Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕಾರ್ಗಿಲ್‌ ಹುತಾತ್ಮರಿಗೆ ಪರ್ರಿಕರ್‌, 3 ಸೇನಾ ನಾಯಕರಿಂದ ಗೌರವ ನಮನ

383908-lನವದೆಹಲಿ : ದೇಶದಾದ್ಯಂತ 16 ನೇ ಕಾರ್ಗಿಲ್‌ ವಿಜಯ ದಿವಸವನ್ನು ಭಾನುವಾರ ಆಚರಿಸಲಾಗುತ್ತಿದೆ. ದೆಹಲಿಯ ಅಮರ್‌ ಜವಾನ್‌‌ಜ್ಯೋತಿ ಯಲ್ಲಿ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ,ಮೂರೂ ಸೇನೆಯ ದಂಡನಾಯಕರು ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.

ಭೂಸೇನಾ ದಂಡನಾಯಕ ಜನರಲ್‌ ದಲ್‌ಬೀರ್‌ ಸಿಂಗ್‌ ,ಏರ್‌ ಚೀಫ್ ಮಾರ್ಷಲ್‌ ಅರೂಪ್‌ ರಾಹಾ ,ನೌಕಾಪಡೆ ದಂಡನಾಯಕ ಎಡ್ಮಿರಲ್‌ ಆರ್‌.ಕೆ ಧೋವನ್‌ ಅವರು ಗೌರವ ನಮನ ಸಲ್ಲಿಸಿದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ನನ್ನ ಸಾವಿರ ಸಾವಿರ ಬಾರಿ  ನಮಿಸುತ್ತೇನೆ .ಕಾರ್ಗಿಲ್‌ ವಿಜಯ ದಿವಸ ನಮಗೆ ಸೈನಿಕರ ಶೌರ್ಯ ,ಬಲಿದಾನ ಮತ್ತು ತ್ಯಾಗದ ನೆನಪು ಮಾಡಿ ಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಜಮ್ಮುವಿನ  ದ್ರಾಸ್‌ನಲ್ಲಿರುವ  ಕಾರ್ಗಿಲ್‌ ಹುತಾತ್ಮರ ಸ್ಮಾರಕದಲ್ಲಿ ಸೈನಿಕರು,  ಯೋಧರ ಕುಟುಂಬದ ಸದಸ್ಯರು ಗೌರವ ನಮನ ಸಲ್ಲಿಸಿದರು.

No Comments

Leave A Comment