Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

50ಸಾವಿರ ಕೋಟಿಗಿಂತ ಹೆಚ್ಚು ಪ್ಯಾಕೇಜ್ ಕೊಡ್ತೇವೆ; ಬಿಹಾರಕ್ಕೆ ಮೋದಿ

narendra-Mಪಾಟ್ನಾ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಹಾರದ ಪಾಟ್ನಾದಲ್ಲಿ ವಿವಿಧ ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡುತ್ತ, ನಾನು ಈ ಹಿಂದೆ ನಿಮಗೆ ಭರವಸೆ ನೀಡಿದಂತೆ ರಾಜ್ಯಕ್ಕೆ 50 ಸಾವಿರ ಕೋಟಿಗಿಂತಲೂ ಹೆಚ್ಚು ಪ್ಯಾಕೇಜ್ ನೀಡುತ್ತೇನೆ. ಆದರೆ ಅದು ಈಗಲ್ಲ, ಸೂಕ್ತ ಸಮಯದಲ್ಲಿ ನೀಡುತ್ತೇನೆ ಎಂದು ಹೇಳಿದರು.

ಶನಿವಾರ ಪಾಟ್ನಾದಲ್ಲಿ ಐಐಟಿ ಉದ್ಘಾಟನೆ, 76 ಸಾವಿರ ಕೋಟಿ ರೂಪಾಯಿಯ ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆ, 10 ಸಾವಿರ ಕೋಟಿ ರೂಪಾಯಿಯ ಜಗದೀಶ್ ಪುರ್, ಹಲ್ದಿಯಾ ಗ್ಯಾಸ್ ಪೈಪ್ ಲೈನ್ ಯೋಜನೆಗೆ ಚಾಲನೆ ನೀಡಿದರು.

ಒಂದು ವೇಳೆ ನಮಗೆ ಬಡತನ ವಿರುದ್ಧ ಹೋರಾಡಬೇಕಾದ್ರೆ ಅಭಿವೃದ್ಧಿ ಮಾಡಬೇಕಾಗಿದೆ. ಅನಕ್ಷರತೆ ವಿರುದ್ಧ ಹೋರಾಟ ಮಾಡಬೇಕಾದರೆ ಅಭಿವೃದ್ಧಿ ಮಾಡಬೇಕಾಗಿದೆ. ರಾಜ್ಯಗಳೂ ಅಭಿವೃದ್ಧಿ ಬಗ್ಗ ಸ್ಪರ್ಧಾತ್ಮಕವಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಮೋದಿ ಹೇಳಿದರು.

ಲೋಕಸಭಾ ಚುನಾವಣೆಗೂ ಮುನ್ನ ಬಿಹಾರಕ್ಕೆ ಆಗಮಿಸಿದ್ದಾಗ, 50 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದೆ. ಆ ನಿಟ್ಟಿನಲ್ಲಿ ಬಿಹಾರ ಏಳಿಗೆ ಕಾಣಬೇಕಾಗಿದೆ. ನಾವು ಅದಕ್ಕಾಗಿ 50 ಸಾವಿರ ಕೋಟಿಗಿಂತಲೂ ಹೆಚ್ಚಿನ ಪ್ಯಾಕೇಜ್ ನೀಡುತ್ತೇವೆ. ಇದು ನನ್ನ ಭರವಸೆ ಎಂದು ಪ್ರಧಾನಿ ತಿಳಿಸಿದರು. ಆದರೆ ನಾನು ಈ ವಿಶೇಷ ಪ್ಯಾಕೇಜ್ ಅನ್ನು ಸರಿಯಾದ ಸಮಯಕ್ಕೆ ಘೋಷಿಸುತ್ತೇನೆ, ಈಗಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.

ನಿತೀಶ್ ಜೀ ನಮ್ಮ ಸರ್ಕಾರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಾವು ರಾಜ್ಯ ಸರ್ಕಾರದ ಜೊತೆಗೂಡಿ ಕೆಲಸ ಮಾಡಲು ಸಿದ್ಧ. ಬಿಹಾರದಲ್ಲಿ ಅಭಿವೃದ್ಧಿಯೇ ನಮ್ಮ ಪ್ರಮುಖ ಅಜೆಂಡವಾಗಿದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.

No Comments

Leave A Comment