Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮೋದಿಗೆ ಶಾಕ್‌ ನೀಡಿದ ಸಮೀಕ್ಷೆ: ನಿತೀಶ್‌-ಲಾಲು ಮೈತ್ರಿಗೆ ಬಹುಮತ

lalu-nitish-ಹೊಸದಿಲ್ಲಿ:  ಬಿಹಾರ ವಿಧಾನಸಭೆ ಚುನಾವಣೆಯ ಕಾವು ನಿಧಾನವಾಗಿ ತೀವ್ರಗೊಳ್ಳುತ್ತಿರುವ ಮಧ್ಯೆಯೇ, ಶನಿವಾರವಷ್ಟೇ ಬಿಜೆಪಿ ಪರ ಪ್ರಚಾರ ಮಾಡಿ ಹೋದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಸಿವಿಸಿ ತರುವ ಸುದ್ದಿಯೊಂದು ಬಂದಿದೆ. ಬಿಜೆಪಿ ವಿರುದ್ಧ ಟೊಂಕಕಟ್ಟಿರುವ ಜೆಡಿಯು- ಆರ್‌ಜೆಡಿ ಮೈತ್ರಿಕೂಟವು ಕಾಂಗ್ರೆಸ್‌ ಜೊತೆಗೂಡಿ ಬಹುಮತ ಪಡೆಯ ಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಯೊಂದು ತಿಳಿಸಿದೆ.

ಎಬಿಪಿ ನ್ಯೂಸ್‌-ನೀಲ್ಸನ್‌ ನಡೆಸಿ ರುವ ಸಮೀಕ್ಷೆ ಪ್ರಕಾರ ಒಟ್ಟು 243 ಸ್ಥಾನಗಳಲ್ಲಿ ಜೆಡಿಯು-ಆರ್‌ಜೆಡಿ ಕೂಟ 129 ಸ್ಥಾನ ಪಡೆಯಬಹುದು. ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು 112 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ.

 ನಿತೀಶ್‌ ಸಿಎಂ: 
ಸಮೀಕ್ಷೆ ಪ್ರಕಾರ ನಿತೀಶ್‌ ಮೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಶೇ.52 ಜನರು ನಿತೀಶ್‌ ಕುಮಾರ್‌ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ. ಶೇ.42ರಷ್ಟು ಜನ ಬಿಜೆಪಿಯ ಸುಶೀಲ್‌ ಮೋದಿ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ.  ಸಮೀಕ್ಷೆಯಲ್ಲಿ ಅರ್ಧದಷ್ಟು ಜನ ಲಲಿತ್‌ ಮೋದಿ ವಿವಾದದಿಂದ ಕೇಂದ್ರದ ಎನ್‌ಡಿಎ ಸರಕಾರದ ವರ್ಚಸ್ಸು ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ. ಸುಮಾರು 8,854 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಎಬಿಪಿ ನ್ಯೂಸ್‌ ಸಮೀಕ್ಷೆ

ಒಟ್ಟು ಸ್ಥಾನ    243
ಬಹುಮತಕ್ಕೆ    122
ಜೆಡಿಯು+    129
ಬಿಜೆಪಿ+    112

ಬಿಜೆಪಿ ವಿರುದ್ಧ ಆಪ್‌ ಪ್ರಚಾರ…

ಹೊಸದಿಲ್ಲಿ:  ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ನಡುವಿನ ಜಿದ್ದಾಜಿದ್ದಿ ಮುಂದುವರಿದಿದ್ದು, ಇದೀಗ ವಿಧಾನಸಭಾ ಚುನಾವಣಾ ಅಖಾಡಕ್ಕೆ ಸಿದ್ಧವಾಗಿರುವ ಬಿಹಾರಕ್ಕೂ ಕಾಲಿಟ್ಟಿದೆ. ಬಿಜೆಪಿ ವಿರುದ್ಧ ಪ್ರಚಾರ ಕೈಗೊಳ್ಳುವ ಮೂಲಕ ಬಿಹಾರದಲ್ಲಿ ಪರೋಕ್ಷವಾಗಿ ನಿತೀಶ್‌ಕುಮಾರ್‌ ಅವರ ಜೆಡಿಯು ಪರ ಪ್ರಚಾರಕ್ಕೆ ಎಎಪಿ ಸನ್ನದ್ಧವಾಗಿದ್ದು, ಅದಕ್ಕಾಗಿ ತಂಡ ಬಿಹಾರಕ್ಕೆ ಕಳುಹಿಸುವುದಾಗಿ ತಿಳಿಸಿದೆ. 20 ಜನರ ತಂಡ ಬಿಹಾರಕ್ಕೆ ತೆರಳಲಿದೆ. ಇವರು ಯಾವುದೇ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವುದಿಲ್ಲ. ಆದರೆ, ಬಿಜೆಪಿ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಎಎಪಿ ವಕ್ತಾರ ಆಶುತೋಷ್‌ ಹೇಳಿದ್ದಾರೆ. ಮತ  ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಬಾರದೆಂಬ ಕಾರಣ ಆಪ್‌ ಸ್ಪರ್ಧಿಸುತ್ತಿಲ್ಲ ಎಂದವರು ಹೇಳಿದ್ದಾರೆ.

No Comments

Leave A Comment