Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಯಾಕೂಬ್‌ ಮೆನನ್‌ನನ್ನು ಗಲ್ಲಿಗೇರಿಸುವುದು ಬೇಡ : ಸಲ್ಮಾನ್‌ ಖಾನ್‌

salmankhaಮುಂಬಯಿ : 1993ರ ಮುಂಬೈ ಸ್ಫೋಟದ ರೂವಾರಿ ಯಾಕೂಬ್‌ ಮೆಮನ್‌ನನ್ನು ಜು.30ರಂದು ನೇಣಿಗೇರಿಸಲು ಸರಕಾರ ನಿರ್ಧರಿಸಿರುವ ಬೆನ್ನಲ್ಲೆ ಅತನ ಪರವಾಗಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಬ್ಯಾಟ್‌ ಬೀಸಿದ್ದಾರೆ.

”ಮುಂಬೈ ಸ್ಫೋಟದ  ನಿಜವಾದ ಅಪರಾಧಿ ಯಾಕೂಬ್‌ ಸಹೋದರ ಟೈಗರ್‌ ಮೆಮನ್‌ ಆತನನ್ನು ಗಲ್ಲಿಗೇರಿಸಬೇಕೆ ಹೊರತು ನಿರಪರಾಧಿಯಾಗಿರುವ ಯಾಕೂಬ್‌ನನ್ನು ಗಲ್ಲಿಗೇರಿಸುವುದು ಬೇಡ” ಎಂದು ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

”ನಾನು ಕಳೆದ ಮೂರು ದಿನಗಳಿಂದ ಯಾಕೂಬ್‌ ಪರ ವಾಗಿ ಟ್ವೀಟ್‌ ಮಾಡಬೇಕೆಂದು ಯೋಚಿಸಿದ್ದೆ,ಆದರೆ ಭಯದಿಂದ ಹಿಂಜರಿದಿದ್ದೆ.ಇದೀಗ ಭಯ ಬದಿಗೊತ್ತಿ ಅಂತಿಮವಾಗಿ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ” ಎಂದು ಟ್ವೀಟರ್‌ನಲ್ಲಿ  ಸಲ್ಮಾನ್‌ ಖಾನ್‌ ಬರೆದಿದ್ದಾರೆ.

”ಯಾಕೂಬ್‌ನನ್ನು ನಂಬಿಕೊಂಡು ಆತನ ಕುಟುಂಬವಿದೆ. ಅವನನ್ನು ಗಲ್ಲಿಗೇರಿಸಬೇಡಿ, ತಲೆ ಮರೆಸಿಕೊಂಡಿರುವ ಟೈಗರ್ ಮೆಮನ್ ನನ್ನ  ಹಿಡಿದು ಪರೇಡ್‌ ನಡೆಸಿ ಗಲ್ಲಿಗೇರಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಸಲ್ಮಾನ್‌ ತಂದೆಯಿಂದ ವಿರೋಧ 

ಯಾಕೂಬ್‌ ಪರ ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿರುವುದಕ್ಕೆ ತಂದೆ  ಸಲೀಂ ಖಾನ್‌ ಅವರು ವಿರೋಧ ವ್ಯಕ್ತ ಪಡಿಸಿದ್ದು, ಮಾಹಿತಿ ಕೊರತೆಯಿಂದ ಸಲ್ಮಾನ್‌ ಯಾಕೂಬ್‌ ಪರ ಟ್ವೀಟ್‌ ಮಾಡಿದ್ದಾನೆ ಎಂದಿದ್ದಾರೆ.

ಇದೀಗ ನಾಗ್ಪುರ ಸೆಂಟ್ರಲ್‌ ಜೈಲಿನಲ್ಲಿ ಮೆಮನ್‌ನ ಕೊರಳಿಗೆ ಕುಣಿಕೆ ಬಿಗಿಯಲು ಪೂರ್ವ ತಯಾರಿಗಳು ಭರದಿಂದ ನಡೆಯುತ್ತಿವೆ. ಜೈಲಿನ ಅಧಿಕಾರಿಗಳು ಯಾಕೂಬ್‌ನನ್ನು ಗಲ್ಲಿಗೇರಿಸುವ ಸಂಬಂಧ ರಿಹರ್ಸಲ್‌ಗ‌ಳನ್ನು ಮತ್ತು ಸತತ ಸಭೆಗಳನ್ನು ನಡೆಸತೊಡಗಿದ್ದಾರೆ.

No Comments

Leave A Comment