿಗೆ ಯುವ ಶಕ್ತಿ ಅತ್ಯಂತ ಪ್ರಮುಖವಾದದ್ದು, ಯುವ ಶಕ್ತಿಯಿದ್ರೆ ಯಾವುದೇ ದೇಶವಾದರೂ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಹೀಗಾಗಿ ದೇಶದಲ್ಲಿನ ಯುವಕರನ್ನ ಬಲಪಡಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಯುವ ಜನರ ಆಕಾಂಕ್ಷೆಗಳ ಈಡೇರಿಕೆಗೂ ನಾವು ಕ್ರಮ ಕೈಗೊಂಡಿದ್ದೇವೆ. ದೇಶದ ಕೋಟ್ಯಾಂತರ ಯುವ ಜನರಿಗೆ ಉದ್ಯೋಗಾವಕಾಶ ಸಿಕ್ಕಿದೆ ಎಂದಿದ್ದಾರೆ.

ಭಾರತ ಗುರ್ತಿಕೆ ಕಂಡುಕೊಳ್ಳುದರ ಬಗ್ಗೆ ನಾವು ಹೆಚ್ಚಿ ಗಮನ ಹರಿಸುತ್ತಿದ್ದೇವೆ. ಸುಧಾರಣೆ, ಸಾಧನೆ, ಬದಲಾವಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದ್ದು, ಪ್ರತೀಯೊಂದು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದೇವೆ. ನಮ್ಮ ಸರ್ಕಾರ ನೀತಿ ಹಾಗೂ ಧೋರಣೆಗಳು ಮುಕ್ತವಾಗಿವೆ. ಇಂದು ನಮ್ಮ ದೇಶ ಅಂತರ್ ಸಂಪರ್ಕ ಮತ್ತು ಪರಸ್ಪರಾವಲಂಬಿತ ದೇಶವಾಗಿ ನಿರ್ಮಾಣವಾಗುತ್ತಿದೆ. ವ್ಯವಹಾರಿಕ ಕ್ಷೇತ್ರದಲ್ಲಿನ ನಮ್ಮ ಸ್ಥಾನ ಉನ್ನತ ಮಟ್ಟಕ್ಕೇರುತ್ತಿದೆ. ಇಂದು ಭಾರತ ಅಭಿವೃದ್ಧಿಯನ್ನು ವಿಶ್ವಸಂಸ್ಥೆ ಗುರ್ತಿಸುತ್ತಿದೆ. ವಿಶ್ವಸಂಸ್ಥೆ ಹೇಳಿರುವಂತೆ ಶೀಘ್ರದಲ್ಲಿಯೇ ಭಾರತ ಶೀಘ್ರದಲ್ಲಿ ಟಾಪ್ 3 ಸ್ಥಾನಕ್ಕೆ ಏರಲಿದೆ.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)  ದೇಶದ ಆರ್ಥಿಕತೆಗೆ ಬಲವನ್ನು ನೀಡಿದೆ. ಜಿಎಸ್ ಟಿ ಮಸೂದೆಗೆ ಬೆಂಬಲ ಸೂಚಿಸಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಂದೇ ದೇಶ, ಒಂದೇ ಚೌಕಟ್ಟು ಮತ್ತು ಒಂದು ಬೆಲೆ ಕುರಿತು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪಾಕ್ ವಿರುದ್ಧ ಮೋದಿ ವಾಗ್ದಾಳಿ

ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನದ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ಮೋದಿಯವರು, ಬಲೂಚಿಸ್ತಾನದ ಜನರು ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇದು ಮಾನವೀಯತೆಗೆ ಸಿಕ್ಕ ಒಂದು ನಿದರ್ಶನವೇ ಎಂದು ಹೇಳಬಹುದು.

ವಾಸ್ತವತೆ ಹೀಗಿದ್ದರೂ ಕೆಲ ದೇಶಗಳು ಉಗ್ರವಾದವನ್ನು ಬೆಂಬಲಿಸುವ ದೇಶವನ್ನು ವೈಭವೀಕರಿಸುತ್ತವೆ. ಆ ದೇಶವನ್ನು ಗುಣಗಾನ ಮಾಡುತ್ತವೆ. ಉಗ್ರವಾದ, ನಕ್ಸಲ್ ವಾದ, ಹಿಂಸೆ, ಅತ್ಯಾಚಾರಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಉಗ್ರವಾದವನ್ನು ಬೆಂಬಲಿಸುವುದು ಅತೀ ದೊಡ್ಡ ಅಪರಾಧವಾಗಿದೆ ಎಂದು ಹೇಳಿದರು.

ಪಾಕಿಸ್ತಾನದ ಪೇಶಾವರದಲ್ಲಿ ಸಾಕಷ್ಟು ಮುಗ್ಧ ಮಕ್ಕಳು, ಅಮಾಯಕ ಜೀವಗಳನ್ನು ನಿಷ್ಕರುಣಿಗಳು ಬಲಿ ಪಡೆದುಕೊಂಡರು. ಪೇಶಾವರ ದಾಳಿ ಘಟನೆಗೆ ಭಾರತೀಯರು ಮರುಗಿದ್ದರು. ಒಂದೆಡೆ ಉಗ್ರರು ದುಷ್ಕೃತ್ಯ ನಡೆಸುತ್ತಿದ್ದರೆ ಮತ್ತೊಂದೆಡೆ ಸಂಭ್ರಮಾಚರಣೆಯನ್ನು ಮಾಡುತ್ತಿದ್ದರು. ಇಂತಹ ವಿಕೃತ ಕೆಲಸವನ್ನು ಭಾರತ ಬೆಂಬಲಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

No Comments

Leave A Comment